ಸಿ.ಟಿ ರವಿ v/s ಬಿ.ಕೆ ಹರಿಪ್ರಸಾದ್ ನಡುವೆ ನಶೆ‌ ಏಟು ಎದಿರೇಟು. ಸಿ ಟಿ ರವಿ ಹೆಂಡ ಕುಡಿದು ಬರ್ತಾರೆ ಎಂದ ಹರಿ ಪ್ರಸಾದ್

ಬೆಳಗಾವಿ,ಡಿಸೆಂಬರ್ 26: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ನಡುವೆ 'ಕುಡುಕ' ಚರ್ಚೆ ತೀವ್ರಗೊಂಡಿದೆ. ಸಿ.ಟಿ ರವಿ ಕುಡಿದು ಮಾತನಾಡುತ್ತಾರೆ ಎಂದು ಬಿ.ಕೆ ಹರಿ ಪ್ರಸಾದ್ ಆರೋಪ ಮಾಡಿದರೆ ಈ ಬಗ್ಗೆ ತಪಾಸಣೆ ಮಾಡಿ ಎಂದು ಸಿ.ಟಿ ರವಿ ಸವಾಲು ಹಾಕಿದ್ದಾರೆ. ಈ ಮೂಲಕ ನಶೆ ಏಟು ಎದಿರೇಟಿನ ಚರ್ಚೆ ತೀವ್ರಗೊಂಡಿದೆ.

ಈ ಕುರಿತು ಸೋಮವಾರ ಸುವರ್ಣಸೌಧದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ರಾಜ್ಯದಲ್ಲಿ ಮೊಲಾಸಿಸ್ ಹಗರಣ ನಡೆದಿದೆ. ಮೂರು ಲಕ್ಷ ಟನ್ ಯಷ್ಟು ಮೊಲಾಸಿಸ್ ಅನ್ನು ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲಾಗ್ತಿದೆ. ಇದರಲ್ಲಿ ಭಾರೀ ಹಗರಣ ನಡೆದಿದೆ. ಇದನ್ನು ನಾವು ಬಹಿರಂಗ ಗೊಳಿಸ್ತೀವಿ. ಇದರಲ್ಲಿ ಕಳ್ಳಬಟ್ಟಿ ಸಾರಾಯಿ ಮಾಡ್ತಾರೆ. ಸಿಟಿ ರವಿಯವರುವ ಹೆಂಡ ಮಾರುವವರು ಕೊಲೆಗಟುಕರು ಎಂದಿದ್ದಾರೆ. ಇವರ ಗುರು ಬಿಎಸ್ ವೈ ಇದ್ದಾಗ ಸಾರಾಯಿ ಬಂದ್ ಮಾಡಿಸಿದ್ರು ಎಂದರು.

ಇದರಿಂದ ಸಾವಿರಾರು ಜನ ರಸ್ತೆ ಪಾಲಾದ್ರು. ಇವಾಗ ಹೆಂಡದ ಮೇಲೆ ಕಣ್ಣಿದೆ. 24 ಸಾವಿರ ಕೋಟಿ ಆದಾಯ ಹೆಂಡದ ತೆರಿಗೆ ಮೂಲಕ ಬರುತ್ತದೆ.‌ಇವರನ್ನು ಕೊಲೆ ಗಟುಕರು ಅಂದ್ರೆ, ಗುಜರಾತ್ ಮಾದರಿಯಲ್ಲಿ ಪಾನ ನಿಷೇಧ ಮಾಡಿ ಎಂದು‌ ಸವಾಲು ಹಾಕಿದರು.

Congress Leader BK Hariprasad outraged on CT Ravi

ಜೊತೆಗೆ, ಆ ಕಸುಬು ನಡೆಸುತ್ತಿರುವವರನ್ನ ಕೊಲೆಗಟುಕರು ಎಂದು ಹೇಳೋದು ಸರಿಯಲ್ಲ.ಸಿಟಿ ರವಿ ಅವರಿಗೆ ಎಳ್ಳಾಮವಾಸ್ಯೆಯಂದು ಸಾರಾಯಿ, ಹೆಂಡ ಸಿಕ್ಕಿರಲಿಲ್ಲ. ಅದಕ್ಕೆ ಕಳ್ಳಬಟ್ಟಿ ಕುಡಿದು ಮಾತಾಡಿದ್ದಾರೆ ಎಂದು ಆರೋಪಿಸಿದರು.

