ಸಿದ್ದರಾಮಯ್ಯ ಹತ್ಯೆ ಕುರಿತ ಹೇಳಿಕೆ: ಕಟೀಲ್‌, ಅಶ್ವಥ್ ನಾರಾಯಣ್ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ದೂರು- ಮಾಹಿತಿ, ವಿಡಿಯೊ

ಟಿಪ್ಪು ಮತ್ತು ಸಿದ್ದರಾಮಯ್ಯನವರ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ. ಮಾಹಿತಿ, ವಿಡಿಯೊ ಇದೆ ನೋಡಿ

ಬೆಂಗಳೂರು, ಫೆಬ್ರವರಿ 16: ಕರ್ನಾಟಕದ ವಿಧಾನಸಭೆ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳು ವಿವಾದದ ಸ್ವರೂಪ ಪಡೆಯುತ್ತಿದೆ. ಟಿಪ್ಪು ಮತ್ತು ಸಿದ್ದರಾಮಯ್ಯನವರ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ. ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಅಶ್ವಥ್ ನಾರಾಯಣ್ ಅವರು ಶಾಸಕರಾಗಿದ್ದಾರೆ.

 ಅಶ್ವಥ್ ನಾರಾಯಣ್ ಹೇಳಿದ್ದೇನು?

ಅಶ್ವಥ್ ನಾರಾಯಣ್ ಹೇಳಿದ್ದೇನು?

ಮಂಡ್ಯದಲ್ಲಿ ಬುಧವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅಶ್ವಥ್ ನಾರಾಯಣ್ , 'ಟಿಪ್ಪುವಿನ ಮಗ ಸಿದ್ದರಾಮಯ್ಯ ಬರುತ್ತಾರೆ. ನಿಮಗೆ ಟಿಪ್ಪು ಬೇಕಾ ಅಥವಾ ಸಾವರ್ಕರ್? ನಾವು ಟಿಪ್ಪು ಸುಲ್ತಾನ್ ಅನ್ನು ಎಲ್ಲಿಗೆ ಕಳುಹಿಸಬೇಕು? ಉರಿಗೌಡ ಮತ್ತು ನಂಜೇಗೌಡರು ಏನು ಮಾಡಿದರು? ಅದೇ ರೀತಿಯಲ್ಲಿ ಅವರನ್ನು ಹೊಡೆದು ಹಾಕಬೇಕು' ಎಂದಿದ್ದರು.

 ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?

ಸಿದ್ದರಾಮಯ್ಯ ಪ್ರತಿಕ್ರಿಯೆ ಏನು?

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 'ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರು ಟಿಪ್ಪುವನ್ನು ಕೊಂದ ರೀತಿಯಲ್ಲಿಯೇ ನನ್ನನ್ನೂ ಸಾಯಿಸಿ ಎಂದು ಮನವಿ ಮಾಡಿದ್ದಾರೆ. ಅಶ್ವಥ್ ನಾರಾಯಣ್, ಜನರನ್ನು ಪ್ರಚೋದಿಸಲು ಏಕೆ ಪ್ರಯತ್ನಿಸುತ್ತಿದ್ದೀರಿ? ನೀವೇ ಬಂದೂಕು ತೆಗೆದುಕೊಳ್ಳಿ' ಎಂದು ಹೇಳಿದ್ದಾರೆ.

 ಸಚಿವರ ವಿರುದ್ಧ ಕ್ರಮ ಏಕಿಲ್ಲ?

ಸಚಿವರ ವಿರುದ್ಧ ಕ್ರಮ ಏಕಿಲ್ಲ?

'ಹತ್ಯೆ ಮಾಡುವಂತೆ ಬಹಿರಂಗವಾಗಿ ಮನವಿ ಮಾಡಿದ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮೌನವಾಗಿದ್ದಾರೆ. ಅಶ್ವಥ್‌ ನಾರಾಯಣ ಹೇಳಿಕೆಗೆ ಅವರ ಸಮ್ಮತಿ ಇದೆ ಎಂಬುದನ್ನು ಇದು ತೋರಿಸುತ್ತದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

'ಕರ್ನಾಟಕವನ್ನು ಗುಜರಾತ್‌ನಂತೆ ಆಗಲು ಕನ್ನಡಿಗರು ಎಂದಿಗೂ ಬಿಡುವುದಿಲ್ಲ. ಅಶ್ವಥ್‌ ನಾರಾಯಣ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ ಸಿದ್ದರಾಮಯ್ಯ, ಅಶ್ವಥ್ ನಾರಾಯಣ ಅವರು ಮಾನಸಿಕವಾಗಿ ಅಸ್ಥಿರರಾಗಿದ್ದಾರೆ' ಎಂದು ತಿಳಿಸಿದ್ದಾರೆ.

