• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೋಸ್ತಿ ಪಕ್ಷದಿಂದ ರಿವರ್ಸ್ ಆಪರೇಷನ್: ಬಿಜೆಪಿ ಶಾಸಕರೊಬ್ಬರ ಸಂಪರ್ಕ

|
   ದೋಸ್ತಿ ಪಕ್ಷದಿಂದ ರಿವರ್ಸ್ ಆಪರೇಷನ್

   ಬೆಂಗಳೂರು, ಜುಲೈ 09: ಬಿಜೆಪಿ ಪಕ್ಷವು ಆಪರೇಷನ್ ಕಮಲ ಮಾಡಿ ತಮ್ಮಿಂದ ಕಿತ್ತುಕೊಂಡಿರುವ ಶಾಸಕರ ಬದಲಾಗಿ ಬಿಜೆಪಿಯ ಶಾಸಕರನ್ನು ತಮ್ಮತ್ತ ಸೆಳೆಯಲು ದೋಸ್ತಿ ಪಕ್ಷ ಪ್ರಯತ್ನಗಳನ್ನು ನಡೆಸುತ್ತಿದೆ.

   ಅಜ್ಞಾತ ಸ್ಥಳಕ್ಕೆ ತೆರಳಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ

   ಕೆಲವು ದಿನಗಳ ಹಿಂದೆಯಷ್ಟೆ ರಿವರ್ಸ್ ಆಪರೇಷನ್‌ನ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ಇದೀಗ ಅದನ್ನು ಕಾರ್ಯರೂಪಕ್ಕೆ ತಂದಿದೆ. ಬಿಜೆಪಿಯ ಶಾಸಕರೊಬ್ಬರನ್ನು ಕಾಂಗ್ರೆಸ್‌ನ ಶಾಸಕರು ಸಂಪರ್ಕ ಮಾಡಿದ್ದಾರೆ.

   ಅತೃಪ್ತ ಶಾಸಕರ ಕರೆತರಲು ಮುಂಬೈಗೆ ತೆರಳಲಿದ್ದಾರೆ ಡಿಕೆಶಿ

   ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕ ರಾಮಪ್ಪ ಲಮಾಣಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಮ್ಮನ್ನು ಕಾಂಗ್ರೆಸ್‌ನ ಇಬ್ಬರು ಶಾಸಕರು ಸಂಪರ್ಕ ಮಾಡಿದ್ದರು ಎಂದು ಹೇಳಿದ್ದಾರೆ.

   ಭೀಮಪ್ಪನಾಯ್ಕ್‌ ಮತ್ತು ಕೋನರೆಡ್ಡಿ ಅವರು ತಮ್ಮನ್ನು ಸಂಪರ್ಕಿಸಿ ಆಮೀಷ ಒಡ್ಡಿದರು, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಸೆಳೆದರು ಎಂದು ರಾಮಪ್ಪ ಲಮಾಣಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

   ಸೋನಿಯಾ ಗಾಂಧಿ ಸೂಚನೆ: ರಾಜ್ಯಕ್ಕೆ ಬಂದ ಕಾಂಗ್ರೆಸ್ ಟಾಪ್ ನಾಯಕರು

   ಬಿಜೆಪಿ ಆಪರೇಷನ್ ಕಮಲ ಮಾಡಿದರೆ ನಾವು ರಿವರ್ಸ್‌ ಆಪರೇಷನ್ ಮಾಡುತ್ತೇವೆ ಎಂದು ಕೆಲವು ದಿನಗಳ ಹಿಂದಷ್ಟೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿಎಂ ಕುಮಾರಸ್ವಾಮಿ ಹೇಳಿದ್ದರು, ಡಿಸಿಎಂ ಪರಮೇಶ್ವರ್ ಅವರೂ ಸಹ ಇದೇ ರೀತಿ ಹೇಳಿದ್ದರು.

   English summary
   BJP MLA Ramappa Lamani told that he has been contacted by Congress MLAs, they offered him to join Congress party.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X