ಬೆಳಗಾವಿಯನ್ನು ಮಾರಲು "ಸಿದ್ದ"ವಾಗಿದೆ ಕಾಂಗ್ರೆಸ್ ಸರ್ಕಾರ: ಬಿಜೆಪಿ ವಾಗ್ದಾಳಿ
ಬೆಂಗಳೂರು, ಜನವರಿ 10: ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಸಂಪುಟದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಹೇಳಿಸುವ ಮೂಲಕ, ಬೆಳಗಾವಿ ಬಗ್ಗೆ ತಮ್ಮ ಸರ್ಕಾರದ ನಿಲುವು ಏನು ಎಂಬುದನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಬೆಳಗಾವಿಯನ್ನು ಮಾರಲು "ಸಿದ್ದ"ವಾಗಿದೆ ಕಾಂಗ್ರೆಸ್ ಸರ್ಕಾರ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಬುಧವಾರ ಟ್ವೀಟ್ ಮೂಲಕ ಕಿಡಿಕಾರಿರುವ ಬಿಜೆಪಿ, ಕನ್ನಡಿಗರನ್ನು ಒಡೆಯುವ, ಕರ್ನಾಟಕವನ್ನು ವಿಭಜಿಸುವ ಕರ್ನಾಟಕ ಕಾಂಗ್ರೆಸ್ ಕ್ಷುಲ್ಲಕ ಮನಸ್ಥಿತಿಗೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಾಡದ್ರೋಹಿ ಹೇಳಿಕೆ ಆರುವ ಮುನ್ನವೇ ಬೆಳಗಾವಿಯಲ್ಲಿ ದಾಖಲೆ ಸಂಗ್ರಹಿಸುವ ಕಾರ್ಯ ಆರಂಭವಾಗಿದೆ ಎಂದು ಬಿಜೆಪಿ ಹೇಳಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಅಕ್ರಮವನ್ನು ಖಂಡಿಸುವ ಬದಲು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೆನ್ನುಮೂಳೆಯಿಲ್ಲದ ರೀತಿ ವರ್ತಿಸುತ್ತಾ, ಬೆಳಗಾವಿಯನ್ನು ಮಾರಲು ತನ್ನ ಸಚಿವರನ್ನೇ ಛೂ ಬಿಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮಗೆ ಕನ್ನಡದ ಅಸ್ಮಿತೆ, ಕೇವಲ ಚುನಾವಣೆಯ ವಿಷಯ ಎಂಬುದು ಸಾಬೀತಾಗಿದೆ, ದೆಹಲಿಯ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಲು ಬೆಳಗಾವಿಯನ್ನೇ ಮಾರಲು ಹೊರಟಿರುವುದು ನಾಚಿಕೆಗೇಡು.
ಕನ್ನಡ ನೆಲ-ಜಲ-ಭಾಷೆಯ ವಿಚಾರದಲ್ಲಿ ಬಿಜೆಪಿ ಸರ್ಕಾರ ಎಂದೂ ಸಹ ರಾಜಿಯಾಗದೇ, ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದು ನಾಡ ರಕ್ಷಣೆಯನ್ನು ಮಾಡಿತ್ತು. ಕನ್ನಡದ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುವ ಕಾಂಗ್ರೆಸ್ ನಾಡ ರಕ್ಷಣೆಯನ್ನು ನಿರ್ಲಕ್ಷಿಸಿರುವುದು, ಕಾಂಗ್ರೆಸ್ ನ ಕನ್ನಡ ಪ್ರೇಮದ ಅಸಲಿಯತ್ತನ್ನು ಜಗಜ್ಜಾಹೀರಾಗಿಸಿದೆ.
ಬೆಳಗಾವಿಯನ್ನು ಮಾರಲು "ಸಿದ್ದ"ವಾಗಿದೆ ಕಾಂಗ್ರೆಸ್ ಸರ್ಕಾರ.
— BJP Karnataka (@BJP4Karnataka) January 10, 2024
ಕರ್ನಾಟಕದ ಅವಿಭಾಜ್ಯ ಅಂಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬುದನ್ನು ಸಿಎಂ @siddaramaiah ಅವರು, ತಮ್ಮ ಸಂಪುಟದ ಸಚಿವೆ @laxmi_hebbalkar ಅವರಿಂದ ಹೇಳಿಸುವ ಮೂಲಕ, ಬೆಳಗಾವಿ ಬಗ್ಗೆ ತಮ್ಮ ಸರ್ಕಾರದ ನಿಲುವು ಏನು ಎಂಬುದನ್ನು ಜಗಜ್ಜಾಹೀರುಗೊಳಿಸಿದ್ದಾರೆ.… pic.twitter.com/Bfy4dR7oet
ಮಜವಾದಿ ಸರ್ಕಾರ ಮಜಾ ಉಡಾಯಿಸುತ್ತಾ ಕರ್ನಾಟಕದ ಹಿತಾಸಕ್ತಿಯನ್ನು ಮರೆತಿದೆ. ಕರ್ನಾಟಕದ ಆಸ್ಮಿತೆಯನ್ನು ಹಾಳು ಮಾಡಲೆಂದೇ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಮಾಡುತ್ತಿರುವ ನಾಡ ದ್ರೋಹಿ ಕೃತ್ಯಗಳು ಇವು ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತಿಳಿಸಿದೆ.
▪️ಬೆಳಗಾವಿ ಬೇರೆ ರಾಜ್ಯಕ್ಕೆ ಸೇರಿದ್ದು ಎನ್ನುವ ಸಚಿವೆ
▪️ ಸ್ಟಾಲಿನ್ ಮೆಚ್ಚಿಸಲು ಕಳ್ಳತನದಿಂದ ಕಾವೇರಿ ನೀರು ಬಿಡುಗಡೆ
▪️ತಾಯಿ ಭುವನೇಶ್ವರಿ ಬದಲು ರಾಜೀವ್ ಗಾಂಧಿ ಪ್ರತಿಮೆ ನಿರ್ಮಾಣ
▪️ಹಂಪಿ ಉತ್ಸವ ನಡೆಸದೆ ಕನ್ನಡ ಸಂಸ್ಕೃತಿಗೆ ಕಡಿವಾಣ
▪️ಕನ್ನಡಿಗರ ಹಣ ಪಂಚರಾಜ್ಯ ಚುನಾವಣೆಗೆ ಬಳಸಿಕೊಂಡಿದ್ದು
▪️ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿ ಖಾಸಗಿಗೆ ಪ್ರೋತ್ಸಾಹ
▪️ರಾಜ್ಯದ ಪಾರಂಪರಿಕ ಕಟ್ಟಡಗಳ ಜೀರ್ಣೋದ್ಧಾರಕ್ಕೆ ಕೊಕ್ಕೆ












Click it and Unblock the Notifications