Jagadish Shettar: ಕಾಂಗ್ರೆಸ್ ಶಾಸಕರಿಂದಲೇ ಸಿದ್ದರಾಮಯ್ಯ ಸರ್ಕಾರ ಪತನ : ಜಗದೀಶ್ ಶೆಟ್ಟರ್ ಸ್ಪೋಟಕ ಹೇಳಿಕೆ
ಹುಬ್ಬಳ್ಳಿ, ನವೆಂಬರ್ 20: ಅನುದಾನದ ವಿಚಾರವಾಗಿ ಸರ್ಕಾರದ ವಿರುದ್ಧ ಸ್ವತಹ ಕಾಂಗ್ರೆಸ್ ಶಾಸಕರೇ ತಿರುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕಾಂಗ್ರೆಸ್ ಶಾಸಕರಿಂದಲೇ ಪತನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಸ್ಪೋಟಕ ಹೇಳಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವಾಗ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಗೊತ್ತಿಲ್ಲ. ಅನುದಾನದ ವಿಚಾರವಾಗಿ ನಿನ್ನೆ ಶಾಸಕ ಗವಿಯಪ್ಪ ಮಾತನಾಡಿದ್ದಾರೆ. ಈ ಹಿಂದೆ ಶಾಸಕ ರಾಜುಕಾಗೆ ಸಹ ಇದೇ ವಿಚಾರವಾಗಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಅವರದ್ದೇ ಶಾಸಕರು ಕುದಿಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಹಿಂದೆ ಶಾಸಕ ರಾಜುಕಾಗೆ ರಾಜೀನಾಮೆ ನೀಡೋದಾಗಿ ಕೂಡ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಶಾಸಕರಿಂದಲೇ ಸಿದ್ದರಾಮಯ್ಯ ಸರ್ಕಾರ ಬಿದ್ದು ಹೋಗುತ್ತದೆ. ಅವರ ತಪ್ಪಿನಿಂದಲೇ ಯಾವಾಗ ಬೇಕಾದರೂ ಸರ್ಕಾರ ಪತನವಾಗಬಹುದು ಎಂದರು.

ಇನ್ನು 100 ಕೋಟಿ ಆಫರ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಿಟ್ ಅಂಡ್ ರನ್ ರೀತಿ ಹೇಳಿಕೆ ನೀಡುತ್ತಿದ್ದಾರೆ. 50 ಕೋಟಿ ಹಾಗೂ ನೂರು ಕೋಟಿ ಆಫರ್ ಅಂದರೆ ಸಾಮಾನ್ಯ ಅಲ್ಲ. ಈ ಕುರಿತು ಆಡಿಯೋ ವಿಡಿಯೋ ಇದೆ ಅಂತಾರೆ ಆದರೆ ಯಾಕೆ ಬಿಡುಗಡೆ ಮಾಡಿಲ್ಲ? ಕಾಂಗ್ರೆಸ್ನವರು ಬೋಗಸ್ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.ಸಿಎಂ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.
ಮಹಾರಾಷ್ಟ್ರ, ಜಾರ್ಖಂಡ್ ನಲ್ಲಿ ನಡೆಯುತ್ತಿರುವ ವಿಧಾನ ಸಭೆಯ ಚುನಾವಣೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು ಖಂಡಿತವಾಗಿ ಮಹಾರಾಷ್ಟ್ರದ ಬಿಜೆಪಿ ಅಧಿಕಾರಕ್ಕೆ ನಮ್ಮ ಪಕ್ಷ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಒಳ್ಳೆಯ ರಿಸ್ಪಾನ್ಸ್ ನಮಗೆ ಇದೆ. ನಾನು ಎರಡು ದಿನಗಳ ಕಾಲ ಮಹಾರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದೆ. ಸೋಲಾಪುರ, ಅಕ್ಕಲಕೋಟೆಯ ಭಾಗಗಳಲ್ಲಿ ಒಳ್ಳೆಯ ವಾತಾವರಣ ಇದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಜಾರ್ಖಂಡ್ ವಿಧಾನ ಸಭೆ ಕುರಿತು ನನಗೆ ಹೆಚ್ಚು ಮಾಹಿತಿ ಇಲ್ಲ. ನಾನು ಜಾರ್ಖಂಡ್ ರಾಜ್ಯದಲ್ಲಿ ಪ್ರಚಾರ ಮಾಡಿಲ್ಲ, ಆದರೆ ಜಾರ್ಖಂಡ್ ನಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾದ ಇದೆ. ಅಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂದರು.
