ಬಿಜೆಪಿ ಸರ್ಕಾರ ರಚನೆಯನ್ನು ರಸವತ್ತಾಗಿ ಬಣ್ಣಿಸಿದ ಸಿ.ಎಂ.ಇಬ್ರಾಹಿಂ!

ಬೆಂಗಳೂರು, ಜನವರಿ 02 : 'ಈಗಾಗಲೇ ಹುಡುಗಿಗೆ ತಾಳಿ ಕಟ್ಟಿ ಬೇರೆಯವರು ಕರೆದುಕೊಂಡು ಹೋಗಿದ್ದಾರೆ. ಅದೇ ಹುಡುಗಿ ಬೇಕೆಂದು ಬಿಜೆಪಿಯವರು ಕೇಳುವುದು ಸರಿಯಲ್ಲ. ಇದು ಒಳ್ಳೆಯ ಸಂಪ್ರದಾಯವೂ ಅಲ್ಲ' ಎಂದು ಸಿ.ಎಂ.ಇಬ್ರಾಹಿಂ ಬಿಜೆಪಿಯನ್ನು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ರಚನೆ ಮಾಡುವ ಪ್ರಯತ್ನವನ್ನು ತಮ್ಮ ಶೈಲಿಯಲ್ಲಿ ಟೀಕಿಸಿದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು, 'ಸರ್ಕಾರ ರಚನೆ ಮಾಡುವ ಕುರಿತು ಬಿಜೆಪಿ ಅವರ ಮಹದಾಸೆ ತಪ್ಪಲ್ಲ. ಆದರೆ, ಮದುವೆ ಆಗುವ ಇಚ್ಚೇ ಇದ್ದವರು ವಧುವಿನ ಹುಡುಕಾಟ ನಡೆಸಬೇಕು' ಎಂದರು.

'ಈಗಾಗಲೇ ಹುಡುಗಿಗೆ ಬೇರೆಯವರು ತಾಳಿ ಕಟ್ಟಿ ಕರೆದುಕೊಂಡು ಹೋಗಿದ್ದಾರೆ. ಅದೇ ಹುಡುಗಿ ಬೇಕು ಎಂದು ಬಿಜೆಪಿಯವರು ಕೇಳುವುದು ಸರಿಯಲ್ಲ, ಇದು ಒಳ್ಳೆಯ ಸಂಪ್ರದಾಯವೂ ಅಲ್ಲ. ಇದು ಬೇರೆಯವರು ತಾಳಿ ಕಟ್ಟಿದ ಹೆಣ್ಣನ್ನು ಅಪಹರಿಸಲು ಪ್ರಯತ್ನಿಸಿದಂತೆ' ಎಂದು ಟೀಕಿಸಿದರು.

Congress leader CM Ibrahim attacks on BJP

'ಒಂದಿಬ್ಬರು ಶಾಸಕರು ರಾಜೀನಾಮೆ ನೀಡಿದರೆ ಏನೂ ಆಗುವುದಿಲ್ಲ. ಕನಿಷ್ಠ 18 ಶಾಸಕರು ರಾಜೀನಾಮೆ ಕೊಡಬೇಕು. ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದರೆ, ಬೇರೆಯವರು ಅವರ ಶಾಸಕರನ್ನು ಸೆಳೆಯುತ್ತಾರೆ' ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.

'ಬಿಜೆಪಿಯವರು ಬೇಲಿ ಹಾರುವ ಮುನ್ನ ತಮ್ಮ ಕಾಪೌಂಡ್ ಸರಿಪಡಿಸಿಕೊಳ್ಳಲಿ. ಬೇರೆಯವರು ಅವರ ಪಕ್ಷದ ಶಾಸಕರನ್ನು ಸೆಳೆಯದಂತೆ ನೋಡಿಕೊಳ್ಳಲಿ' ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+