Government Employees: ಸರ್ಕಾರಿ ನೌಕರರಿಂದ ವೇತನದ ಶೇ 5ರಷ್ಟು ಹಣ ಕೇಳಿದ ರಾಜ್ಯ ಸರ್ಕಾರ!
Government Employees: ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಮೂಲಕ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಆದರೆ, ಇದೀಗ ಸರ್ಕಾರಿ ನೌಕರರಿಂದಲೇ ಸಂಬಳದ ಶೇ 5ರಷ್ಟು ಮೊತ್ತವನ್ನು ಕೊಡುವಂತೆ ಕೇಳಿದೆ. ರಾಜ್ಯ ಸರ್ಕಾರದ ಈ ಪ್ರಸ್ತಾವನೆಗೆ ಕರ್ನಾಟಕದ ಸರ್ಕಾರಿ ನೌಕರರಿಂದ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರವು ಹೊಸ ಪಿಂಚಣಿ ಯೋಜನೆ ಹಾಗೂ ಏಳನೇ ವೇತನ ಆಯೋಗ ಜಾರಿ ವಿಚಾರಗಳಲ್ಲಿ ಗುಡ್‌ನ್ಯೂಸ್ ಕೊಡುತ್ತಿದೆ. ಈ ರೀತಿ ಇರುವಾಗಲೇ ಸರ್ಕಾರಿ ನೌಕರರಿಂದ ಸಂಬಳದ ನಿರ್ದಿಷ್ಟ ಮೊತ್ತವನ್ನು ಕೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಅದರ ವಿವರ ಇಲ್ಲಿದೆ.
ರಾಜ್ಯ ಸರ್ಕಾರದ ಕೆಲವೊಂದು ನಿರ್ಧಾರಗಳು ಹಾಗೂ ಪ್ರಸ್ತಾವನೆಗಳು ಹೆಚ್ಚು ಟೀಕೆಗೆ ಒಳಗಾಗಿರುವುದು ಇದೆ. ಇದೀಗ ರಾಜ್ಯ ಸರ್ಕಾರವು ಸರ್ಕಾರಿ ವೇತನದ ನಿರ್ದಿಷ್ಟ ಮೊತ್ತವನ್ನು ಕೊಟ್ಟರೆ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದ್ದು. ಈ ವಿಚಾರವಾಗಿ ಪರ - ವಿರೋಧ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ರಾಜ್ಯ ಸರ್ಕಾರದ ಪ್ರಸ್ತಾವನೆ ಏನು ಎನ್ನುವುದನ್ನು ನೋಡೋಣ.

ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸರ್ಕಾರಿ ನೌಕರರಿಂದ ವೇತನದ ಶೇ5ರಷ್ಟು ಹಣವನ್ನು ಕೊಡುವಂತೆ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ರೀತಿ ವೇತನದ ಮೊತ್ತವನ್ನು ಸರ್ಕಾರಕ್ಕೆ ನೀಡುವಂತೆ ಕೇಳಿರುವುದು ಅಚ್ಚರಿ ಮೂಡಿಸಿದೆ. ಈ ಸಂಬಂಧ ಮಾತನಾಡಿರುವ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಈ ರೀತಿಯ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದ್ದಾರೆ. ಸರ್ಕಾರದ ಹೊಸ ಸಲಹೆ / ಪ್ರಸ್ತಾವನೆ ಏನು ಎನ್ನುವುದು ಮುಂದಿದೆ.
ಕರ್ನಾಟಕದಲ್ಲಿ ಒಟ್ಟು 2.5 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರು ಇದ್ದಾರೆ. ಇಷ್ಟು ಜನ ಸರ್ಕಾರಿ ನೌಕರರು ವೇತನದ ಶೇ5ರಷ್ಟು ಹಣ ನೀಡಿದರೂ ಸಾಕು ರಾಜ್ಯದಲ್ಲಿರುವ ಸಮುದಾಯದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಅಲ್ಲದೆ ನಾವು ಸಮ ಸಮಾಜವನ್ನು ನಿರ್ಮಿಸಿಕೊಳ್ಳಲು ಸಾಧ್ಯವಿದೆ ಎಂದು ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ ಈ ವಿಚಾರವಾಗಿ ಪರ - ವಿರೋಧ ಚರ್ಚೆ ಶುರುವಾಗಿದೆ. ಬಹುತೇಕ ಸರ್ಕಾರಿ ನೌಕರರು ಈ ಪ್ರಸ್ತಾವನೆಗೆ ನೋ ಅಂತಲೇ ಹೇಳುತ್ತಿದ್ದಾರೆ.
ಪ್ರತ್ಯೇಕ ನಿಧಿ ಬಗ್ಗೆ ಪ್ರಸ್ತಾವನೆ: ಇನ್ನು ಇದೇ ಸಂದರ್ಭದಲ್ಲಿ ಪ್ರತ್ಯೇಕ ನಿಧಿಯನ್ನು ಪ್ರಸ್ತಾವನೆ ಮಾಡುವ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ. ಸಮುದಾಯದ ಅಭಿವೃದ್ಧಿ ಹಾಗೂ ಸಮ ಸಮಾಜದ ನಿರ್ಮಾಣಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸನೆ ಮಾಡುವ ಮೂಲಕ, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಶೇ 5 ವಂತಿಗೆ / ಹಣ ಕೊಟ್ಟರೆ ಸಮಾಜದಲ್ಲಿ ನಾವು ಹೊಸ ಬದಲಾವಣೆಯನ್ನೇ ಸೃಷ್ಟಿ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜಕಾರಣಿಗಳು ಮೊದಲು ಕೊಡಲಿ: ಇನ್ನು ಸಚಿವರ ಈ ಅಭಿಪ್ರಾಯಕ್ಕೆ ಸಾರ್ವಜನಿಕ ವಲಯದಿಂದಲೂ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಹೌದು ಇದು ಒಳ್ಳೆಯ ಸಲಹೆ ಸಮಾಜದ ಅಭಿವೃದ್ಧಿಗೆ ಈ ರೀತಿಯ ಸಲಹೆಗಳು ಬೇಕು ಅಂತ ಹೇಳಿದ್ದರೆ. ಇನ್ನೂ ಕೆಲವರು ಇದು ಒಳ್ಳೆಯ ನಿರ್ಧಾರ ಆದರೆ, ಮೊದಲು ರಾಜಕಾರಣಿಗಳೇ ಕೊಡಲಿ. ಸಮುದಾಯದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಒಳ್ಳೆಯ ಹುದ್ದೆಗಳನ್ನು ಅನುಭವಿಸಿರುವವರು ಹಣ ಕೊಟ್ಟು ಮಾದರಿಯಾಗಲಿ ಅಂತ ಜನ ಹೇಳ್ತಿದ್ದಾರೆ.
ಗ್ಯಾರಂಟಿ ಯೋಜನೆ ಪ್ರಸ್ತಾವನೆ: ಇನ್ನು ರಾಜ್ಯ ಸರ್ಕಾರವು ಈ ರೀತಿ ಪ್ರಸ್ತಾವನೆ ಮಾಡಿರುವುದಕ್ಕೆ ಜನ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳ ಹಣಕ್ಕೆ ಕಡಿಮೆಯಾಗಿದೆಯೇ ಅಂತ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications