ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಹೇಳಿಕೆ ಉಲ್ಲೇಖಿಸಿದ ಕಾಂಗ್ರೆಸ್!

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾಕಷ್ಟು ಚರ್ಚೆ ನಡೆದು ಬಿಜೆಪಿ ಮತ್ತು ಕಾಂಗ್ರೆಸ್ ಫೈಟ್ ಮಾಡ್ತಿವೆ. ಒಂದು ಕಡೆ ಬಿಜೆಪಿ, ಫ್ರೀ ಬಸ್ ಯೋಜನೆಯ ಬಗ್ಗೆ ವಾಗ್ದಾಳಿ ನಡೆಸುತ್ತಿದೆ. ಇನ್ನೊಂದ್ಕಡೆ ಕಾಂಗ್ರೆಸ್, ತನ್ನ 5 ಗ್ಯಾರಂಟಿ ಪೈಕಿ ಒಂದಾದ ಉಚಿತ ಬಸ್ ಯೋಜನೆ ಬಗ್ಗೆ ಪ್ರತ್ಯುತ್ತರ ಕೂಡ ನೀಡುತ್ತಿದೆ. ಈ ಹೊತ್ತಲ್ಲೇ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ವಾಗ್ಬಾಣ ಪ್ರಯೋಗಿಸಿದೆ.

ಹೌದು, ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕೋಟ್ಯಂತರ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ಮೂಲಕ ಯೋಜನೆಯ ಸದುಪಯೋಗ ಮಾಡಿಕೊಂಡಿದ್ದಾರೆ. ಹಾಗೇ ಯೋಜನೆ ಬಗ್ಗೆ ಬಿಜೆಪಿ ಹಲವು ರೀತಿ ಆರೋಪ ಮಾಡುತ್ತಲೇ ಬಂದಿದೆ. ಆದರೆ ಇದೀಗ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಹುಂಡಿ ಸಂಗ್ರಹ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅದ್ರಲ್ಲು ಶಕ್ತಿ ಯೋಜನೆ ಬಳಿಕ ದೇಗುಲಕ್ಕೆ ಭಾರಿ ಪ್ರಮಾಣದಲ್ಲಿ ಮಹಿಳೆಯರು ಬರುತ್ತಿದ್ದಾರೆ ಎಂಬುದು ಅಂಕಿ-ಅಂಶದಿಂದ ಗೊತ್ತಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಹೇಳಿಕೆ ಉಲ್ಲೇಖಿಸಿದೆ.

Congress explained about shakti scheme success

ಜನರ ಭಕ್ತಿಗೆ ಪುಷ್ಠಿ ಸಿಕ್ಕಿದೆ!

ಬಿಜೆಪಿಗೆ ತಿರುಗೇಟು ನೀಡಲು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಸಿಕ್ಕಿದೆ, ದೇವಾಲಯಗಳ ಆದಾಯಕ್ಕೆ ಬೆಂಬಲ ಸಿಕ್ಕಿದೆ, ಜನರ ಭಕ್ತಿಗೆ ಪುಷ್ಠಿ ಸಿಕ್ಕಿದೆ. ಆರ್ಥಿಕತೆಯ ಚಲನಶೀಲತೆಯ ಬಗ್ಗೆ ಅರಿವಿಲ್ಲದ ಬಿಜೆಪಿಗರ "ಪಾಕಿಸ್ತಾನ, ಶ್ರೀಲಂಕಾ" ಎಂಬ ಅಪಪ್ರಚಾರಕ್ಕೆ ಉತ್ತರವೂ ಸಿಕ್ಕಿದೆ! ಎಷ್ಟೋ ದಿನಗಳಿಂದ ತಮ್ಮ ನೆಚ್ಚಿನ ದೇವಾಲಯಗಳ ಭೇಟಿಗೆ ಕಾತರಿಸುತ್ತಿದ್ದ ಜನ ಶಕ್ತಿ ಯೋಜನೆಯ ಲಾಭ ಪಡೆದು ದೇವರ ದರ್ಶನ ಪಡೆಯುತ್ತಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಹೇಳುವಂತೆ ನಮ್ಮ ಸರ್ಕಾರಕ್ಕೆ ಜನತೆ ಹರಿಸುತ್ತಿದ್ದಾರೆ, ಜನರ ಧಾರ್ಮಿಕ ನಂಬಿಕೆಗಳಿಗೆ ಉತ್ತೇಜಿಸಿದ ಸಾರ್ಥಕತೆ ನಮಗಿದೆ, ಆದರೆ ಸೋಕಾಲ್ಡ್ ಧರ್ಮ ರಕ್ಷಕರಾದ ಬಿಜೆಪಿಗರು ಮಾಡಿದ್ದೇನು ಎನ್ನುವುದನ್ನು ಉತ್ತರಿಸಬಲ್ಲರೇ?' ಎಂದು ಪ್ರಶ್ನೆ ಮಾಡಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ದಾಳಿ!

ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ಹಗರಣಗಳನ್ನು ತನಿಖೆಗೆ ವಹಿಸಿದರೆ ಬಿಜೆಪಿಗರಿಗೇಕೆ ಆಕ್ರೋಶ ಉಂಟಾಗುತ್ತದೆ? ಸತ್ಯ ಹರಿಶ್ಚಂದ್ರನ ವಂಶದವರು ಎಂದುಕೊಳ್ಳುವ ಬಿಜೆಪಿಗರಿಗೆ ನ್ಯಾಯಾಂಗ ತನಿಖೆಗೆ ವಹಿಸಿದರೆ ಆತಂಕವೇಕೆ? @BSBommai ಅವರೇ, ಹಗರಣವೊಂದರ ಪ್ರಾಮಾಣಿಕ ತನಿಖೆಯಾಗಬೇಕು ಎಂದು ಬಯಸುವುದು ದ್ವೇಷ ರಾಜಕಾರಣ ಆಗುವುದು ಹೇಗೆ? ಹೇಳಿ. ತಾವೇ ಮುಖ್ಯ ಆರೋಪಿ ಎಂಬಂತೆ ಆತಂಕ ಪಡುತ್ತಿರುವುದೇಕೆ?' ಎಂದಿದೆ ಕಾಂಗ್ರೆಸ್.

ಒಟ್ಟಾರೆ ಹೇಳೋದಾದರೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಉಚಿತ ಬಸ್ ಪ್ರಯಾಣದ ಬಗ್ಗೆ ನಡೆಯುತ್ತಿರುವ ವಾರ್ ಈಗಲೇ ನಿಲ್ಲುವಂತೆ ಕಾಣುತ್ತಿಲ್ಲ. ಇನ್ನಷ್ಟು ದಿನ ಈ ವಿಚಾರದಲ್ಲಿ ಎರಡೂ ಕಡೆ ದೊಡ್ಡ ಕದನ ನಿರೀಕ್ಷೆ ಮಾಡಬಹುದು. ಕಾಂಗ್ರೆಸ್ ಶಕ್ತಿ ಯೋಜನೆಯ ಪರ ಬ್ಯಾಟ್ ಬೀಸಿದರೆ, ಇತ್ತ ಕಮಲ ಪಾಳಯ ಶಕ್ತಿ ಯೋಜನೆ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದೆ. ಈ ಕಿತ್ತಾಟ ಮುಂದೆ ಎಲ್ಲಿ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡ್ಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+