MLA Vinay Kulkarni: 'ಯೋಗೇಶ್ ಗೌಡ ಕೊಲೆ ಮಾಡಿಸಿದ್ದೆ ವಿನಯ್ ಕುಲಕರ್ಣಿ': ಸ್ಪೋಟಕ ಮಾಹಿತಿ ಬಹಿರಂಗ
ಬೆಂಗಳೂರು, ಜನವರಿ 04: ಧಾರವಾಡದ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ತಪ್ಪೊಪ್ಪಿಗೆ ನೀಡಿದ್ದು, ಶಾಸಕ ವಿನಯ್ ಕುಲಕರ್ಣಿ ಅವರ ಪಾತ್ರವನ್ನು ಬಹಿರಂಗಪಡಿಸಿದೆ. ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಗಿರುವಂತಹ ಬಸವರಾಜ್ ಮುತ್ತಗಿ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದು, ಯೋಗೇಶ್ ಗೌಡ ಕೊಲೆ ಮಾಡಿಸಿದ್ದೆ ಶಾಸಕ ವಿನಯ್ ಕುಲಕರ್ಣಿ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ತನ್ನ ಹೇಳಿಕೆಯಲ್ಲಿ, ಕೊಲೆಗೆ ಬೆಂಗಳೂರಿನ ಹುಡುಗರನ್ನು ಬಳಸಿಕೊಳ್ಳಲಾಗಿದೆ. ಧಾರವಾಡದ ಹುಡುಗರು ಹತ್ಯೆಗೆ ನಿರಾಕರಿಸಿದ್ದರಿಂದ ಬೆಂಗಳೂರಿನಿಂದ ಹುಡುಗರನ್ನು ಕರೆಸಲಾಗಿದೆ ಎಂದೂ ಹೇಳಿದ್ದಾರೆ. 20 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದದ ಪ್ರಮುಖ ಆರೋಪಿ ತಪೋಪಿಗೆಯಿಂದ ಶಾಸಕ ವಿನಯ್ ಕುಲಕರ್ಣಿಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಶಾಸಕ ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಹಲವರು ಬಂದಿದ್ದರು. ಬೆಂಗಳೂರಿನಿಂದ ಕರೆಸಿದವರಿಂದಲೇ ಯೋಗೇಶ್ ಗೌಡ ಕೊಲೆ ನಡೆದಿದ್ದು, ತಪ್ಪೋಪ್ಪಿಗೆಯಲ್ಲಿ ವಿನಯ ಪಾತ್ರದ ಕುರಿತು ವಿಸ್ತೃತವಾಗಿ ಬಸವರಾಜ್ ಮುತ್ತಿಗಿ ಮಾಹಿತಿ ನೀಡಿದ್ದಾನೆ. ಮುತ್ತಗಿ ಹೇಳಿಕೆಯಿಂದ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಧಾರವಾಡದ ವಿಕಾಸ್ ಕಲಬುರ್ಗಿ, ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ, ಸಂದೀಪ್ ಸವದತ್ತಿ ಹಾಗೂ ಮಹಾಬಲೇಶ್ವರನನ್ನು ಭೇಟಿಯಾಗಿದ್ದ ಬಸವರಾಜ್ ಮುತ್ತಗಿ ಅವರ ಮುಂದೆ ವಿನಯ್ ಕುಲಕರ್ಣಿ ವಿಚಾರವನ್ನು ಪ್ರಸ್ತಾಪಿಸಿದ್ದ.ಯೋಗೇಶ್ ಗೌಡನನ್ನು ಕೊಲೆ ಮಾಡಲು ವಿನಯ್ ಕುಲಕರ್ಣಿ ಹೇಳಿದ್ದ ಆದರೆ ಧಾರವಾಡದ ಹುಡುಗರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.
ಧಾರವಾಡದ ಹುಡುಗರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ವಿನಯ್ ಕುಲಕರ್ಣಿ ಯೋಗೇಶ ಗೌಡನನ್ನು ಕೊಲೆ ಮಾಡಲು ಬೆಂಗಳೂರಿನಿಂದ ಹುಡುಗರನ್ನು ಕರೆಸಿದ್ದ ಅವರನ್ನು ಬಸವರಾಜ್ ಮುತ್ತಗಿಗೆ ವಿನಯ್ ಕುಲಕರ್ಣಿ ಪರಿಚಯ ಮಾಡಿಸಿದ್ದ. ಬೆಂಗಳೂರಿನ 8ನೇ ಆರೋಪಿ ದಿನೇಶ್ ನನ್ನು ಬಸವರಾಜ್ ಮುತ್ತಗಿ ಭೇಟಿಯಾಗಿದ್ದಾನೆ.
ಮುತ್ತಗಿಯನ್ನು ಭೇಟಿಯಾದ ದಿನೇಶ್ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷ ರೂ. ಬೇಡಿಕೆಯಿಟ್ಟನು. ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜತಗೆ ಶರಣಾಗುವುದಿಲ್ಲ ಎಂಬ ಷರತ್ತು ವಿಧಿಸಿದ. ಈ ಮಾಹಿತಿಯನ್ನು ವಿನಯ್ ಕುಲಕರ್ಣಿಗೆ ತಲುಪಿಸಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಹುಡುಗುರ ಷರತ್ತಿಗೆ ಒಪ್ಪಿದ ವಿನಯ್ ಕುಲರ್ಣಿ, ಹತ್ಯೆ ಬಳಿಕ ಧಾರವಾಡದ ಹುಡುಗರನ್ನು ಶರಣಾಗಿಸುವ ಯೋಚನೆ ಹೇಳಿದನು. ಜೂನ್ ಮೊದಲ ವಾರ ಬೆಂಗಳೂರಿನಿಂದ ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಸೇರಿ ಇತರರ ಗ್ಯಾಂಗ್ ಧಾರವಾಡಕ್ಕೆ ಬಂದಿತ್ತು. ಇದೇ ವೇಳೆ ವಿನಯ್ ಕುಲಕರ್ಣಿ ಮುತ್ತಗಿಗೆ ಮೂರು ಕಂಟ್ರಿ ಪಿಸ್ತೂಲು ನೀಡಿದ್ದರು. ಅವಶ್ಯಕತೆ ಬಿದ್ದರಷ್ಟೇ ಬಳಸಲು ಸೂಚನೆ ನೀಡಿದ್ದರು. ಯೋಗೀಶ್ ಗೌಡನನ್ನು ಕೊಲ್ಲೊವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ, ಅವಶ್ಯಕತೆ ಎನ್ನಿಸಿದರಷ್ಟೇ ಪಿಸ್ತೂಲು ಬಳಸಲು ಸೂಚನೆ ನೀಡಿದರು ಎಂದು ಹೇಳಲಾಗಿದೆ.












Click it and Unblock the Notifications