ಕಾಂಗ್ರೆಸ್ ಸರ್ಕಾರ ಪತನ: ಭವಿಷ್ಯ ನುಡಿದ ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಸೆಪ್ಟೆಂಬರ್ 11: ಕಾಂಗ್ರೆಸ್ ನಲ್ಲಿನ ಆಂತರಿಕ ವಿಚಾರ ದೊಡ್ಡ ಪ್ರಮಾಣದಲ್ಲಿ ಇದೆ. ಅದು ಬಹಿರಂಗ ಆಗಿದ್ದು ಅವರ ಕಚ್ಚಾಟದಿಂದಲೇ ಸರಕಾರ ಪತನ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, ಮುಡಾ ಹಗರಣ ಆದ ಬಳಿಕ ಇದು ಇನ್ನೂ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಆಗಬೇಕು ಅಂತಾ ಸಾಕಷ್ಟು ಜನ ತಯಾರಿ ನಡೆಸಿದ್ದಾರೆ.
ಇದರಿಂದಲೇ ಸರ್ಕಾರ ಬೀಳುತ್ತದೆ, ಭಾರತೀಯ ಜನತಾ ಪಕ್ಷದವರು ಏನು ಮಾಡಬೇಕಾಗಿಲ್ಲ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆ ಪ್ರಸ್ತಾಪ ನಿಲ್ಲಿಸಲು ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಹೇಳತಾ ಇದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಆವಾಗಿನಿಂದ ಯಾರು ಸಿಎಂ ಆಗಬೇಕು ಅಂತಾ. ಎರಡೂವರೆ ವರ್ಷಗಳ ಕಾಲ ಸಿಎಂ ಸಿದ್ಧರಾಮಯ್ಯ ಆಗಬೇಕು ಇನ್ನೂ ಎರಡೂವರೆ ವರ್ಷಗಳ ಕಾಲ ಡಿ ಕೆ ಶಿವಕುಮಾರ್ ಆಗಬೇಕು ಅಂತಾ ನಡೆಯುತ್ತಿದೆ. ಈ ಕುರಿತು ಆ ಪಕ್ಷದಲ್ಲಿ ಮಾತುಕತೆ ಆಗಿದೆ ಅಂತಾ ಮಾತು ಆರಂಭ ಆದವು. ಅಂದಿನಿಂದ ಇಂದಿನವರೆಗೂ ಗೊಂದಲ ನಡೆದೇ ಇದೆ ಎಂದರು.
ಡಿಸಿಎಂ, ರಾಹುಲ್ ಗಾಂಧಿ ಅಮೇರಿದಲ್ಲಿ ಭೇಟಿಯಾದ ವಿಚಾರವಾಗಿ ಮಾತನಾಡಿ, ಅಮೇರಿಕಾದಲ್ಲಿ ಭೇಟಿ ಆಗುವ ಅಗತ್ಯ ಏನು ಇತ್ತು ಎಂದ ಅವರು, ಕುಟುಂಬದ ಸಲುವಾಗಿ ರೆಸ್ಟ್ ಸಲುವಾಗಿ ಹೋಗಿದ್ದೇನೆ ಅಂತಾ ಹೇಳುತ್ತಾರೆ. ಆದರೆ ಅಮೇರಿಕಾದದಲ್ಲಿ ಭೇಟಿ ಆಗುವ ಅಗತ್ಯ ಏನು ಇತ್ತು. ದೆಹಲಿಯಲ್ಲಿಯೇ ಭೇಟಿ ಆಗಬಹುದು. ರಾಹುಲ್ ಗಾಂಧಿ ಹೋಗುವುದಕ್ಕೆ ಶಿವಕುಮಾರ್ ಅವರು ಹೋಗುವುದಕ್ಕೆ ಏನು ಇದೆ
ಇದು ಮೊದಲೇ ಪೂರ್ವ ನಿಯೋಜಿತ ಆದ ಕಾರ್ಯಕ್ರಮ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನ ದೆಹಲಿಯಿಂದ ವಾಪಾಸ್ ಬರುವಾಗ ಸಿಎಂ ಸಿದ್ಧರಾಮಯ್ಯಾ ನವರು ಭೇಟಿ ಮಾಡುವ ವಿಚಾರ ಏನು ಆಗುತ್ತದೆ.
ಏನು ಒಂದು ಒಳಗೆ ಸಂಚು ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ ಗೊಂದಲ ಉಂಟಾಗಿದ್ದು, ರಾಜ್ಯ ಸರ್ಕಾರದಲ್ಲಿ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಯಾವುದೇ ರೀತಿಯ ಅಭಿವೃದ್ಧಿಗೆ ಒಂದು ಪ್ಯಾಕೇಜ್ ಕೊಡಲಿಕ್ಕೆ ಆಗುತ್ತಿಲ್ಲ. ಗ್ಯಾರಂಟಿ ಯೋಜನೆಯಿಂದ ವ್ಯವಸ್ಥೆ ಹಾಳಾಗಿದೆ.
ಹಿಮಾಲಯ ಪ್ರದೇಶದಲ್ಲಿ ಶಾಸಕರಿಗೆ, ಸಚಿವರಿಗೆ ಸಂಬಳ ಕೊಡದೇ ಇರುವ ಸ್ಥಿತಿ ನಿರ್ಮಾಣ ಆಯಿತಾ ಅಲ್ಲಾ ಅದೇ ರೀತಿ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಇಲ್ಲಿಯವರೆಗೆ ೧ ಕೋಟಿ ೧೦ ಕೋಟಿ ಪ್ಯಾಕೇಜ್ ಕೊಡುತ್ತಿಲ್ಲ. ಯಾವುದೇ ಶಾಸಕರಿಗೆ ಅಭಿವೃದ್ಧಿ ಹಣ ಕೊಡಲು ಆಗುತ್ತಿಲ್ಲ. ಕಾಂಗ್ರೆಸ್ ನಾಯಕರು ರಾಹುಲ್ ಗಾಂದಿಗೆ ಪತ್ರ ಬರೆದಿದ್ದು ನೋಡಿದಿರೆ ಇದು ಆಂತರಿಕ ವಿಚಾರ ಏನು ನಡೆದಿದೆ ಅಂತಾ ಗೊತ್ತಾಗುತ್ತದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಬಿಜೆಪಿಯಲ್ಲಿ ಆದ ಹಗರಣ ಕುರಿತು ತನಿಖೆಗೆ ಐವರ ಸಚಿವರ ನೇತೃತ್ವದ ಸಮಿತಿ ರಚನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಮುಡಾ ,ವಾಲ್ಮೀಕಿ ಹಗರಣ ಮುಚ್ಚಿ ಹಾಕಿಲು ಈ ರೀತಿ ಸಮಿತಿ ರಚನೆ ಮಾಡಲಾಗಿದೆ ಎಂದ ಅವರು, ಒಂದೂವರೆ ವರ್ಷ ಏನು ಮಾಡಿದಿರೆ. ಇದೊಂದು ಬ್ಲಾಕ್ ಮೇಲ್ ತಂತ್ರ ಹೆದರಿಸುವ ತಂತ್ರ ಅಷ್ಟೇ, ಆದ್ದರಿಂದ ತಮ್ಮ ಮೇಲೆ ಬಂದ ಆರೋಪ ಮುಚ್ಚಿ ಹಾಕಲು ಈ ಸಮಿತಿ ರಚನೆ ಆಗಿದೆ. ಕಾಂಗ್ರೆಸ್ ನಲ್ಲಿ ನಡೆದ ಹಗರಣ ತಕ್ಷಣ ತನಿಖೆ ಆಗಬೇಕು. ವಾಲ್ಮೀಕಿ ಹಗರಣದಲ್ಲಿ ನಡೆದ ಕುರಿತು ಏನು ಆಗಿದೆ ಅಂತಾ ನಾಗೇಂದ್ರ ಉತ್ತರ ಕೊಡಬೇಕುಭ್ರಷ್ಟಾಚಾರ ಹಣದಿಂದ ಆಯ್ಕೆ ಆಗಿ ಬರುತ್ತಾರೆ ಅಂದರೆ ಏನು ಅರ್ಥ ಎಂದರು.
ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬ್ಲಾಸ್ಸ್ ಮಾಡಿದ ಭಯೋತ್ಪಾದಕರು ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವ ಹುನ್ನಾರ ವಿಚಾರವಾಗಿ ಮಾತನಾಡಿ, ಈ ರೀತಿ ವಿಧ್ವಂಸಕ್ಕ ಕೃತ್ಯ ನಡೆಸುವ ಕೆಲಸ ದೇಶದಲ್ಲಿ ನಡೆದಿದ್ದು, ಮಲ್ಲೇಶ್ವರಂ ದಲ್ಲಿನ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡಿದರೆ ಇದು ದೇಶಾದ್ಯಂತ ಪ್ರಚಾರ ಆಗುತ್ತದೆ. ಸರಕಾರಕ್ಕೆ ಸಹ ಕೆಟ್ಟ ಹೆಸರು ತರುವ ಉದ್ದೇಶ ಆಗಿದೆ ಎಂದರು.
ಇನ್ನು ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕೆ ದೇಶದ ಹೆಸರು ಹೆಚ್ಚಾಗಿದೆ. ಉಕ್ಕೀನ್ ಮತ್ತು ರಷ್ಯಾ ಕಾಯ್ದಾತಾ ಇವೆಈ ಎರಡು ದೇಶಗಳನ್ನ ಕರೆದು ಮಾತುಕತೆಯನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ ಮೋದಿಜಿ ಅವರು ಮಧ್ಯಸ್ಥಿಕೆ ವಹಿಸಿದರೇ ತಾವು ಸಿದ್ಧ ಎಂದರು. ಆದರೆ ರಾಹುಲ್ ಗಾಂಧಿ ಅವರು ಅಮೇರಿಕಕ್ಕೆ ಹೋಗಿ ದೇಶದ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನ ಖಂಡನೆ ಮಾಡುವೆ ಎಂದರು.












Click it and Unblock the Notifications