ಕರ್ನಾಟಕದ ಐದು ಗ್ಯಾರಂಟಿಗಳ ಕುರಿತು ಬಿಜೆಪಿ ಅಪಪ್ರಚಾರ ಮಾಡುವ ಕುರಿತು ಕಾನೂನು ಹೋರಾಟಕ್ಕೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಚಿಂತನೆ ವಿಚಾರವಾಗಿ ಮಾತನಾಡಿ, ಈ ವಿಚಾರದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಎಲ್ಲಿಯೋ ಕುಳಿತುಕೊಂಡು ಏನು ಹೇಳುವುದು ಅಲ್ಲಾಇದಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳು ಬೇಕು. ಕಾನೂನು ಹೋರಾಟ ಮಾಡುವುದಾರೆ ಈಗಲೇ ಮಾಡಬೇಕು, ಕೇವಲ ಹೇಳಿಕೆ ಕೊಡುವುದು ಯಾಕೆ ಎಂದ ಅವರು ಇದು ಕೇವಲ ವಿಷಯ ಪಲ್ಲಟ ಮಾಡುವುದೇ ಆಗಿದೆ ಎಂದರು.
ಕೋವೀಡ್ ಹಗರಣದಲ್ಲಿ ನೇಮಕ ಮಾಡಿದ ಕುನ್ಹಾ ವರದಿ ಸಿಎಂ ಕಚೇರಿಯಿಂದೇ ಸೋರಿಕೆ ಆಗತಾ ಇದೆ ಎಂಬ ವಿಚಾರವಾಗಿ ಮಾತನಾಡಿ, ಯಾವುದಾದರೂ ಒಂದು ಹಗರಣ ಕುರಿತು ತನಿಖಾ ವರದಿ ಅದರಲ್ಲೂ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಆದರೆ ಬಹಳಷ್ಟು ಸೂಕ್ಷ್ಮ ಇರುತ್ತದೆ ಎಂದ ಅವರು ಇದರಲ್ಲಿ ಏನಾದರೂ ಅಧ್ಯಯನ ಮಾಡುವುದಾದರೆ ಮಾಡಿ ಸಚಿವ ಸಂಪುಟದ ಮುಂದೆ ಇಡುತ್ತಾರೆ. ಇನ್ನು ಕೋವೀಡ್ ಹಗರಣದ ಮಧ್ಯಂತರ ವರದಿ ತರಾತುರಿಯಲ್ಲಿ ಮಂಡನೆ ಮಾಡುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ 50 ಕೋಟಿ ಆಮಿಷ ದಾಖಲೆ ಬಿಡುಗಡೆ ವಿಚಾರವಾಗಿ ಮಾತನಾಡಿ, ಇದೊಂದು ಕೇವಲ ಅಪಪ್ರಚಾರ ಮಾಡುವ ಹುನ್ನಾರ ಆಗಿದ್ದು, ಶಾಸಕ ರವಿ ಗಣಿಗಯಿಂದ ಮಾತನಾಡಸುತಿದ್ದಾರೆ ಇದೊಂದು ಶುದ್ಧ ಸುಳ್ಳು ಎಂದು ಜನಗದೀಶ್ ಶೆಟ್ಟರ್ ಹೇಳಿದರು.












Click it and Unblock the Notifications