Get Updates
Get notified of breaking news, exclusive insights, and must-see stories!

ಅಮಿತ್ ಶಾಗೆ ಯಾವ ಜ್ವರವೂ ಇಲ್ಲ: ಬಿ.ಕೆ. ಹರಿಪ್ರಸಾದ್ ಮತ್ತೆ ವಿವಾದ

ಬೆಂಗಳೂರು, ಜನವರಿ 18: ಕಾಂಗ್ರೆಸ್ ಶಾಸಕರನ್ನು ಅಪಹರಿಸಿದ್ದಕ್ಕೆ ಅಮಿತ್ ಶಾಗೆ ಹಂದಿಜ್ವರ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಯಾವ ಹಂದಿ ಜ್ವರವೂ ಇಲ್ಲ. ಇದಕ್ಕೆ ದಾಖಲೆಗಳಿವೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

'ಅಮಿತ್ ಶಾ ಅವರಿಗೆ ಯಾವುದೇ ಫ್ಲೂ ಬಂದಿಲ್ಲ ಎಂದು ನಮ್ಮ ಬಳಿ ವರದಿಯಿದೆ. ನಮಗೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಪರಿಚಿತ ಜನರಿದ್ದಾರೆ. ಅಮಿತ್ ಶಾ ಫ್ಲೂನಿಂದ ಅಲ್ಲಿಗೆ ದಾಖಲಾಗಿಲ್ಲ ಎಂದು ಅವರು ಹೇಳುತ್ತಾರೆ. ಉಳಿದ ಸತ್ಯಾಂಶಗಳನ್ನು ಪಡೆದುಕೊಂಡು ನಿಮ್ಮ ಮುಂದೆ ಬರುತ್ತೇನೆ' ಎಂದು ಅವರು ಹೇಳಿದ್ದಾರೆ.

Congress leader BK Hariprasad claimed bjp president Amit Shah does not have any flu

ಅಮಿತ್ ಶಾ ಅವರ ಅನಾರೋಗ್ಯದ ಬಗ್ಗೆ ಗುರುವಾರವಷ್ಟೇ ವ್ಯಂಗ್ಯವಾಡಿದ್ದ ಬಿ.ಕೆ. ಹರಿಪ್ರಸಾದ್ ಅವರನ್ನು ನಿಮ್ಹಾನ್ಸ್‌ಗೆ ಸೇರಿಸುವಂತೆ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು.

'ಕಾಂಗ್ರೆಸ್ ಶಾಸಕರನ್ನು ಕಿಡ್ನಾಪ್‌ ಮಾಡಿ ಬಾಂಬೆಯಲ್ಲಿಟ್ಟಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಅವರಿಗೆ ಸರ್ಪಗಾವಲಾಗಿದ್ದಾರೆ. ಕೆಲವು ಶಾಸಕರು ಈಗಾಗಲೇ ವಾಪಸ್ ಬಂದಿರುವುದರಿಂದ ಅಮಿತ್ ಶಾ ಅವರಿಗೆ ಗಾಬರಿಯಾಗಿ ಜ್ವರ ಬಂದಿದೆ. ಜ್ವರ ಎಂದರೆ ಕಮ್ಮಿ ಜ್ವರ ಅಲ್ಲ, ಅದು ಹಂದಿ ಜ್ವರ ಕರ್ನಾಟಕದಲ್ಲಿ ಸರ್ಕಾರವನ್ನು ಕಡೆವಲು ಪ್ರಯತ್ನ ಮಾಡಿದರೆ ಕೇವಲ ಹಂದಿ ಜ್ವರ ಅಲ್ಲ ವಾಂತಿ, ಭೇದಿ ರೋಗಗಳು ಬರುತ್ತವೆ' ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದರು.

'ಹರಿಪ್ರಸಾದ್ ಅವರು ಅಮಿತ್ ಶಾ ಅವರ ಆರೋಗ್ಯವನ್ನು ವ್ಯಂಗ್ಯವಾಡಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹ ನಾಗರಿಕ ಸಮಾಜದಲ್ಲಿ ಬದುಕಲು ಅರ್ಹರಲ್ಲ. ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುತ್ತಿದ್ದೇವೆ. ಹರಿಪ್ರಸಾದ್ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿ' ಎಂದು ಬಿಜೆಪಿ ಟ್ವೀಟ್ ಮಾಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+