Congress: "ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಾಯಕರು, ಯಾರು ಏನಂದ್ರು ?'

ಕಾಂಗ್ರೆಸ್ ಸರ್ಕಾರದ ದಿವಾಳಿತನಕ್ಕೆ ರೈತರು ಯಾಕೆ ಬಲಿಪಶು ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, "ಬೊಕ್ಕಸದಲ್ಲಿ ದುಡ್ಡಿದ್ದರೆ ತಾನೇ ಕೊಡೋದು?" ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಉಡಾಫೆಯ ಮಾತಾಡುವ ಮೂಲಕ ಈ ದರಿದ್ರ ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನವನ್ನು ಒಪ್ಪಿಕೊಂಡಿದ್ದಾರೆ.

Congress Leaders Revolt Against Their Own Government Who Said What

ಗ್ಯಾರಂಟಿಗಳ ಹೆಸರಿನಲ್ಲಿ ರಾಜಕೀಯ ಲಾಭ ಗಿಟ್ಟಿಸಿಕೊಂಡು, ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಅತೃಪ್ತ ಕಾಂಗ್ರೆಸ್ ಆತ್ಮಗಳಿಗೆ ಗಂಜಿ ಕೇಂದ್ರಗಳನ್ನು ತೆರೆದು, ವೈಯಕ್ತಿಕ ಪ್ರತಿಷ್ಠೆಗಳಿಗೆ ಸಾಧನಾ ಸಮಾವೇಶಗಳನ್ನು ಮಾಡಿ, ಪ್ರತಿಯೊಂದು ಇಲಾಖೆ, ನಿಗಮ ಮಂಡಳಿಗಳಲ್ಲಿ ಲೂಟಿ ಹೊಡೆದು ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಕೊನೆಗೆ ಕಷ್ಟಪಟ್ಟು ಬೆಳೆ ಬೆಳೆದ ಕಬ್ಬು ಬೆಳೆಗಾರರ ಕೈಗೆ ಚೊಂಬು ಕೊಟ್ಟಿದ್ದೀರಿ.

"I am an Agriculturaist by Birth" ಎಂದು ಹೇಳಿಕೊಳ್ಳುವ ತಮಗೆ ಅನ್ನದಾತನ ಹೊಟ್ಟೆಗೆ ಹೊಡೆಯಲು ಮನಸ್ಸಾದರೂ ಹೇಗೆ ಬರುತ್ತೆ ಸಿಎಂ ಡಿ.ಕೆ. ಶಿವಕುಮಾರ್ ಅವರೇ? ರೈತರ ಶ್ರಮಕ್ಕೆ ಬೆಲೆ ಇಲ್ಲವೇ?: ಹಗಲಿರುಳು ಕಷ್ಟಪಟ್ಟು ಕಬ್ಬು ಬೆಳೆದ ರೈತರು ತಮ್ಮ ನ್ಯಾಯಯುತ ಬೆಂಬಲ ಬೆಲೆಗಾಗಿ ಬೀದಿಗೆ ಇಳಿದರೆ, "ಹಣವಿಲ್ಲ, ತಕ್ಷಣ ಕೊಡಲು ಸಾಧ್ಯವಿಲ್ಲ" ಎಂದು ರೈತ ಮುಖಂಡರ ಎದುರಲ್ಲೇ ಕೈಚೆಲ್ಲಿ ಕುಳಿತಿರುವುದು ನಿಮ್ಮ ಸಂವೇದನಾರಹಿತ ಆಡಳಿತಕ್ಕೆ ಹಿಡಿದ ಕನ್ನಡಿ.

ಅನ್ನದಾತರ ಕಣ್ಣೀರಿಗೆ ಬೆಲೆಯೇ ಇಲ್ಲವೇ?

ಬೊಕ್ಕಸದಲ್ಲಿದ್ದ ದುಡ್ಡನ್ನೆಲ್ಲಾ ಬೇರೆಡೆಗೆ ಪೋಲು ಮಾಡಿ, ಲೂಟಿ ಹೊಡೆದು ಈಗ ರೈತರಿಗೆ ನೀಡಲು ಹಣವಿಲ್ಲ ಎಂದಾಗ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸಿ ಜಾರಿಕೊಳ್ಳಲು ನೋಡುತ್ತಿದ್ದೀರಾ? ನಿಮ್ಮ ಈ ಬೇಜವಾಬ್ದಾರಿ ಬೂಟಾಟಿಕೆಯನ್ನು ಇನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ ಎಂದು ಪ್ರಶ್ನಿಸಿರುವ ಅವರು, ವಿಷವರ್ತುಲದಲ್ಲಿ ರೈತನ ಬದುಕು: ಬೆಳೆ ನಷ್ಟ, ಸಾಲದ ಬಾಧೆಯಿಂದ ನರಳುತ್ತಿರುವ ರೈತನಿಗೆ ಧೈರ್ಯ ತುಂಬಬೇಕಾದ ಸರ್ಕಾರವೇ "ನಮ್ಮ ಬಳಿ ಹಣವಿಲ್ಲ" ಎಂದು ಅಸಹಾಯಕ ಧೋರಣೆ ತಾಳಿರುವುದು ಅನ್ನದಾತನಿಗೆ ಮಾಡುತ್ತಿರುವ ಮಹಾದ್ರೋಹ.

