ಭಜರಂಗದ ದಳ ನಿಷೇಧ: ಬಿಜೆಪಿ ಕೈಗೆ ಭಾವನಾತ್ಮಕ ಅಸ್ತ್ರ ಕೊಟ್ಟ ಕಾಂಗ್ರೆಸ್!

ಬೆಂಗಳೂರು, ಮೇ 03: ಬಿಜೆಪಿ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲ್ಲ ಅವರು ಭಾವನಾತ್ಮಕ ವಿಚಾರವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಾರೆ ಎಂಬ ಆರೋಪ ಮಾಡುತ್ತಾ ಬಂದಿದ್ದ ಕಾಂಗ್ರೆಸ್ ನಾಯಕರು ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿಯಿರುವಾಗಲೇ ಪಕ್ಷದ ಪ್ರಣಾಳಿಕೆಯಲ್ಲಿ ಭಜರಂಗದ ನಿಷೇಧ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಮತ್ತೆ ಕಾಂಗ್ರೆಸ್ ಭಾವನಾತ್ಮಕ ವಿಚಾರದ ಅಸ್ತ್ರವನ್ನು ಬಿಜೆಪಿ ಕೈಗೆ ನೀಡಿದೆ.

2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಕಳೆದೊಂದು ವರ್ಷದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ವ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಂಡು ಬಂದಿವೆ. ಅದರಲ್ಲೂ ಆಡಳಿತ ರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕಾಂಗ್ರೆಸ್ ಮಾಡಿಕೊಳ್ಳುತ್ತಿರುವ ಎಡವಟ್ಟು ಕಾಂಗ್ರೆಸ್ ಮುಳುವಾಗುವಂತಾಗಿದೆ.

Congress Promise To Ban Bajaranga Dal In Manifesto

ಈ ಬಾರಿಯ ಚುನಾವಣೆಯನ್ನು ಟಾರ್ಗೆಟ್ ಮಾಡಿದ್ದ ಕಾಂಗ್ರೆಸ್ ಅದಕ್ಕಾಗಿ ರಾಜಕೀಯವಾಗಿ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಬಹಳ ವ್ಯವಸ್ಥಿತವಾಗಿಯೇ ಮಾಡಿತ್ತು. ರಾಹುಲ್ ಗಾಂಧಿಯವರ ಜೋಡೋ ಯಾತ್ರೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರ ನಡೆಸಿದ್ದರಲ್ಲದೆ, ಸರ್ಕಾರದ ಬಜೆಟ್‌ಗೆ ಮುನ್ನವೇ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ಜನರ ಮನಸೆಳೆಯುವ ಪ್ರಯತ್ನ ಮಾಡಿದ್ದರು.

ಆಡಳಿತ ವಿರೋಧಿ ಅಲೆ ಸೃಷ್ಟಿಸಿದ್ದ ಕಾಂಗ್ರೆಸ್

ರಾಜ್ಯದಲ್ಲಿ 40% ವಿಚಾರ ಭಾರೀ ಸುದ್ದಿ ಮಾಡಿದ್ದಲ್ಲದೆ, ಸರ್ಕಾರವನ್ನು ನಡುಗಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕೇವಲ ಆರೋಪಗಳನ್ನು ಮಾಡಿ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಸಿತಾದರೂ ಈ ಬಗ್ಗೆ ಯಾವುದೇ ದೂರನ್ನು ಲೋಕಾಯುಕ್ತಕ್ಕಾಗಲೀ, ನ್ಯಾಯಾಲಯದ ಮೊರೆ ಹೋಗುವುದಾಗಲೀ ಮಾಡಲೇ ಇಲ್ಲ. ಕೇವಲ ರಾಜಕೀಯಕ್ಕೆ ಏನು ಬೇಕೋ ಅಷ್ಟನ್ನು ಬಹಳ ಜಾಗರೂಕವಾಗಿಯೇ ಮಾಡಿತ್ತು.

