ಮುಡಾ, ವಾಲ್ಮೀಕಿ ನಿಗಮ ಹಗರಣಗಳ ದಾಖಲೆ ನಮಗೆ ಕೊಟ್ಟಿದ್ದೇ ಕಾಂಗ್ರೆಸ್ ನಾಯಕರು: ಹೊಸ ಬಾಂಬ್ ಸಿಡಿಸಿದ ಜೋಶಿ
ಬೆಳಗಾವಿ. ಆಗಸ್ಟ್ 26: ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ಮಾಡುತ್ತಿವೆ. ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ. ನಮ್ಮ ಬಳಿ ಏನೂ ಇರಲಿಲ್ಲ, ಕಾಂಗ್ರೆಸ್ನವರೇ ನಮಗೆ ದಾಖಲೆ ಕೊಟ್ಟಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಈ ಪ್ರಕರಣಗಳ ಕುರಿತು ದಾಖಲೆ ನಮಗೆ ಯಾರು ಕೊಟ್ಟಿದ್ದಾರೆ ಎಂಬುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ಮನೆಗೆ ಹೋಗುತ್ತಾರೆ, ಕಾಂಗ್ರೆಸ್ನಲ್ಲಿ ಹೊಸ ಸಿಎಂ ಬರುತ್ತಾರೆ. ಹೀಗಾಗಿ ಬಿಜೆಪಿ ನಾಯಕರು ಸಿಎಂ ಬದಲಾವಣೆ ಬಗ್ಗೆ ಹೇಳುತ್ತಿದ್ದಾರೆ. ದೆಹಲಿಗೆ ಹೋಗಿ ಒಮ್ಮೆ ರಾಹುಲ್ ಗಾಂಧಿ ಬಳಿ, ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ವಿವರಣೆ ಕೊಡುತ್ತಾರೆ ಎಂದು ತಿಳಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳಿಸಲು ತಮಗೂ ಸೇರಿದಂತೆ ಬಿಜೆಪಿಯ ಪ್ರಮುಖ ಶಾಸಕರಿಗೆ ಕೋಟ್ಯಾಂತರ ರೂಪಾಯಿಯ ಆಮೀಷವೊಡ್ಡಿದ್ದಾಗಿ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಮಾನಹಾನಿ ಮೊಕದ್ದಮೆ ಹಾಕುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಮುಡಾ, ವಾಲ್ಮೀಕಿ ಹಗರಣಗಳನ್ನು ಮುಚ್ಚಿಹಾಕಲು ಹಾಗೂ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಾಲಿಶತನದ ಮನೋಭಾವ ಇರುವವರನ್ನು ಬಿಟ್ಟು ಕಾಂಗ್ರೆಸ್‌ನವರು ಆರೋಪ ಮಾಡಿಸುತ್ತಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅವರನ್ನು ಕಾಂಗ್ರೆಸ್ ಬಲಿಪಶುವನ್ನಾಗಿ ಮಾಡುತ್ತಿದೆ ಎಂದು ದೂರಿದರು.ರವಿಕುಮಾರ್ ಗಣಿಗ ಮೊದಲ ಬಾರಿ ಶಾಸಕರಿದ್ದಾರೆ. ಯಾರೋ ಹೇಳಿದ್ದಾರೆಂದು ಹೇಳಿಕೆ ಕೊಡಬೇಡಿ ಎಂದರು.
100 ಕೋಟಿ ಆಫರ್ ಮಾಡಿದ್ದಾಗಿ ಕಾಂಗ್ರೆಸ್ ಶಾಸಕ ಹೇಳಿದ್ದಾರೆ. ಆ ಹಣ ಎಲ್ಲಿದೆ ಎಂದು ಹೇಳಲಿ. ಒಬ್ಬಿಬ್ಬರು ಶಾಸಕರು ಹಣ ಪಡೆದರೆ ಏನೂ ಆಗುವುದಿಲ್ಲ. ಬಿಜೆಪಿ 66 ಶಾಸಕರ ಬಲ ಹೊಂದಿದೆ. ಅದರಲ್ಲಿ ಇಬ್ಬರು ಪಕ್ಷದ್ರೋಹ ಮಾಡಿದ್ದಾರೆ. ಇನ್ನೂ 64 ಶಾಸಕರು ಸರ್ಕಾರ ರಚನೆಗೆ ಬೇಕು. ಶಾಸಕರ ಆರೋಪದ ಲೆಕ್ಕಾಚಾರದಂತೆ ಅದಕ್ಕೆ ಅಂದಾಜು 6,600 ಕೋಟಿ ರೂ. ಬೇಕು. ಇಷ್ಟು ಹಣ ಎಲ್ಲಿಂದ ಬರುತ್ತದೆ ? ಬಾಲಿಶತನಕ್ಕೂ ಮಿತಿ ಬೇಕು ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಯಾವ ಮುಖಂಡರು ಹಣಕ್ಕಾಗಿ ಆಫರ್ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಸಚಿವ ಪ್ರಲ್ಲಾದ ಜೋಶಿ, ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಅಸಹಾಯಕ ಸ್ಥಿತಿಯಲ್ಲಿರುವುದರಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತಿದೆ ಎಂದರು.
