ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಟಿ ಅಧಿವೇಶನಕ್ಕೆ ಹಾಜರಾದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್

|
Google Oneindia Kannada News

ಬೆಂಗಳೂರು, ಫೆಬ್ರವರಿ 06 : ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಜಂಟಿ ಅಧಿವೇಶನದ ಮೊದಲ ದಿನ ಹಾಜರಾಗಿದ್ದರು. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಹಲ್ಲೆ ನಡೆಸಿದ ಬಳಿಕ ಚಿಕಿತ್ಸೆ ಪಡೆದು ಅವರು ಸುಧಾರಿಸಿಕೊಳ್ಳುತ್ತಿದ್ದಾರೆ.

ಬುಧವಾರ ಆನಂದ್ ಸಿಂಗ್ ಅವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಸಚಿವ ಜಿಮೀರ್ ಅಹಮದ್ ಖಾನ್ ಅವರ ಜೊತೆ ಸದನಕ್ಕೆ ಹಾಜರಾದರು. ಫೆ.4ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ವಿಜಯನಗರ ಶಾಸಕ ಆನಂದ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ವಿಜಯನಗರ ಶಾಸಕ ಆನಂದ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್ ಅವರು, 'ನನಗೆ ಇನ್ನೂ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಈಗ ನಾನು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇನೆ' ಎಂದು ಹೇಳಿದರು.

ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕಾಂಗ್ರೆಸ್‌ನಿಂದ ಅಮಾನತುಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕಾಂಗ್ರೆಸ್‌ನಿಂದ ಅಮಾನತು

'ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಜೆ.ಎನ್.ಗಣೇಶ್ ಅವರ ಕುಟುಂಬದಿಂದ ಯಾರೂ ನನ್ನನ್ನು ಸಂಪರ್ಕಿಸಿ, ದೂರು ವಾವಸ್ ಪಡೆಯುವಂತೆ ಮನವಿ ಮಾಡಿಲ್ಲ' ಎಂದು ಆನಂದ್ ಸಿಂಗ್ ಸ್ಪಷ್ಟಪಡಿಸಿದರು.

ಆನಂದ್‌ ಸಿಂಗ್‌ಗೆ ಇನ್ನಷ್ಟು ದಿನ ಚಿಕಿತ್ಸೆ ಅಗತ್ಯ : ಪರಮೇಶ್ವರ ಆನಂದ್‌ ಸಿಂಗ್‌ಗೆ ಇನ್ನಷ್ಟು ದಿನ ಚಿಕಿತ್ಸೆ ಅಗತ್ಯ : ಪರಮೇಶ್ವರ

ಸಂಧಾನದ ಚಾನ್ಸ್ ಇಲ್ಲ

ಸಂಧಾನದ ಚಾನ್ಸ್ ಇಲ್ಲ

ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಶಾಸಕ ಆನಂದ್ ಸಿಂಗ್ ಅವರು, 'ಕಂಪ್ಲಿ ಗಣೇಶ್ ಎಲ್ಲಿದ್ದಾರೆ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರವಗಳನ್ನು ಕೈಗೊಳ್ಳಲಿ. ಸಂಧಾನದ ಚಾನ್ಸೇ ಇಲ್ಲ' ಎಂದು ಸ್ಪಷ್ಟವಾಗಿದ್ದ ಹೇಳಿದ್ದರು.

ರೆಸಾರ್ಟ್‌ನಲ್ಲಿ ಹಲ್ಲೆ

ರೆಸಾರ್ಟ್‌ನಲ್ಲಿ ಹಲ್ಲೆ

ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಜನವರಿ 19ರಂದು ಹಲ್ಲೆ ಮಾಡಿದ್ದರು. ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರೆಲ್ಲಾ ಒಟ್ಟಾಗಿ ಇರುವಾಗ ಈ ಘಟನೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಸಿಂಗ್ ಅವರನ್ನು ಶೇಷಾದ್ರಿಪುರಂನಲ್ಲಿರುವ ಆಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇನ್ನೂ ಸಿಕ್ಕಿಲ್ಲ ಜೆ.ಎನ್.ಗಣೇಶ್

ಇನ್ನೂ ಸಿಕ್ಕಿಲ್ಲ ಜೆ.ಎನ್.ಗಣೇಶ್

ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕರ ಬಂಧನಕ್ಕಾಗಿ 4 ತಂಡಗಳನ್ನು ರಚನೆ ಮಾಡಲಾಗಿದೆ. ಆದರೆ, ಇದುವರೆಗೂ ಶಾಸಕರು ಪೊಲೀಸರ ಕೈಗೆ ಸಿಕ್ಕಿಲ್ಲ.

ಕಾಂಗ್ರೆಸ್‌ನಿಂದ ತನಿಖೆ

ಕಾಂಗ್ರೆಸ್‌ನಿಂದ ತನಿಖೆ

ಜೆ.ಎನ್.ಗಣೇಶ್ ಮತ್ತು ಶಾಸಕ ಆನಂದ್ ಸಿಂಗ್ ಅವರ ನಡುವಿನ ಹೊಡೆದಾಟ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ.

English summary
Vijayanagara Congress MLA Anand Singh attend the Karnataka joint session on Febuary 6, 2019. Anand Singh discharged from hospital on February 4, 2019. He admitted to Apollo hospital Sheshadripuram after clash with Kampli MLA J.N.Ganesh at Eagleton resort.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X