ಅಮಾವಾಸ್ಯೆಯಿಂದಾಗಿ ಕಾಂಗ್ರೆಸ್ ಸಮಾವೇಶ ಮುಂದಕ್ಕೆ!

ಬೆಂಗಳೂರು, ಡಿ.11 : ಬೆಳಗಾವಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕಾಗಿ ಹಮ್ಮಿಕೊಂಡಿದ್ದ ಸಮಾವೇಶದ ದಿನಾಂಕ ಬದಲಾವಣೆಯಾಗಿದೆ, ಇದಕ್ಕೆ ಕಾರಣ ಅಮಾವಾಸ್ಯೆ. ಹೌದು ಬೆಳಗಾವಿಯಲ್ಲಿನ ಕಾಂಗ್ರೆಸ್ ಸಮಾವೇಶ ಡಿಸೆಂಬರ್ 21ರ ಬದಲಾಗಿ 28ಕ್ಕೆ ನಡೆಯಲಿದೆ.

ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಕಾಂಗ್ರೆಸ್ ಡಿ. 21ರಂದು ಬೆಳಗಾವಿಯಲ್ಲಿ ಬೃಹತ್ ಅಧಿವೇಶನ ಆಯೋಜಿಸಲು ತೀರ್ಮಾನಿಸಿತ್ತು. ಡಿ.20ರಂದು ಚಳಿಗಾಲದ ಅಧಿವೇಶನ ಅಂತ್ಯಗೊಳ್ಳಲಿದ್ದು, ಅದು ಮುಗಿದ ಬಳಿಕ ಈ ಅಧಿವೇಶನ ನಡೆಸಿ ಶಕ್ತಿ ಪ್ರದರ್ಶಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. [ಗುರುವಾರದ ಕಲಾಪದ ಮಖ್ಯಾಂಶಗಳು]

Congress

ಆದರೆ, ಸಮಾವೇಶದ ದಿನಾಂಕವನ್ನು ಡಿ.28ಕ್ಕೆ ಮುಂದೂಡಲಾಗಿದೆ. ಇದಕ್ಕೆ ಕಾರಣವಾಗಿರುವುದು ಅಮಾವಾಸ್ಯೆ ಎಂದರೆ, ಜನರು ಅಚ್ಚರಿಪಡಬೇಕಾಗಿಲ್ಲ. ಈ ಸಮಾವೇಶದಲ್ಲಿ ಜೆಡಿಎಸ್-ಬಿಜೆಪಿಯ ಉತ್ತರ ಕರ್ನಾಟಕ ಭಾಗದ ಪ್ರಮುಖ ಮುಖಂಡರು, ಮಾಜಿ ಸಚಿವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಕುತೂಹಲಕ್ಕೆ ಕಾರಣವಾಗಿದೆ. [ಸಿದ್ದು, ಅಂಬರೀಶ್ ವಿರುದ್ಧ ಮಸಲತ್ತು!]

ಅಮಾವಾಸ್ಯೆ ಅಡ್ಡಿ : ಈ ಮೊದಲು ಡಿ.21ರಂದು ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಅಂದು ಬೆಳಗಾವಿ ಹಾಗೂ ಇತರ ಭಾಗದಲ್ಲಿ ಎಳ್ಳು ಅಮವಾಸ್ಯೆ ಹಬ್ಬವಿದೆ. ಆದ್ದರಿಂದ ಕೃಷಿಕರು, ಜನರು ಸಮಾವೇಶಕ್ಕೆ ಬರುವುದಿಲ್ಲ ಎಂಬ ಕಾರಣದಿಂದಾಗಿ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.

ಅಂದಹಾಗೆ ಬೆಳಗಾವಿಯ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಪಾಲ್ಗೊಳ್ಳುವ ಸಾಧ್ಯತೆ ಇದೆ. ಡಿ.28ಕ್ಕೆ ಸಮಾವೇಶ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಖಚಿತ ಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+