ನನ್ನ ಹಿನ್ನೆಲೆ ಇಡೀ ದೇಶಕ್ಕೆ ಗೊತ್ತಿದೆ. ಇವರು ಸಣ್ಣ ಹುಡುಗರಿದ್ದಾಗಲೇ ನಾನು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣೆ ನೋಡಿದ್ದೇನೆ. ನಮ್ಮ ಆಸ್ತಿ ಸಂಪಾದನೆ ಬಗ್ಗೆ ಅವರು ಆರೋಪ ಮಾಡಿದರೆ, ದೇಶದಲ್ಲಿ ಅವರದ್ದೇ ಸರ್ಕಾರ ಇದೆ. ಒಂದಾದರೂ ಎಫ್ ಐ ಆರ್ ನನ್ನ ವಿರುದ್ಧ ತೋರಿಸಲಿ ನಾನು ರಾಜಕೀಯ ಬಿಡ್ತೀನಿ.ಇಲ್ಲ ಅವರ ಮೇಲೆ ಎಷ್ಟಿದೆ ಎಫ್ ಐ ಆರ್ ಇದೆ ತೋರಿಸಲಿ ಎಂದು ಸವಾಲು ಹಾಕಿದರು.

ಇನ್ನೂ ಸಿ ಟಿ ರವಿ ಶಾಸಕರಾದ ಮೇಲೆ ಎಷ್ಟು ಸಂಪಾದನೆ ಮಾಡಿದ್ದಾರೆ. ದನದ ಮಾಂಸ ಮಾರಾಟಗಾರರಿಂದ ಎಷ್ಟು ಹಪ್ತಾ ವಸೂಲಿ ಮಾಡಿದ್ದಾರೆ, ಕಳ್ಳಬಟ್ಟಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಎಲ್ಲವೂ ಬಹಿರಂಗವಾಗಬೇಕು. ಇಷ್ಟೊಂದು ಹಣ ಶಾಸಕರಿಗೆ ಮಾಡೋದಕ್ಕೆ ಸಾಧ್ಯ ಇಲ್ಲ. ನನ್ನ ಸಂಪಾದನೆ ಹಾಗೂ ಅವರ ಸಂಪಾದನೆ ಬಗ್ಗೆ ತನಿಖೆ ಆಗಲಿ. ಐಟಿ, ಇಡಿ, ದಾಳಿ ನಡೆಯಲಿ ಎಂದು ಬಹಿರಂಗ ಚರ್ಚೆಗೆ ಬಿ ಕೆ ಹರಿಪ್ರಸಾದ್ ಆಹ್ವಾನ ಕೊಟ್ಟರು‌.‌

ಸಿಟಿ ರವಿ ಚಿಕ್ಕಮಗಳೂರಿಂದ ಬೆಂಗಳೂರಿಗೆ ಬರಬೇಕಾದರೆ ಯಾರದರೂ ಲಿಫ್ಟ್ ಕೊಡಬೇಕಿತ್ತು. ಆದರೆ ಈಗ ಐಶಾರಾಮಿ ಕಾರಿನಲ್ಲಿ ಓಡಾಡುತ್ತಿದ್ದಾರೆ. ಸಿಟಿ ರವಿ ಮೂರು ಸಾವಿರ ಕೋಟಿ ಆಸ್ತಿ ಹೊಂದಿದ್ದಾರೆ ಅಂತ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಆರೋಪ ಮಾಡಿದ್ದಾರೆ. ಅದ್ಕೆ ತಲೆ ಕೆಡಿಸಿಕೊಂಡು ಕಳ್ಳಬಟ್ಟಿ ಕುಡಿದು ಈ ರೀತಿ ಮಾತಾಡ್ತಾರೆ ಎಂದು ಕಿಡಿಕಾರಿದರು. ಬೆಳಗಾವಿ ತನಕ ಓಡಿ ತೋರಿಸ್ತೀನಿ. ಅವರ ಕೈಯಲ್ಲಿ ಓಡೋದಕ್ಕೆ ಆಗುತ್ತಾ ಎಂದು ತೋರಿಸಲಿ: ಸಿ ಟಿ ರವಿ

