'ವಚನಭ್ರಷ್ಟ ಯಡಿಯೂರಪ್ಪ!': ಬಿಎಸ್‌ವೈಗೆ ಕಾಂಗ್ರೆಸ್ ಟಾಂಗ್

ಬೆಂಗಳೂರು, ಮಾರ್ಚ್ 16: ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಬ್ರೇಕಿಂಗ್ ನ್ಯೂಸ್ ಠುಸ್ ಪಟಾಕಿಯಾಗಿದೆ. ಇಂದು ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಹೇಳಿ, ಮತ್ತೆ ಅದೇ ಹಳೆ ಕಥೆ ಹೊಡೆದ ಯಡಿಯೂರಪ್ಪನವರನ್ನು ಕಾಂಗ್ರೆಸ್ ನವರು ಕಾಲೆಳೆದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಹೇಳಿದ್ದ ಯಡಿಯೂರಪ್ಪನವರು00 5.45ರವರೆಗೆ ಪತ್ತೆಯೇ ಇರಲಿಲ್ಲ.

Congress mocks Yeddyurappa for his breaking news

ದೃಶ್ಯ ಮಾಧ್ಯಮಗಳು, ಜನರು ಕಾದು ಕಾದು ಸುಸ್ತಾದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್ "ವಚನಭ್ರಷ್ಟ ಯಡಿಯೂರಪ್ಪ! ಅವರು ಹೇಳಿರುವ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಲಾಗದವರು, ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಡುವವರು?!" ಎಂದು ಕಾಲೆಳೆದಿದದೆ. ಜತೆಗೆ 'ಬರಿ ಓಳು ಬಿಜೆಪಿ' ಎಂದು ಹ್ಯಾಷ್ ಟ್ಯಾಗ್ ಬೇರೆ ಹಾಕಿದೆ.

ಕಾಂಗ್ರೆಸ್ ಸೇರಿದಂತೆ ಜನರಿಂದ ಕಾಲೆಳೆಸಿಕೊಂಡ ಯಡಿಯೂರಪ್ಪ ಕೊನೆಗೆ 5.45ಕ್ಕೆ 5 ನಿಮಿಷಗಳ ವಿಡಿಯೋ ಒಂದನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದರು. ವಿಡಿಯೋ ತೆರೆದು ನೋಡಿದರೆ ಮತ್ತದೇ ಹಳೇ ಕಥೆ.

ಈ ಹಿಂದೆ ಹಲವು ಬಾರಿ ಇದೇ ರೀತಿ 'ಸಚಿವರು ಜೈಲಿಗೆ ಹೋಗುತ್ತಾರೆ', 'ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುತ್ತೇನೆ', 'ಬ್ರಹ್ಮಾಂಡ ಭ್ರಷ್ಟಾಚಾರ ಬಯಲು ಮಾಡುತ್ತೇನೆ' ಎಂದಿದ್ದರು. ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ. ಇದೀಗ ಮತ್ತೆ ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಹೇಳಿ ಯಡಿಯೂರಪ್ಪನವರು ಕಾಗೆ ಹಾರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+