ಕೈ ಹಿಡಿಯಲು ಸಜ್ಜಾದ ಸಚಿವ ನಾರಾಯಣಗೌಡ; ಮಾರ್ಚ್ 21 ರಂದು ಕಾಂಗ್ರೆಸ್ ನತ್ತ ಅಂತಿಮ ನಿರ್ಧಾರ!?
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಬಾರಿಯ ಚುನಾವಣೆಗೂ ಮುನ್ನ ಕಮಲ ಬಿಟ್ಟು ಕೈ ಹಿಡಿಯಲು ಸಚಿವ ನಾರಾಯಣ ಗೌಡ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮಂಡ್ಯ,ಮಾರ್ಚ್9: ರಾಜ್ಯ ರಾಜಕಾರಣದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದೆ ಪಕ್ಷಾಂತರ ಪರ್ವದ ಗುಸುಗುಸು ಜೋರಾಗಿದೆ. ಮೈತ್ರಿ ಸರ್ಕಾರದಲ್ಲಿದ್ದ ಶಾಸಕ ಬಿಜೆಪಿ ಸೇರ್ಪಡೆಯಾಗಿ ಇದೀಗ ಹಾಲಿ ಸಚಿವರಾಗಿರುವ ನಾರಾಯಣ ಗೌಡ ಅವರು ಬಿಜೆಪಿ ತೊರೆಯುತ್ತಾರೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಿದ ಕೆ.ಸಿ. ನಾರಾಯಣಗೌಡ ಅವರು ಮತ್ತೊಮ್ಮೆ ಪಕ್ಷಾಂತರಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಮಂಡ್ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನ ಗೆದ್ದ ಬಿಜೆಪಿ ಆ ಒಂದು ಕ್ಷೇತ್ರದ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಕೋಟೆಯನ್ನ ಕಟ್ಟಲು ರೆಡಿಯಾಗಿದ್ದ ಬಿಜೆಪಿ ಕಲಿಗಳಿಗೆ ಒಂದು ಕಡೆ ಆತಂಕ ಶುರುವಾಗಿದೆ.

ಈಗಾಗಲೇ ಮಂಡ್ಯ ಜಿಲ್ಲೆಯಿಂದ ರಾಜಕೀಯ ಅಖಾಡಕ್ಕೆ ಧುಮುಕಿದ್ದ ಬಿಜೆಪಿ ನಾಯಕರು ಈ ಹಿಂದೆ ಅಮಿತ್ ಶಾ ಮೂಲಕ ಮಂಡ್ಯದಲ್ಲಿ ರಾಜಕೀಯ ಸಮಾವೇಶ ನಡೆಸುವ ಮೂಲಕ ಚುನಾವಣ ಪ್ರಚಾರವನ್ನ ನಡೆಸಿದ್ರು. ಇನ್ನೂ ಮಾರ್ಚ್ 12 ರಂದು ಮಂಡ್ಯ ಜಿಲ್ಲೆಗೆ ಪ್ರಧಾನಿ ಮೋದಿ ಬರಲು ಈಗಾಗಲೇ ಬಿಜೆಪಿ ವೇದಿಕೆ ಸಜ್ಜುಗೊಳಿಸಿದೆ. ಆದರೆ, ಕಾಂಗ್ರೆಸ್ ಸೇರುವ ತವಕದಲ್ಲಿದ್ದು,ಮಾರ್ಚ್ 12 ರಂದು ಮಂಡ್ಯಕ್ಕೆ ಮೋದಿ ಬಂದು ಹೋದ ಬಳಿಕ ಪಕ್ಷಾಂತರ ವೇದಿಕೆ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ತಾರೆ ಎನ್ನುವ ಚರ್ಚೆ ಇದೀಗ ಸಾಕಷ್ಟು ಸುದ್ದಿಯಾಗಿದ್ದು, ಬಿಜೆಪಿ ಪಕ್ಷದಿಂದ ಈಗಾಗಲೇ ಸಾಕಷ್ಟು ಅಂತರವನ್ನ ಕಾಯ್ದುಕೊಂಡಿದ್ದು, ಮಂಡ್ಯದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ಯಾವುದೇ ಪೂರ್ವಭಾವಿ ಸಭೆಗಳಲ್ಲೂ ಭಾಗವಹಿಸುತ್ತಿಲ್ಲ. ಇನ್ನೂ ನಾರಾಯಣ ಗೌಡರು ಪಕ್ಷ ಬಿಡುವುದನ್ನ ಖಚಿತ ಪಡಿಸಿಕೊಂಡಿರುವ ಬಿಜೆಪಿ ನಾಯಕರು ಸಚಿವರಿಗೆ ಯಾವುದೇ ಜವಾಬ್ದಾರಿಯನ್ನ ನೀಡದೇ ದೂರವೇ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಮಂಗಳವಾರ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಗೆ ನಾರಾಯಣಗೌಡರು ಯಾವುದೇ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ. ಜನರನ್ನು ಸಂಘಟಿಸಿಕೊಂಡು ಯಾತ್ರೆಗೂ ಕರೆತಂದಿರಲಿಲ್ಲ. ಹೀಗಾಗಿ ಯಾತ್ರೆಯನ್ನ ಡಿ.ವಿ ಸದಾನಂದಗೌಡರು ಅರ್ಧಕ್ಕೆ ಯಾತ್ರೆಯನ್ನ ಕೈಬಿಟ್ಟು ಬಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಪಕ್ಷವನ್ನ ಬಿಡಲು ಮಾನಸಿಕವಾಗಿ ಸಿದ್ದವಾಗಿರುವ ಸಚಿವ ನಾರಾಯಣಗೌಡರು ತಮ್ಮ ಕ್ಷೇತ್ರವಾದ ಕೆ.ಆರ್ ಪೇಟೆಯಲ್ಲಿ ಮಾರ್ಚ್ 21 ರಂದು ಬೃಹತ್ ಕಾರ್ಯಕ್ರಮವನ್ನ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯನ್ನ ಜನರನ್ನ ಸೇರಿಸು ಸಿದ್ದತೆ ನಡೆಸಲಾಗಿದೆ. ಇನ್ನೂ ಈ ಕಾರ್ಯಕ್ರಮ ಮುಗಿದ ನಂತರದ ದಿನಗಳಲ್ಲಿ ಶಾಸಕ ಹಾಗೂ ಸಚಿವ ಸ್ಥಾನಕ್ಕೆ ನಾರಾಯಣಗೌಡರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications