ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಸೆ ಕೈಬಿಟ್ಟ ಡಿಕೆಶಿ? ಕನಕಪುರ ಬಂಡೆ ಏಕಾಂಗಿ!

ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಬಂದ ದಿನ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಅಲ್ಲಿಂದ, ಇಲ್ಲಿಯವರೆಗೆ ಅಂದರೆ 45ದಿನಗಳಾಗುತ್ತಾ ಬಂದರೂ, ಪ್ರಮುಖವಾದ ಹುದ್ದೆಗೆ ಇನ್ನೂ ಹೈಕಮಾಂಡ್ ಯಾರನ್ನೂ ಆಯ್ಕೆಮಾಡಿಲ್ಲ.

ಆಯ್ಕೆಮಾಡಿಲ್ಲ ಎನ್ನುವುದಕ್ಕಿಂತ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಇದಕ್ಕೆ ಪೂರಕವಾದ ವಾತಾವರಣವಿಲ್ಲ. ಮನೆಯೊಂದು ಮೂರು ಬಾಗಿಲಂತಾಗಿರುವ ಕೆಪಿಸಿಸಿಯಲ್ಲಿ ಬಣಗಳದ್ದೇ ಕಾರುಬಾರು. ಹಾಗಾಗಿ, ಸೋನಿಯಾ ತುಂಬಾ ಜಾಗರೂಕವಾಗಿ ಹೆಜ್ಜೆಯನ್ನು ಇಡಬೇಕಾಗಿರುವುದೇ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಯ್ಕೆಯ ವಿಳಂಬಕ್ಕೆ ಕಾರಣವಾಗಿರುವುದು.

ಈಗಾಗಲೇ ಹಲವು ಬಾರಿ ಹೇಳಿರುವಂತೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬಂದು ಹೆಸರು ಹಲವು. ಅದರಲ್ಲಿ ಫೈನಲ್ ಆಗಿರುವ ಹೆಸರು ನಾಲ್ಕು. ಈ ನಾಲ್ಕರಲ್ಲಿ ಬಹುತೇಕ ಒಂದು ಹೆಸರು ಅಂತಿಮ ಎಂದು ಹೇಳಲಾಗುತ್ತಿದ್ದದ್ದು ಅದು ಡಿ.ಕೆ.ಶಿವಕುಮಾರ್ ಅವರದ್ದು.

ತಿಹಾರ್ ಜೈಲಿನಿಂದ ಬಂದ ಮೇಲೆ ತಮ್ಮ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದ ಡಿಕೆಶಿ, ಪ್ರಯಾಸವಿಲ್ಲದೇ ಈ ಹುದ್ದೆಗೆ ಏರುತ್ತಾರೆ ಎನ್ನುವ ಸುದ್ದಿ ಮೊದಲು ಹರಿದಾಡುತ್ತಿತ್ತು. ಹೈಕಮಾಂಡಿಗೂ ಇವರ ಮೇಲೆ ಒಲವಿತ್ತು ಕೂಡಾ. ಆದರೆ, ದಿನದಿಂದ ದಿನಕ್ಕೆ ಈ ಹುದ್ದೆಗೆ ಏರುವ ಇವರ ಕನಸು, ಕಷ್ಟವಾಗುತ್ತಾ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಒಂದು ಕಾರಣ.

ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಹೈಮಾಂಡಿನ ಫರ್ಮಾನು

ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಹೈಮಾಂಡಿನ ಫರ್ಮಾನು

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವ ಹೈಮಾಂಡಿನ ಫರ್ಮಾನಿನಂತೆ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ಸಿನ ಪ್ರಮುಖ ನಾಯಕರನ್ನು ಭೇಟಿಯಾಗಿದ್ದರು. ಕೆಲವರಿಂದ ನಿರೀಕ್ಷಿತ ಬೆಂಬಲ ಸಿಗದೇ ಇದ್ದಾಗ ಮತ್ತು ಮೂಲ ಕಾಂಗ್ರೆಸ್ಸಿಗರು ಎಂದು ಏನು ಹೇಳಲಾಗುತ್ತಿದೆಯೋ, ಅಲ್ಲೇ, ಬಣ ರಾಜಕೀಯ ಇರುವುದರಿಂದ, ಡಿಕೆಶಿ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಭೇಟಿಯಾಗಿದ್ದ ಡಿಕೆಶಿ