Congress Promise To Ban Bajaranga Dal In Manifesto

ಇಷ್ಟೇ ಅಲ್ಲದೆ, ಪೇಸಿಎಂ ಅಭಿಯಾನವೂ ಕಾಂಗ್ರೆಸ್ ಗೆ ಸಾಕಷ್ಟು ಮೈಲೇಜ್ ನೀಡಿತ್ತಲ್ಲದೆ, ರಾಜ್ಯದಲ್ಲಿರುವುದು ಭ್ರಷ್ಟ ಸರ್ಕಾರ ಎಂಬುದನ್ನು ಬಿಂಬಿಸುವ ಕೆಲಸವನ್ನು ಮಾಡಿತ್ತು. ಜತೆಗೆ ಅಲ್ಪ ಸಂಖ್ಯಾತ ಮತಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡುತ್ತಾ ಬಂದಿತ್ತು. ಕಾಂಗ್ರೆಸ್ ನ ಬೆನ್ನೆಲುಬಾಗಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತದಾರರು ನಿಂತಿದ್ದು, ಅಂದಿನಿಂದ ಇಂದಿನವರೆಗಿನ ಕಾಂಗ್ರೆಸ್ ಬೆಳವಣಿಗೆಯಲ್ಲಿ ಅವರ ಶ್ರಮ ಇರುವುದನ್ನು ತಳ್ಳಿಹಾಕುವಂತಿಲ್ಲ.

ಬಿಜೆಪಿ ಕೈಗೆ ಅಸ್ತ್ರ ಕೊಟ್ಟ ಕಾಂಗ್ರೆಸ್

ಇನ್ನು ಅಲ್ಪ ಸಂಖ್ಯಾತ ಮತಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುವ ಭರದಲ್ಲಿ ಎಲ್ಲೋ ಒಂದು ಕಡೆ ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರಗಳು ಚುನಾವಣಾ ಸಮಯದಲ್ಲಿ ಉಲ್ಟಾ ಹೊಡೆದಂತೆ ಗೋಚರಿಸುತ್ತಿದೆ. ಗೊತ್ತಿದ್ದು ಗೊತ್ತಿದ್ದೂ ಕಾಂಗ್ರೆಸ್ ನಾಯಕರು ಬಿಜೆಪಿಗೆ ಅಸ್ತ್ರ ಕೊಟ್ಟು ತಮ್ಮ ಮೇಲೆ ಪ್ರಯೋಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.

ಹಾಗೆನೋಡಿದರೆ ಅಲ್ಪಸಂಖ್ಯಾತ ಮತವನ್ನು ಒಲಿಸಿಕೊಳ್ಳಲು ಜೆಡಿಎಸ್ ಮತ್ತು ಎಸ್ ಡಿಪಿಐ ಪಕ್ಷಗಳು ಕಾಂಗ್ರೆಸ್‌ಗೆ ಪೈಪೋಟಿ ನಡೆಸುತ್ತಿವೆ. ಒಂದು ಹೆಜ್ಜೆ ಮುಂದೆ ಮುಂದೆ ಹೋಗಿ ಸರ್ವ ಜನಾಂಗದ ಶಾಂತಿಯ ತೋಟದ ಮಂತ್ರ ಜಪಿಸುವುದರೊಂದಿಗೆ ಹಿಂದೂಪರ ಸಂಘಟನೆಗಳ ವಿರುದ್ಧ ಸಮಯ ಸಿಕ್ಕಾಗಲೆಲ್ಲ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸುತ್ತಾ ಬಂದಿದ್ದರು. ಆ ಮೂಲಕ ನಾವು ಕೂಡ ಅಲ್ಪ ಸಂಖ್ಯಾತ ಪರ ಎಂಬುದನ್ನು ಸಾಬೀತುಪಡಿಸುವ ಕೆಲಸಕ್ಕೆ ಮುಂದಾಗಿದ್ದರು.