ಅಧಿಕಾರ ನಡೆಸುವ ಯೋಗ್ಯತೆ ಇಲ್ಲದಿದ್ದರೆ, ತಕ್ಷಣವೇ ರಾಜನಾಮೆ ಕೊಟ್ಟು ಕುರ್ಚಿ ಖಾಲಿ ಮಾಡಿ ಮನೆಗೆ ಹೊರಡಿ. ಇಲ್ಲವಾದರೆ ರೈತರ ಶಾಪದ ಆಕ್ರೋಶ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನ ಸುಟ್ಟು ಭಸ್ಮ ಮಾಡುವುದು ಗ್ಯಾರೆಂಟಿ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರೇ ಸಿಡಿದೆದ್ದಿದ್ದಾರೆ: ಆರ್. ಅಶೋಕ್

ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರೇ ಸಿಡಿದೆದ್ದಿದ್ದಾರೆ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. ಕರ್ನಾಟಕದಲ್ಲಿರುವುದು ಜನರ ಸರ್ಕಾರ ಅಲ್ಲ, ಸ್ವಂತ ಪಕ್ಷದವರಿಗೇ ಬೇಡವಾದ, ಭ್ರಷ್ಟ, ದಲಿತ ವಿರೋಧಿ, ರೈತ ವಿರೋಧಿ ಸರ್ಕಾರ ಎಂಬುದು ದಿನಕ್ಕೊಂದು ಉದಾಹರಣೆಯೊಂದಿಗೆ ಸಾಬೀತಾಗುತ್ತಿದೆ!

ನಮ್ಮ ನಾಡಿನ ರೈತರು, ದಲಿತರು ಮತ್ತು ಶೋಷಿತ ಸಮುದಾಯಗಳನ್ನು ವಂಚಿಸುತ್ತಿರುವ ಈ ಜನವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗ ಸ್ವತಃ ಕಾಂಗ್ರೆಸ್ ನಾಯಕರೇ ರೊಚ್ಚಿಗೆದ್ದು ಬೀದಿಗೆ ಬರುತ್ತಿದ್ದಾರೆ. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ₹2,500 ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಲು ಯೋಗ್ಯತೆಯಿಲ್ಲದ ಈ ನಾಲಾಯಕ್ ಸರ್ಕಾರವನ್ನು ನೋಡಿ ಸ್ವತಃ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ನಿನ್ನೆ ಅಸಮಾಧಾನ ಹೊರಹಾಕಿದ್ದರು. ನಾಡಹಬ್ಬದ ಸಂದರ್ಭದಲ್ಲೇ ದಲಿತ ಸಮುದಾಯಕ್ಕೆ ಸೇರಿದ ಮೂವರು ಸಚಿವರಿಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರು ಬೇಸರ ವ್ಯಕ್ತಪಡಿಸಿದ್ದರು.

ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಪ್ರಶಸ್ತಿಗಳ ದುರುಪಯೋಗ ಬಗ್ಗೆ ಮಾಜಿ ಸಂಸದ ಉಗ್ರಪ್ಪ ಆಕ್ರೋಶ ಹೊರಹಾಕಿದ್ದಾರೆ! ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿದ್ದ ₹187 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಹೊಡೆದು, ಈಗ 'ವಾಲ್ಮೀಕಿ ಪ್ರಶಸ್ತಿ'ಗಳನ್ನು ಯಾರ್ಯಾರಿಗೋ ಹಂಚುತ್ತಿರುವ ಕುರಿತು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಅವರೇ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. 'ದಲಿತರ ಹಣ ದುರುಪಯೋಗವಾದರೆ ಬೀದಿಗಿಳಿದು ಹೋರಾಟ ಮಾಡಿ' ಎಂದು ಉಗ್ರಪ್ಪನವರೇ ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆಯಯ ಕರೆ ನೀಡುತ್ತಿದ್ದಾರೆಂದರೆ, ಈ ಸರ್ಕಾರದ ಜನಪ್ರಿಯತೆ ಎಷ್ಟರ ಮಟ್ಟಿಗಿದೆ ಊಹಿಸಿ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಪಕ್ಷದಲ್ಲೇ ನಿಮ್ಮ ಸರ್ಕಾರದ ಬಗ್ಗೆ ಈ ಪರಿ ಬೇಸರ, ಅಸಮಾಧಾನ, ಆಕ್ರೋಶ ಇರುವಾಗ ಯಾವ ಮುಖ ಇಟ್ಟುಕೊಂಡು ಕುರ್ಚಿಯಲ್ಲಿ ಮುಂದುವರೆಯುತ್ತೀರಿ? ಅಧಿಕಾರಿದಲ್ಲಿ ಮುಂದುವರೆಯುವ ಯಾವ ನೈತಿಕತೆ ಉಳಿದಿದೆ ನಿಮಗೆ? ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ. ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ಪೂರ್ಣ. ನಿಮ್ಮದೇ ಪಕ್ಷದ ನಾಯಕರು, ಸಚಿವರೇ ನಿಮ್ಮ ದುರಾಡಳಿತಕ್ಕೆ ರೋಸಿಹೋಗಿ ಬಂಡಾಯವೆದ್ದಿದ್ದಾರೆ. ಜನರ ಶಾಪ, ಶೋಷಿತರ ಕಣ್ಣೀರು ಮತ್ತು ರೈತರ ಆಕ್ರೋಶ ಈ ಲೂಟಿ ಕಾಂಗ್ರೆಸ್ ಸರ್ಕಾರವನ್ನು ಶೀಘ್ರದಲ್ಲೇ ಧೂಳೀಪಟ ಮಾಡುವುದು ನಿಶ್ಚಿತ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+