ಆಪರೇಷನ್‌ ಹಸ್ತ; ಬಾಂಬೆ ಬಾಯ್ಸ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ?: ಶಿವರಾಮ್‌ ಹೆಬ್ಬಾಳ್ ಹೇಳಿದ್ದೇನು?

ಉತ್ತರ ಕನ್ನಡ, ಆಗಸ್ಟ್‌ 17: 2023 ರ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸುತ್ತಿದ್ದು, ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದು, ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಸುದ್ದಿ ಜೋರಾಗಿದೆ. ಬಾಂಬೆ ಬಾಯ್ಸ್‌ ಮತ್ತೆ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರಾ ಎಂಬ ಕುರಿತು ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಪ್ರತಿಕ್ರಿಯಿಸಿದ್ದಾರೆ.

ಹೌದು, ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಸೇರುವ ಕಾಲ ನಿರ್ಣಯ ಆಗಿಲ್ಲ. ಈ ಸಂಬಂಧ ಊಹಾಪೋಹಗಳಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ. ಈ ಹಿಂದೆ ಬಿಜೆಪಿ ಸೇರಿದ ಶಾಸಕರು ಪುನಃ ಕಾಂಗ್ರೆಸ್‌ಗೆ ತೆರಳುತ್ತಾರೆ ಎಂಬ ಸುದ್ದಿಯನ್ನು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ. ಮಾಧ್ಯಮದಲ್ಲಿ ಯಾಕೆ ಹೀಗೆ ಬಂದಿದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

Congress Joining Time Has Not Been Decided Shivaram Hebbar Said

ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಎನ್ನುವ ಕುರಿತು ನಾನು ಯಾವುದೇ ಸಭೆ, ಸಮಾರಂಭ ಅಥವಾ ಚರ್ಚೆ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಆದರೂ ಈ ವಿಷಯ ಪ್ರಸ್ತಾಪವಾಗಿದೆ. ಅಂತಹ ಪರಿಸ್ಥಿತಿ ಬಂದರೆ ಕ್ಷೇತ್ರದ ಜನರನ್ನು ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ಅಂತಿಮವಾಗಿ ಅವರೇ ನಮ್ಮ ಹಣೆಬರಹ ಬರೆಯುತ್ತಾರೆ. ಅದು ಆವತ್ತಿರಬಹುದು, ಇವತ್ತು ಅಥವಾ ಮುಂದೇನೂ ಅಂತೆಯೇ ಇರುತ್ತದೆ. ಪ್ರಮುಖವಾದ ಯಾವುದೇ ನಿರ್ಣಯವನ್ನು ನಮ್ಮ ಕ್ಷೇತ್ರದಲ್ಲಿನ ಮುಖಂಡರೊಂದಿಗೆ ಚರ್ಚಿಸಲು ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

ಇನ್ನೂ ಈ ಕುರಿತು ಸಚಿವ ಶಿವರಾಜ ತಂಗಡಗಿ ಮಾತನಾಡಿ, ಈಗಿನ ಪರಿಸ್ಥಿತಿಯನ್ನು ನೋಡಿದರೆ ಬರುವ ದಿನಗಳಲ್ಲಿ ಬಿಜೆಪಿಯಲ್ಲಿ ಯಾರು ಇರಲಿಕ್ಕಿಲ್ಲ. ಬಾಂಬೇ ಟೀಂ. ದೆಹಲಿ ಟೀಂ ಯಾರಾರು ಬರುತ್ತಾರೊ ಗೊತ್ತಿಲ್ಲಆದರೆ ಬರುವ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರ ಮುಂದುವರಿಯುತ್ತದೆ ಎಂಬ ಮಾಹಿತಿ ಇರಬಹುದು. ಪಕ್ಷಕ್ಕೆ ಯಾರಾರು ಬರುತ್ತಾರೆ. ಯಾರ ಸಂಪರ್ಕ ಯಾರು ಇದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಇನ್ನೂ ಆನಂದಸಿಂಗ್ ನನ್ನ ಸಂಪರ್ಕದಲ್ಲಿಲ್ಲಒಂದು ವೇಳೆ ಬಂದರೆ ತಿಳಿಸುತ್ತೇನೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರು ಹತಾಸೆರಾಗಿದ್ದಾರೆ.ಕುಮಾರಸ್ವಾಮಿ ಹಿರಿಯರು ಅವರು ಅಧಿಕಾರಕ್ಕೆ ಬರುತ್ತೇನೆ ಎಂಬ ಕಲ್ಪನೆಯಲ್ಲಿದ್ದರು.ಆದರೆ ಅಧಿಕಾರಕ್ಕೆ ಬಾರದೆ ಹತಾಸೆರಾಗಿ ಮಾತನಾಡುತ್ತಿದ್ದಾರೆ ಎಂದ ಅವರು, ಸಚಿವ ಕೆ ಎಚ್ ಮುನಿಯಪ್ಪ ಎರಡೂವರೆ ವರ್ಷದ ನಂತರ ಹಿರಿಯ ಸಚಿವರ ಅಧಿಕಾರ ನೀಡಬೇಕು ಎಂಬ ಹೇಳಿಕೆ ಪ್ರತಿಕ್ರಿಯಿಸಿ ಅವರು ಈ ಕುರಿತು ಹೈಕಮಾಂಡ ನಿರ್ಧರಿಸುತ್ತೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+