Congress Leader BK Hariprasad outraged on CT Ravi

ಇನ್ನು ಬಿ.ಕೆ ಹರಿ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ, ಪ್ರತೀ ವರ್ಷ ನಾನು ಆಸ್ತಿ ಘೋಷಣೆ ಮಾಡ್ತಾ ಇದ್ದೀನಿ. ಲೋಕಾಯುಕ್ತ ರದ್ದು ಮಾಡಿದೋರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಮಧ್ಯಮ ವರ್ಗದ ರೈತನ ಮಗ. ರಾಜಕೀಯಕ್ಕೆ ಬರೋದಕ್ಕೂ ಮುನ್ನವೂ ಆಸ್ತಿ ವಿವರ ಸಲ್ಲಿಸಿದ್ದೀನಿ. ಅನುಮಾನ ಇರೋರು ಲೋಕಾಯುಕ್ತಕ್ಕೆ ಹೋಗಲಿ ಎಂದರು.

ನಮ್ಮಪ್ಪ ಮುಖ್ಯಮಂತ್ರಿ ಆಗಿರಲಿಲ್ಲ, ಬೇನಾಮಿ ಆಸ್ತಿ ಮಾಡೋದಕ್ಕೆ. ನ್ಯಾಯವಾಗಿ ದುಡಿಯೋ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ.‌ನನ್ನ ಆಸ್ತಿಯೇನು 800 ಪಟ್ಟು ಹೆಚ್ಚಿಗೆ ಆಗಿಲ್ಲ. ಒಂದ್ಕಡೆ ಆಲೂ ಹಾಕಿ ಮತ್ತೊಂದು ಕಡೆ ಚಿನ್ನ ತೆಗೆಯೋರು ಅವ್ರು. ಅಕ್ರಮ ಆಸ್ತಿ ಇರೋದು ಧೃಢಪಡಿಸಲಿ. ನಾನು ಕೊತ್ವಾಲ್ ರಾಮಚಂದ್ರ ಶಿಷ್ಯ ಅಲ್ಲ. ಗ್ಯಾಂಗ್ ಕಟ್ಟಿಕೊಂಡು ಓಡಾಡಿಲ್ಲ ಎಂದರು.

ನನ್ನ ಟ್ರ್ಯಾಕ್ ರೆಕಾರ್ಡ್ ತೆಗೆದು ಚೆಕ್ ಮಾಡಿಕೊಳ್ಳಲಿ. ಕುಡಿದು ಮಾತಾಡ್ತೀನಿ ಅಂತಾ ನನ್ನ ಬಗ್ಗೆ ಮಾತಾಡಿದ್ದಾರೆ. ನನ್ನ ಬ್ಲಡ್ ನಲ್ಲಿ ಗಾಂಜಾ, ಮದ್ಯ ಪಾನ ಮಾಡಿರೋದು ಏನಾದ್ರೂ ಸಿಕ್ಕಿದ್ರೆ ಮಾತಾಡಲಿ. ಅವರ್ಯಾರೇ ಬರಲಿ ನನ್ನ ಜೊತೆ ಕಾಂಪಿಟೇಶನ್ ಗೆ . ಬೆಳಗಾವಿ ತನಕ ಓಡಿ ತೋರಿಸ್ತೀನಿ. ಅವರ ಕೈಯಲ್ಲಿ ಓಡೋದಕ್ಕೆ ಆಗುತ್ತಾ ಎಂದು ತೋರಿಸಲಿ. ಕುಡಿದು ಓಡಾಡೋಕ್ಕೆ ಆಗದೇ ಇರೋರು ಯಾರು ಅಂತಾ ಎಲ್ಲರಿಗೂ ಗೊತ್ತು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+