Congress Government: ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಉರುಳಿಸಲು ಪ್ಲಾನ್: ಯತ್ನಾಳ್ ಸ್ಪೋಟಕ ಹೇಳಿಕೆ
ವಿಜಯಪುರ, ಜನವರಿ 18: ಕಾಂಗ್ರೆಸ್ ನ ಸಾಕಷ್ಟು ಜನ ನಮಗೆ ಅಪ್ರೋಚ್ ಮಾಡುತ್ತಿದ್ದಾರೆ. ನಾವು ಒಂದಿಷ್ಟು ಜನ ಕಾಂಗ್ರೆಸ್ ಬಿಟ್ಟು ಬರ್ತೀವಿ, ಕಾಂಗ್ರೆಸ್ ಸರ್ಕಾರವನ್ನು ತೆಗೆದು ಹಾಕೋಣ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ಕ್ಷೇತ್ರಕ್ಕೆ ದುಡ್ಡು ಸಿಗುತ್ತಿಲ್ಲ ಎಂದು ನನ್ನ ಜೊತೆ ಸಾಕಷ್ಟು ಜನ ಮಾತನಾಡಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ನಡೆದರೆ ನಾವು ರೆಡಿ. ನಮ್ಮ ಪರ ಓರ್ವರನ್ನ ಅಭ್ಯರ್ಥಿ ಮಾಡಲು ಗಂಭೀರ ನಿರ್ಣಯ ತೆಗೆದುಕೊಳ್ಳುತ್ತೇವೆ. ನಮ್ಮ ಗುಂಪಿನಿಂದ ಈಗಾಗಲೇ ನಿರ್ಣಯ ಮಾಡಿದ್ದೇವೆ. ನಾನು ಸ್ಪರ್ಧೆ ಮಾಡುತ್ತೇನೋ ಅಥವಾ ಯಾರು ನಿಲ್ಲುತ್ತಾರೋ ನೋಡೋಣ. ಕಲುಷಿತ ವ್ಯಕ್ತಿಗಳಿಂದ ಬಿಜೆಪಿಯನ್ನ ದೂರವಿಡಲು ನಿರ್ಣಯ ಮಾಡಿದ್ದೇವೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಸತೀಶ್ ಜಾರಕಿಹೊಳಿ ಸೇರಿದಂತೆ 30 ಜನ ಕಾಂಗ್ರೆಸ್ ಶಾಸಕರು ವಿದೇಶ ಪ್ರಯಾಣ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಪರವಾಗಿರುವ ವ್ಯಕ್ತಿ. ಇದರ ಹಿಂದೆ ಸಿದ್ದರಾಮಯ್ಯನವರೇ ಇರಬಹುದು ಶಂಕೆ ಇದೆ. ಕಳೆದ ವರ್ಷವೇ ಸತೀಶ್ ಜಾರಕಿಹೊಳಿ ಬೆಂಬಲಿಗರು ದುಬೈಗೆ ಹೋಗುವ ಪ್ಲಾನ್ ಇತ್ತು. ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯನವರು ಎಲ್ಲರೂ ಒಂದೇ ಆಗಿದ್ದಾರೆ.
ಅದು ಸಿದ್ದರಾಮಯ್ಯನವರ ನಿರ್ದೇಶನದಂತೆ ನಡೆಯುತ್ತದೆ. ಒಟ್ಟರೆ ಕಾಂಗ್ರೆಸ್ ನಲ್ಲಿ ಗುಂಪು ರಾಜಕೀಯ ಇದೆ. ರಾಷ್ಟ್ರೀಯ ಅಧ್ಯಕ್ಷರು ಎಚ್ಚರಿಕೆ ಕೊಟ್ಟರೂ ಸಹ ಕೇರ್ ಮಾಡುತ್ತಿಲ್ಲ ಎಂದು ಯತ್ನಾಳ್ ಹೇಳಿದರು.
ಇನ್ನೂ ಬೆಳಗಾವಿಯಲ್ಲಿ ಶಾಸಕ ಹಾಗೂ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಮಾತನಾಡಿ, ಜಾತಿ ಗಣತಿ ಯಾವಾಗೋ ಬರಬೇಕಿತ್ತು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗ ಯಾಕೆ ಜಾತಿ ಗಣತಿ ಮಾಡಲಿಲ್ಲ.ಈಗ ಯಾಕೆ ಜಾತಿ ಗಣತಿ ಬಗ್ಗೆ ಮಾಡ್ತಿದ್ದಾರೆ. ಹಿಂದುಳಿದ ನಾಯಕರಾಗಿ ಸಿದ್ದರಾಮಯ್ಯ ಉಳಿದಿಲ್ಲ.
ಸಿದ್ದರಾಮಯ್ಯ ಶಕ್ತಿ ಉಳಿದಿಲ್ಲ. ಡಿಕೆ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರು ಮಾತಾಡಿದ್ರೇ ಸಿದ್ದರಾಮಯ್ಯ ಹಿಂದೆ ತೆಗೆದುಕೊಳ್ಳುತ್ತಾರೆ. ಈಗ ವೇಣುಗೋಪಾಲ್ ಕಾಲು ಮೇಲೆ ಕಾಲು ಹಾಕಿಕೊಂಡು ಕೂಡ್ತಾನೆ
ಆದ್ರೇ ಸಿದ್ದರಾಮಯ್ಯ ಈಗ ಎದ್ದು ನಿಂತಿರುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಸಿದ್ದರಾಮಯ್ಯ ರಾಜ್ಯದ ಹಿತದೃಷ್ಟಿಯಿಂದ ನೀವು ಮೊದಲಿನ ಸಿಎಂ ರಂತೆ ಘರ್ಜನೆ ಮಾಡಬೇಕು. ಕನಕಪುರದ ಮನುಷ್ಯ ಘರ್ಜನೆ ಮಾಡಿದ್ರೇ ಸಿದ್ದರಾಮಯ್ಯ ಹೆದರುತ್ತಿರಿ, ಸಿದ್ದರಾಮಯ್ಯ ಅವರೇ ನೀವು ಎಸ್ಸಿ, ಎಸ್ಟಿ ಅವರಿಗೆ ಹೆದರಿಸುದನ್ನ ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧವೂ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷದ ನಿಲುವು ಏನೇ ಇರಲಿ ನಾನು ವೈಯುಕ್ತಿಕವಾಗಿ ಜಾತಿ ಗಣತಿಪರವಾಗಿದ್ದೇನೆ. ಸಿದ್ದರಾಮಯ್ಯ ಏಕೆ ಜಾತಿಗಣತಿ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ. ಡಿಕೆ ಶಿವಕುಮಾರ್ ಸೇರಿ ಅಲ್ಲಿರುವ ನಾಯಕರಿಗೆ ಹೆದರಿ ಹಿಂದೇಟು ಹಾಕುತ್ತಿದ್ದಾರೆ. ಸಿದ್ಧರಾಮಯ್ಯ ಬಗ್ಗೆ ಗೌರವ ಇದೆ, ಸಿದ್ಧರಾಮಯ್ಯ ಅಹಿಂದ ನಾಯಕರಾಗಿ ಉಳಿದಿಲ್ಲ. ಅಹಿಂದ ನಾಯಕರಾಗಿಯೇ ಉಳಿದು ಆಡಳಿತ ಮಾಡಿ ನಿವೃತ್ತಿಯಾಗಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.












Click it and Unblock the Notifications