ದರ್ಶನ್ ಗೆ ರಾಜಾದಿಥ್ಯ ಮತ್ತು ವೀಡಿಯೋ ಕಾಲ್ ವಿಚಾರದಲ್ಲಿ ಸರ್ಕಾರದ ವೈಫಲ್ಯತೆ ಇದೆ. ಈ ಹಿಂದೆ ಕಾಂಗ್ರೆಸ್ ನ ಅನೇಕ ಶಾಸಕರು, ಸಚಿವರು ಅವರನ್ನ ರಕ್ಷಣೆ ಮಾಡೋಕೆ ಪ್ರಯತ್ನ ಪಟ್ಟಿದ್ದರು, ರಾಜ್ಯದಲ್ಲಿ ಜನಸಾಮಾನ್ಯರು ಮೃತ ಪಟ್ಟರೆ ಅವರಿಗೆ ನ್ಯಾಯ ಇಲ್ಲಾ ಅನ್ನೋದು ಸ್ಪಷ್ಟ ಆಗುತ್ತಿದೆ. ರೌಡಿ ಶೀಟರ್ ಜೊತೆ ಸಿಗರೇಟ್, ಕಾಫಿ ಕುಡಿಯೋ ಫೋಟೋ ಗಳನ್ನು ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ
ಸಾಕ್ಷಿಗಳನ್ನ ಹೆದರಿಸುವ ಮೆಸೇಜ್ ಕೊಡುವ ಉದ್ದೇಶ ಅವರದ್ದಾಗಿದೆ
ನಾನು ರೌಡಿಶೀಟರ್ ಜೊತೆ ಜೈಲಿನಲ್ಲಿಯೂ ರಾಜಾತಿಥ್ಯದಲ್ಲಿದ್ದೇನೆ, ಸಾಕ್ಷಿ ಹೇಳಿದವರನ್ನ ಮುಂದೆ ನೋಡ್ಕೊತೇನೇ ಅನ್ನೋ ಮೆಸೇಜ್ ಕೊಡಲಾಗಿದೆ. ಸರ್ಕಾರಕ್ಕೆ ಇದರಲ್ಲಿ ಗಂಭೀರತೆ ಇಲ್ಲ, ವಿದ್ಯುನ್ಮಾನ ಮಾಧ್ಯಮ ಅತ್ಯುತ್ತಮ ಕೆಲಸ ಮಾಡಿವೆ ಇಂಚಿಂಚು ಸುದ್ದಿ ಮಾಡಿ, ಸಾಮಾನ್ಯ ವ್ಯಕ್ತಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಅಲ್ಲಿದ್ದು ಫೋಟೋ, ವಿಡಿಯೋ ಮಾಡೋದು, ನಟೋರಿಯಸ್ ಜೊತೆ ಇರೋದು ಸಾಕ್ಷಿ ಬೆದರಿಸುವ ತಂತ್ರ ಎಂದರು.
ದರ್ಶನ್ ಕೇಸ್ ಆದ್ಮೇಲೆ ಆ ಪೊಲೀಸ್ ಹೀರೊ ಅಂದುಕೊಂಡು ಬಿಟ್ಟಿದ್ದಾನೆ. ಇದೆಲ್ಲವನ್ನು ನೋಡಿದ್ರೆ ಸರ್ಕಾರ ಸಂಪೂರ್ಣ ವೈಫಲ್ಯ ಆಗಿದೆ, ಈ ಬಗ್ಗೆ ಸಿಎಂ, ಡಿಸಿಎಂ ಗಂಭೀರವಾಗಿ ತೆಗೆದುಕೊಳ್ಳಬೇಕು, ಒಬ್ಬ ಕೊಲೆ ಆರೋಪಿ ಫೋಟೋ ಈ ರೀತಿ ಹೊರ ಬರ್ತಿದೆ, ಜನಸಾಮಾನ್ಯರಿಗಾಗಿ ಸರ್ಕಾರ ನಡಿಸ್ತಾ ಇದ್ದಾರೋ, ದುಡ್ಡು ಇದ್ದವರಿಗಾಗಿ ಸರ್ಕಾರ ನಡೆಸ್ತಾ ಇದ್ದಾರೋ. ಸರ್ಕಾರಕ್ಕೆ ನೈತಿಕತೆ ಬೇಡವಾ? ಮುಖ್ಯಮಂತ್ರಿಗಳು ಏನು ಮಾಡ್ತಿದ್ದಾರೆ?
ಸರ್ಕಾರ ದರ್ಶನ್ ನನ್ನ ಬಿಡಬೇಕು ಅಂತ ಸಂಚು ನಡೆಡುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಅವನನ್ನ ಬಿಡಿಸಲು ಪ್ರಯತ್ನ ಮಾಡ್ತಿದ್ದಾರೆ, ನೀವು ಯಾಕೆ ಮೊದಲೇ ಮುನ್ನೆಚ್ಚರಿಕೆ ವಹಿಸಲಿಲ್ಲಇವತ್ತು ಸಸ್ಪೆಂಡ್ ಮಾಡಿದೀನಿ ಅಂತೀರಿ, ಇಷ್ಟು ದಿನ ಕತ್ತೆ ಕಾಯ್ತಾ ಇದ್ರಾ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications