ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಫೈನಲ್? ಸುಮಲತಾನೂ ಅಲ್ಲ, ‌ರಮ್ಯಾನೂ ಅಲ್ಲ- ಮತ್ಯಾರು?

ಮಂಡ್ಯ, ಫೆಬ್ರವರಿ 07: 2019 ರ ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ, ಈ ಬಾರಿಯ ಚುನಾವಣೆಯಲ್ಲಿಯೂ ಸಹ ಚುನಾವಣಾ ರಂಗು ಜೋರಾಗಿದೆ. ಮಂಡ್ಯ ರಾಜಕಾರಣ ಅಂದರೆ ಇಂಡಿಯಾನೇ ತಿರುಗಿ ನೋಡುತ್ತೆ. ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕಾವು ಜೋರಾಗಿದೆ.

ಹೌದು, ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿಬ ಹಾಗೂ ಜೆಡಿಎಸ್‌, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸಿದ್ದು,ಕಮಲದಳ ಮೈತ್ರಿಯಿಂದಾಗಿ ಈ ಬಾರೀ ಸುಮಲತಾ ಅಂಬರೀಶ್‌ ಅವರಿಗೆ ಮಂಡ್ಯ ಕ್ಷೇತ್ರ ಕೈ ತಪ್ಪಲಿದೆ.

Congress Finalized Mandya Lok Sabha Candidate: Neither Sumalatha Nor Ramya in List: Then Know Who?

2019 ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿ ಗೆಲುವು ಕಂಡಿದ್ದ ಸುಮಲತಾ 2023 ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಬೆಂಬಲವನ್ನ ಸೂಚಿಸಿದ್ದರು. ಆದರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಬಹುತೇಕ ಜೆಡಿಎಸ್​ನಿಂದಲೇ ಅಭ್ಯರ್ಥಿ ಘೋಷಣೆ ಆಗುವ ಸಂಭವ ಕೂಡ ಇದೆ. ಈ ನಡುವೆ ಬಿಜೆಪಿಗೆ ಸಂಪೂರ್ಣ ಬೆಂಬಲ ಘೋಷಿಸಿರೋ ಸಂಸದೆ ಸುಮಲತಾ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದು, ಕಾಂಗ್ರೆಸ್‌ ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಮಂಡ್ಯದಿಂದ ಈ ಬಾರೀ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕುಮಾರಸ್ವಾಮಿ ಅವರಿಗೆ ಹಲವು ಹಳೇ ಮೈಸೂರು ಭಾಗದಿಂದ ಕಾರ್ಯಕರ್ತರು ಸಹ ಒತ್ತಡ ಹಾಕುತ್ತಿದ್ದು,ಈ ಬಾರೀಯೂ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೇ ಗೆಲ್ಲುವುದು ಕಷ್ಟ ಸಾಧ್ಯ.

Congress Finalized Mandya Lok Sabha Candidate: Neither Sumalatha Nor Ramya in List: Then Know Who?

ಹಾಗಾಗಿ ಕಾಂಗ್ರೆಸ್‌ ನಿಂದ ಸ್ಪರ್ಧೆ ನಡೆಸುತ್ತಾರಾ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇತ್ತ ನಟಿ ಹಾಗೂ ಮಾಜಿ ಸಂಸದೆಯಾಗಿರುವ ರಮ್ಯಾ ಅವರು ಸಹ ಈ ಬಾರೀ ಮಂಡ್ಯದಿಂದ ಸ್ಪರ್ಧೆ ನಡೆಸುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಇನ್ನೂ ಕಾಂಗ್ರೆಸ್‌ ನಿಂದ ಮಂಡ್ಯ ಕ್ಷೇತ್ರದಿಂದ ಯಾರೆಲ್ಲಾ ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲ ಕ್ಷಣ ಕ್ಷಣದಿಂದ ಹೆಚ್ಚಾಗುತ್ತಿದೆ. ಹಾಗೆಯೇ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದ್ದು, ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್‌ ನಿಂದ ಹಲವರ ಹೆಸರುಗಳು ಮುನ್ನಲೆಗೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸದ್ದಿಲ್ಲದೇ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡ್​​ಗೆ ಪಟ್ಟಿ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Congress Finalized Mandya Lok Sabha Candidate: Neither Sumalatha Nor Ramya in List: Then Know Who?

ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಟಿ ರಮ್ಯಾ, ಸಚಿವ ಚಲುವರಾಯಸ್ವಾಮಿ, ಚಲುವರಾಯಸ್ವಾಮಿ ಪತ್ನಿ, ಕೊನೆಗೆ ಸುಮಲತಾ ಅಂಬರೀಶ್ ಸ್ಪರ್ಧಿಸಲಿದ್ದಾರೆ ಎಂದು ಚರ್ಚೆ ನಡೆದಿತ್ತು. ಆದರೆ, ಇದೀಗ ಕೊನೆಗೆ ಸದ್ದಿಲ್ಲದೇ ಕಾಂಗ್ರೆಸ್​​ ಅಭ್ಯರ್ಥಿಯ ಆಯ್ಕೆ ಆಗಿದೆಯಂತೆ. ಮಂಡ್ಯದಲ್ಲಿ ಸ್ಟಾರ್ ಚಂದ್ರು ಎಂದೇ ಫೇಮಸ್ ಆಗಿರೋ ಗುತ್ತಿಗೆದಾರ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅಭ್ಯರ್ಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯ ಭಾಗದಲ್ಲಿ ಸ್ಟಾರ್​ ಚಂದ್ರು ಎಂದು ಫೇಮಸ್. ಸ್ಟಾರ್ ಚಂದ್ರು ಮೂಲ ಹೆಸರು ವೆಂಕಟರಮಣೇಗೌಡ, ಎಲ್ಲಾ ಪಕ್ಷದ ನಾಯಕರಿಗೂ ಚಿರಪರಿಚಿತ. ಇನ್ನೂ ಮಂಡ್ಯ ಉಸ್ತುವಾರಿಯಾಗಿರುವ ಸಚಿವ ಚಲುವರಾಯಸ್ಚಾಮಿ ಹಾಗೂ ಮಂಡ್ಯ ಕಾಂಗ್ರೆಸ್ ಶಾಸಕರು ಸ್ಟಾರ್ ಚಂದ್ರುಗೆ ಟಿಕೆಟ್ ಕೊಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಇನ್ನು ಸ್ಟಾರ್‌ ಚಂದ್ರು ಅವರಿಗೆ ಕಾಂಗ್ರೆಸ್‌ ನ ಹಿರಿಯ ನಾಯಕರಿಂದಲೇ ಕ್ಷೇತ್ರ ಸುತ್ತುವಂತೆ ಸೂಚನೆ ಸಿಕ್ಕಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+