 ದಿನೇಶ್‌ ಗುಂಡೂರಾವ್‌ ಟ್ವೀಟ್‌

ದಿನೇಶ್‌ ಗುಂಡೂರಾವ್‌ ಟ್ವೀಟ್‌

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, 'ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯರನ್ನು ಕೊಲ್ಲಬೇಕು ಎಂಬ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ಕೊಲೆಗಡುಕ ಮನಃಸ್ಥಿತಿಯ ಪರಮಾವಧಿ. ಸಿದ್ದರಾಮಯ್ಯರನ್ನು ಸೈದಾಂತಿಕವಾಗಿ ಎದುರಿಸಲಾಗದ ಅಶ್ವಥ್ ನಾರಾಯಣ್‌ರಂತಹ ರಣಹೇಡಿಗಳು ಮಾತ್ರ ಕೊಲ್ಲು, ಕೊಚ್ಚು ಎಂದು ಮಾತಾಡುತ್ತಾರೆ. ಯಾಕೆಂದರೆ ಹೇಡಿಗಳ ಅಂತಿಮ ಅಸ್ತ್ರವೇ ಹಿಂಸೆ ಮತ್ತು ಕ್ರೌರ್ಯ' ಎಂದು ಹೇಳಿದ್ದಾರೆ.

'ಅಶ್ವಥ್ ನಾರಾಯಣ್ ಸಚಿವ ಸ್ಥಾನದಲ್ಲಿದ್ದು ಬಹಿರಂಗವಾಗಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕೊಲ್ಲುವಂತೆ ಕರೆ ಕೊಟ್ಟಿದ್ದಾರೆ.ಇದರರ್ಥ ರಾಜಕೀಯ ವಿರೋಧಿಗಳನ್ನು ಕೊಲ್ಲಿಸುವುದು BJPಯ ಕಾರ್ಯಸೂಚಿಯಾಗಿರಬಹುದು. ಕೊಲೆ ಮಾಡಿಸುವುದು BJPಯ ಕಾರ್ಯಸೂಚಿಯಾಗಿಲ್ಲದಿದ್ದರೆ ಸಚಿವರು ಬಹಿರಂಗವಾಗಿ ಸಿದ್ದರಾಮಯ್ಯರ ಕೊಲೆಗೆ ಪ್ರಚೋದಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.

'ವಿಪಕ್ಷ ನಾಯಕರನ್ನು ಕೊಲೆ ಮಾಡುವಂತೆ ಅಶ್ವಥ್ ನಾರಾಯಣ್ ಹೇಳಿದ್ದರೂ ಬೊಮ್ಮಾಯಿ ಬಾಯಿ ಬಿಟ್ಟಿಲ್ಲ. ಅದೇ ರೀತಿ BJPಯ ಯಾವೊಬ್ಬ ನಾಯಕರೂ ಈ ಹೇಳಿಕೆ ಖಂಡಿಸಿಲ್ಲ. ಅಂದರೆ ಸಿದ್ದರಾಮಯ್ಯರನ್ನು ಕೊಲ್ಲಿಸಲು ಬೊಮ್ಮಾಯಿ ಹಾಗೂ BJP ನಾಯಕರ ಸಮ್ಮತಿ ಇದೆ ಎಂದು ಅರ್ಥವೇ? ಅಥವಾ ಸರ್ಕಾರವೇ ಸಿದ್ದರಾಮಯ್ಯರನ್ನು ಕೊಲ್ಲಿಸಲು ಒಳಸಂಚು ರೂಪಿಸುತ್ತಿದೆಯೇ?' ಎಂದು ಕೇಳಿದ್ದಾರೆ.

'ಸಾರ್ವಜನಿಕವಾಗಿ ವಿಪಕ್ಷ ನಾಯಕರನ್ನು ಕೊಲ್ಲುವಂತೆ ಅಶ್ವಥ್ ನಾರಾಯಣ್ ಪ್ರಚೋದನೆ ನೀಡಿರುವುದು ಗುರುತ್ತರ ಅಪರಾಧ. ಹೀಗೆ ಬಹಿರಂಗವಾಗಿ ಸಿದ್ದರಾಮಯ್ಯರ ಕೊಲೆಗೆ ಕರೆ ಕೊಟ್ಟಿದ್ದರೂ ಅಶ್ವಥ್ ನಾರಾಯಣ್ ವಿರುದ್ಧ ಈ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬೊಮ್ಮಾಯಿಯವರೇ ನಿಮ್ಮ‌ ಸರ್ಕಾರದಲ್ಲಿ ಕೊಲೆಗಡುಕರಿಗೂ ರಕ್ಷಣೆಯೇ?' ಎಂದು ಟ್ವೀಟ್‌ ಮಾಡಿದ್ದಾರೆ.

 ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದೇನು?

ನಳೀನ್‌ ಕುಮಾರ್‌ ಕಟೀಲ್‌ ಹೇಳಿದ್ದೇನು?

ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾತನಾಡಿದ್ದ ನಳೀನ್‌ ಕುಮಾರ್‌ ಕಟೀಲ್‌, 'ಇಲ್ಲಿ ಟಿಪ್ಪು ಆರಾಧಕರು ಉಳಿಯಬಾರದು. ಇದು ರಾಮ ಹಾಗೂ ಹನಮಂತರ ಜಾಗವಾಗಿದೆ. ಇಲ್ಲಿ ಕೇವಲ ಹನುಮ ಹಾಗೂ ರಾಮನ ಬೆಂಬಲಿಗರು ಉಳಿಯಬೇಕು' ಎಂದು ಹೇಳಿದ್ದಾರೆ. ಇದು ದೇಶದಾದ್ಯಂತ ವಿವಾದಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+