Congress Manifesto 2023; ಅಡಿಕೆ ಬೆಳೆಗಾರರಿಗೆ ಭರವಸೆ

ಬೆಂಗಳೂರು, ಮೇ 02; ಕರ್ನಾಟಕ ವಿಧಾನಸಭೆ ಚುನಾವಣೆಗೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮೇ 10ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಪ್ರಣಾಳಿಕೆಯಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಸಮಿತಿ ರಚನೆ ಮಾಡಿತ್ತು. 5 ಗ್ಯಾರಂಟಿಗಳ ಹೊರತಾಗಿಯೂ ಹಲವಾರು ಹೊಸ ಘೋಷಣೆ ಮಾಡಲಾಗಿದೆ.

Congress Election Manifesto For Karnataka Assembly Poll 2023 What For Karavali And Malenadu

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ ಮುಂತಾದವರು ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 'ಸರ್ವ ಜನಾಂಗದ ಶಾಂತಿಯ ತೋಟ' ಇದುವೇ ಕಾಂಗ್ರೆಸ್‌ನ ಬದ್ಧತೆ ಎಂದು ಪ್ರಣಾಳಿಕೆಯಲ್ಲಿ ಪಕ್ಷ ಹೇಳಿದೆ.

ಕರಾವಳಿ/ ಮಲೆನಾಡು ಕರ್ನಾಟಕಕ್ಕೆ ಘೋಷಣೆಗಳು

* ವಾರ್ಷಿಕ ರೂ. 500 ಕೋಟಿ, ಮತ್ತು 5 ವರ್ಷಕ್ಕೆ ರೂ 2,500 ಕೋಟಿ ಅನುದಾನ ನೀಡಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಸ್ಥಾಪನೆ.

* ಅಡಿಕೆಗೆ ಹಳದಿ ರೋಗ ಮತ್ತು ಇತರ ರೋಗಗಳ ನಿಯಂತ್ರಣ ಹಾಗೂ ಮಾರುಕಟ್ಟೆ, ಸಂಶೋಧನೆಗೆ ಕ್ರಮ.

* ಮಲೆನಾಡಿನ ರೈತರಿಗೆ ಅನಾನುಕೂಲವಾಗಿರುವ ಕಸ್ತೂರಿರಂಗನ್ ವರದಿಯ ಮರುಪರಿಶೀಲನೆ ಹಾಗೂ ಅರಣ್ಯ ಮತ್ತು ಪರಿಸರ ರಕ್ಷಣೆಗೆ ಪಶ್ಚಿಮ ಘಟ್ಟ ನೀತಿ

siddaramaiah

* ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಚೀಚ್ ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಮತ್ತು ಯೋಜನೆ

* ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ನೀಡಲು ಯೋಜನೆ ಮತ್ತು ಸಂಬಂಧಿತ ಕಾನೂನುಗಳ ತಿದ್ದುಪಡಿ

* ಮೀನುಗಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಕ್ರಮಗಳು
ಎ) ವಿಮಾ ರಕ್ಷೆ
ಬಿ) ಎಲ್ಲಾ ಮೀನುಗಾರ ಮಹಿಳೆಯರಿಗೆ ರೂ 1 ಲಕ್ಷದವರೆಗೆ ಬಡ್ಡಿ ರಹಿತ ಸಾಲ
ಸಿ) ಉತ್ತಮ ಮೀನುಗಾರಿಕಾ ದೋಣಿ ಖರೀದಿಗೆ ಶೇ 50ರಷ್ಟು ಸಬ್ಸಿಡಿ
ಡಿ) ಪ್ರತಿ ದಿನದ ಡೀಸೆಲ್ ಬಳಕೆ ಪ್ರಮಾಣ 500 ಅಟರ್‌ಗೆ ಹೆಚ್ಚಳ
ಇ) ಬಂದಲಿನಿಂದ ಮಾರುಕಟ್ಟೆಗೆ ಸೂಕ್ತ ಸಾಲಿಗೆ ವ್ಯವಸ್ಥೆ

* ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಟ್ಟಿಸುವ, ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟ್‌ಗಳ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸರ್ವ ಋತು ಷಟ್ಟಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು.

* ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಸ್ಥಾಪನೆ.

* ಸಸಿಹಿತ್ತು ಕಡಲ ತೀರವನ್ನು ಅಂತರರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಅಭಿವೃದ್ಧಿ

* ಮಂಗಳೂರು ಮೀನುಗಾರಿಕಾ ಬಂದರಿಗೆ ಕಾಯಂ ಹೂಳೆತ್ತುವ ಯಂತ್ರ

ಮೈಸೂರು ಕರ್ನಾಟಕಕ್ಕೆ ಭರವಸೆಗಳು

* ಮೈಸೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ರೂ. 5 ಸಾವಿರ ಕೋಟಗಳ ಹೂಡಿಕೆ

* ಮಂಡ್ಯದಲ್ಲಿ ಮೈಶುಗರ್‌ ಕಾರ್ಖಾನೆ ಪುನಶ್ವೇತನ ಮತ್ತು ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಯೋಜನೆ- ಅನುಷ್ಠಾನ

* ಮೈಸೂರಿನಲ್ಲಿ 500 ಕೋಟಿ ಬಜೆಟ್‌ನೊಂದಿಗೆ ವಿಶ್ವದರ್ಜೆಯ ಡಾ. ರಾಜ್ ಕುಮಾರ್ ಫಿಲ್ಮ್‌ ಸಿಟಿ ನಿರ್ಮಾಣ

* ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವಿಶ್ವವಿದ್ಯಾಲಯ ಮತ್ತು ಕ್ರೀಡಾ ಸಂಕೀರ್ಣ ಸ್ಥಾಪನೆ.

ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆಗೆ ಮೊದಲೇ 5 ಭರವಸೆಗಳನ್ನು ನೀಡಿತ್ತು.

1. ಗೃಹಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್
2. ಗೃಹಲಕ್ಷ್ಮೀ 2000 ಪ್ರತಿ ಮನೆಯ ಯಜಮಾನಿಗೆ
3. ಅನ್ನಭಾಗ್ಯ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ
4. ಯುವನಿಧಿ ನಿರುದ್ಯೋಗ ಭತ್ಯೆ 3 ಸಾವಿರ ಪದವೀಧರರಿಗೆ, 1,500 ಡಿಪ್ಲೊಮಾ ಪದವೀಧರರಿಗೆ
5. ಶಕ್ತಿ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+