ಸರ್ವ ಜನಾಂಗದ ಶಾಂತಿಯ ತೋಟದ ಜಪ

ಎಲ್ಲೋ ಒಂದು ಕಡೆ ಆರ್‌ಎಸ್‌ಎಸ್‌ ಸೇರಿದಂತೆ ಹಿಂದೂಪರ ಸಂಘಟನೆಗಳ ವಿರುದ್ಧ ಮಾತನಾಡಿದರೆ ಅಲ್ಪಸಂಖ್ಯಾತರ ಪರ ಇದ್ದೇವೆ ಎಂಬ ಸಂದೇಶ ರವಾನಿಸಬಹುದು ಎಂಬ ಆಲೋಚನೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರದ್ದಾಗಿದೆ. ಹೀಗಾಗಿ ಸಮಯ ಸಿಕ್ಕಾಗಲೆಲ್ಲ ಹಿಂದೂಪರ ಸಂಘಟನೆಗಳ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ಲಾಭ ತಂದಿದೆಯೋ ಗೊತ್ತಿಲ್ಲ ಆದರೀಗ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧ ಮಾಡುವ ಭರವಸೆಯನ್ನು ಘೋಷಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕಾಂಗ್ರೆಸ್ ಮಾಡಿರುವ ಈ ಘೋಷಣೆ ಹಿಂದೂಪರ ಸಂಘಟನೆ ಮತ್ತು ಬಿಜೆಪಿ ನಾಯಕರನ್ನು ರೊಚ್ಚಿಗೇಳಿಸಿದೆ. ಬಿಜೆಪಿ ಭಜರಂಗದಳ ನಿಷೇಧ ವಿಚಾರವನ್ನು ಮುಂದಿಟ್ಟುಕೊಂಡು ತಂತ್ರ ರೂಪಿಸುತ್ತಿದೆ. ಈ ಹಿಂದೆ ಹಿಜಾಬ್, ಹಲಾಲ್ ವಿಚಾರಗಳು ಮುನ್ನಲೆಗೆ ಬಂದಾಗ ಮೊದಲು ಹಿಂದೂ ಪರ ಸಂಘಟನೆಗಳ ವಿರುದ್ಧ ತಿರುಗಿ ಬಿದ್ದಿದ್ದು ಎಚ್.ಡಿ.ಕುಮಾರಸ್ವಾಮಿ. ಹಿಂದೂಪರ ಸಂಘಟನೆಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರು. ಯಾವಾಗ ಕುಮಾರಸ್ವಾಮಿ ಹಿಂದೂಪರ ಸಂಘಟನೆಗಳ ವಿರುದ್ಧ ಮಾತನಾಡಲು ಶುರು ಮಾಡಿದರೋ ಕಾಂಗ್ರೆಸ್ ಎಚ್ಚೆತ್ತುಕೊಂಡಿತು.

ಕೈ ವಿರುದ್ಧ ರೊಚ್ಚಿಗೆದ್ದ ಕಮಲ ಪಡೆ

ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳನ್ನು ಜೆಡಿಎಸ್ ಮತ್ತು ಎಸ್ ಡಿಪಿಐ ಕಸಿದುಕೊಳ್ಳಬಹುದು ಎಂಬ ಭಯದಲ್ಲಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ವಿಚಾರವನ್ನು ಪ್ರಸ್ತಾಪಿಸಿದೆ. ಸಂಘಟನೆಯನ್ನು ನಿಷೇಧಗೊಳಿಸುವುದು ರಾಜ್ಯಸರ್ಕಾರದಿಂದ ಸಾಧ್ಯವಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದೇ, ಆದರೂ ಕಾಂಗ್ರೆಸ್ ಈ ವಿಚಾರವನ್ನು ಏತಕ್ಕಾಗಿ ಪ್ರಸ್ತಾಪಿಸಿತೋ ಗೊತ್ತಿಲ್ಲ. ಆದರೆ ಬಿಜೆಪಿ ಇದನ್ನು ರಾಜಕೀಯವಾಗಿ ತುಂಬಾ ಬಳಸಿಕೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+