ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಂದ ಹಣ ಕೀಳುತ್ತಿರುವ ಪರಿ: ಬಿಜೆಪಿ

ಬೆಂಗಳೂರು, ಜನವರಿ 09: ಸ್ವಯಂಘೋಷಿತ ಆರ್ಥಿಕ ತಜ್ಞ ಅಲಿಯಾಸ್ ಮಜವಾದಿ‌ ಸಿದ್ದರಾಮಯ್ಯ ಅವರು ಗ್ಯಾರಂಟಿಗಳನ್ನು ಘೋಷಿಸಿ, ಅವೈಜ್ಞಾನಿಕವಾಗಿ ಅನುಷ್ಠಾನ ಮಾಡಿ, ಅದಕ್ಕಾಗಿ ಬೆಲೆ ಏರಿಕೆ ಮಾಡಿ ಫಲಾನುಭವಿಗಳ ಖಾತೆಗೆ ಇನ್ನೂ ಹಣ ಹಾಕದೆ ಕಿವಿ ಮೇಲೆ ಹೂವಿಟ್ಟು ಯಮಾರಿಸಿದ್ದೂ ಅಲ್ಲದೆ ಖಜಾನೆ ಖಾಲಿ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಗ್ಯಾರಂಟಿಗಳ ಗಿಮಿಕ್‌ನಿಂದ ಖಜಾನೆ ಖಾಲಿ ಮಾಡಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಂದ ಹಣ ಕೀಳುತ್ತಿರುವ ಪರಿ ಎಂದು ಕರ್ನಾಟಕ ಬಿಜೆಪಿ, ರಾಜ್ಯ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

Congress Government Has Emptied The Treasury From The Guarantee Scheme Says BJP

▪️ಯುವ ನಿಧಿ : ಪದವಿ ಶಿಕ್ಷಣ ಶುಲ್ಕ ಹೆಚ್ಚಳ
▪️ಗೃಹ ಜ್ಯೋತಿ : ವಿದ್ಯುತ್‌ ದರ ಮತ್ತೆ ಏರಿಕೆ ತಾಕೀತು
▪️ಅನ್ನಭಾಗ್ಯ : ಅಕ್ಕಿಯೂ ಇಲ್ಲ, ದುಡ್ಡು ಇಲ್ಲ
▪️ಶಕ್ತಿ : ಬಸ್‌ ದರಗಳ ಏರಿಕೆ ನಿಗಮಗಳು ಬರ್ಬಾದ್
▪️ಗೃಹ ಲಕ್ಷ್ಮಿ : ಪ.ಜಾತಿ/ಪ.ಸಮುದಾಯ ಅನುದಾನ ಬಳಕೆ

ಇನ್ನೂ ರಾಮ ಮಂದಿ ವಿಚಾರವಾಗಿ ಕಾಂಗ್ರೆಸ್‌ ಟ್ವೀಟ್‌ ಗೆ ತಿರುಗೇಟು ನೀಡಿದ ಬಿಜೆಪಿ, ಹಳ್ಳಿ ಹಳ್ಳಿಗಳಲ್ಲಿ ರಾಮ ಮಂದಿರ ನಿರ್ಮಾಣವಾಗಿದ್ದು ರಾಮ ಭಕ್ತರಿಂದ, ಆದರೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅದರಿಂದ ಬರುವ ಆದಾಯವನ್ನು ದೋಚಿದ್ದು ನೀವು! ಮಹಾತ್ಮಾ ಗಾಂಧಿಯವರ ರಾಮರಾಜ್ಯದ ಕಲ್ಪನೆಯನ್ನು ಮೂಲೆಗೆ ಸೇರಿಸಿದ್ದು ಕಾಂಗ್ರೆಸ್, ಆದರೆ ಇಂದು ರಾಮ ಮಂದಿರ ನಿರ್ಮಿಸಿ ಅವರ ಕಲ್ಪನೆಗೆ ಜೀವ ತುಂಬಿದ್ದು ಮೋದಿ ಸರ್ಕಾರ ಎಂದು ಹೇಳಿದೆ.

Congress Government Has Emptied The Treasury From The Guarantee Scheme Says BJP

ರಾಮ ಮಂದಿರದ ಬೀಗ ತೆಗಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು ರಾಜೀವ್ ಗಾಂಧಿಯಾದರೆ..!? ರಾಮ‌ ಮಂದಿರದ ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲು ಕಪಿಲ್ ಸಿಬಲ್‌ರನ್ನು ಕಳುಹಿಸಿದ್ದು ಯಾರು ? ಸ್ವಾತಂತ್ರ್ಯ ದೊರಕಿದಾಗಿನಿಂದ ರಾಮ ಮಂದಿರದ ಕಲ್ಪನೆ ದೇಶದ ಜನರಲ್ಲಿತ್ತು, ಅಂದಿನಿಂದ ಇಂದಿನವರೆಗೂ ನಿರ್ಮಾಣವಾಗದ ರಾಮ ಮಂದಿರ ನಿಮ್ಮ ರಾಜೀವ್ ಗಾಂಧಿ ಕಾಲಘಟ್ಟದಲ್ಲಿ ಯಾಕೆ ಆಗಲಿಲ್ಲ ? ತಡೆದವರು ಯಾರು ? ಎಂದು ಪ್ರಶ್ನಿಸಿದೆ.

ರಾಮ ಮತ್ತು ರಾಮನ ಆದೇಶವನ್ನು ಪಾಲಿಸುತ್ತಾ ಬಂದಿದ್ದರೆ ಕಾಂಗ್ರೆಸ್ ಪಕ್ಷ ರಾಮನನ್ನು ಕೇವಲ ಕಾಲ್ಪನಿಕ ಎಂದು ಏಕೆ ವ್ಯಂಗ್ಯ ಮಾಡುತ್ತಿತ್ತು ? ಕಳೆದ 70 ವರ್ಷಗಳಿಂದಲೂ ಹಿಂದುಗಳ ಆದರ್ಶ ಪುರುಷನಾದ ಶ್ರೀ ರಾಮನ ಮಂದಿರ ನಿರ್ಮಾಣ ಮಾಡಲು ಮೀನಾಮೇಷ ಎಣಿಸಿದ್ದು ಕಾಂಗ್ರೆಸ್ಸಿನಿಂದ ಜನರ ನಂಬಿಕೆಗೆ ಆದ ದುರಂತ! ರಾಮಾಯಣ ಹೇಗೆ ಜನರ ಮನದಲ್ಲಿದೆಯೋ ಹಾಗೆಯೇ ಕಾಂಗ್ರೆಸ್ಸಿಗರ ಸುಳ್ಳಿನ ಸರಪಳಿ ದೇಶದ ಜನತೆಯ ಮನಸ್ಸಿನಲ್ಲಿ ಆಳವಾಗಿದೆ‌‌ ಎಂದು ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+