ಸಿದ್ದರಾಮಯ್ಯ ಭೇಟಿಯಾಗಿದ್ದ ಡಿಕೆಶಿ

ಶಾಸಕಾಂಗ ಪಕ್ಷದ ಮತ್ತು ವಿರೋಧ ಪಕ್ಷದ ನಾಯಕ ಎರಡೂ ತನಗೆ ಬೇಕು ಮತ್ತು ತಾನು ಸೂಚಿಸಿದ ವ್ಯಕ್ತಿಯೇ ಕೆಪಿಸಿಸಿ ಅಧ್ಯಕ್ಷರಾಗಬೇಕು ಎನ್ನುವ ತಮ್ಮ ನಿಲುವಿನಿಂದ ಸಿದ್ದರಾಮಯ್ಯ ಹಿಂದಕ್ಕೆ ಸರಿಯದೇ ಇರುವುದು, ಡಿಕೆಶಿಗೆ ಆಗುತ್ತಿರುವ ಇನ್ನೊಂದು ಹಿನ್ನಡೆ. ಖುದ್ದು, ಸಿದ್ದರಾಮಯ್ಯನವರನ್ನು ಡಿಕೆಶಿ ಭೇಟಿಯಾಗಿ, ಬೆಂಬಲಿಸುವಂತೆ ಮನವಿ ಮಾಡಿದ್ದರು.

ಕೆಪಿಸಿಸಿ ಅಧ್ಯಕ್ಷರಾದರೆ ಸಿದ್ದರಾಮಯ್ಯ ಬೆಂಬಲ ಸಿಗುವುದು ಕಷ್ಟ

ಕೆಪಿಸಿಸಿ ಅಧ್ಯಕ್ಷರಾದರೆ ಸಿದ್ದರಾಮಯ್ಯ ಬೆಂಬಲ ಸಿಗುವುದು ಕಷ್ಟ

ಆದರೆ, ದೆಹಲಿ ಮುಖಂಡರನ್ನು ಭೇಟಿಯಾದಾಗ ಸಿದ್ದರಾಮಯ್ಯ ತಮ್ಮ ಆಪ್ತರಾದ ಎಂ.ಬಿ.ಪಾಟೀಲ್, ಕೃಷ್ಣ ಭೈರೇಗೌಡ ಅಥವಾ ಈಶ್ವರ ಖಂಡ್ರೆ, ಈ ಮೂವರಲ್ಲಿ ಒಬ್ಬರನ್ನು ಆಯ್ಕೆಮಾಡಿ ಎನ್ನುವ ಶಿಫಾರಸನ್ನು ಮಾಡಿದ್ದರಂತೆ. ಒಂದು ವೇಳೆ ಕೆಪಿಸಿಸಿ ಅಧ್ಯಕ್ಷರಾದರೆ ಸಿದ್ದರಾಮಯ್ಯ ಬೆಂಬಲ ಸಿಗುವುದು ಕಷ್ಟ ಎನ್ನುವುದನ್ನು ಅರಿತಿರುವ ಡಿಕೆಶಿ, ಈ ಹುದ್ದೆಯ ಕನಸಿನಿಂದ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಡಿಕೆಶಿ, ಏಕಾಂಗಿಯಾದರೆ ಎನ್ನುವ ಮಾತು ಕೆಪಿಸಿಸಿ ಅಂಗಣದಲ್ಲಿ ಓಡಾಡುತ್ತಿದೆ

ಡಿಕೆಶಿ, ಏಕಾಂಗಿಯಾದರೆ ಎನ್ನುವ ಮಾತು ಕೆಪಿಸಿಸಿ ಅಂಗಣದಲ್ಲಿ ಓಡಾಡುತ್ತಿದೆ

ಶುಕ್ರವಾರ (ಜ 25) ದೆಹಲಿಯಲ್ಲಿದ್ದ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ" ಎನ್ನುವ ಮಾತನ್ನು ಮಾಧ್ಯಮದವರ ಮುಂದೆ ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಮೂಲ ಕಾಂಗ್ರೆಸ್ಸಿಗರ ಬೆಂಬಲ ಸಿಗದೇ, ಡಿಕೆಶಿ, ಏಕಾಂಗಿಯಾದರೆ ಎನ್ನುವ ಮಾತು ಕೆಪಿಸಿಸಿ ಅಂಗಣದಲ್ಲಿ ಓಡಾಡುತ್ತಿದೆ. ನೇರವಾಗಿ ನಾನು ಆ ಹುದ್ದೆಯ ಆಕಾಂಕ್ಷಿಯಲ್ಲ ಎನ್ನುವ ಡಿಕೆಶಿ ಹೇಳಿಕೆಯ ಹಿಂದೆ, ಇನ್ನೇನಾದರೂ ರಾಜಕೀಯವಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+