ನಿಗಮ, ಮಂಡಳಿಗೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಶಾಸಕರಿಗೆ ಬಂಪರ್
ಬೆಂಗಳೂರು, ಜುಲೈ 02: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ನಿಗಮ, ಮಂಡಳಿಗೆ ಅಧ್ಯಕ್ಷರ ನೇಮಕಾತಿ ಕುರಿತಂತೆ ಪಟ್ಟಿ ಸಿದ್ಧವಾಗಿದೆ.
ಮಾಜಿ ಸಿಎಂ ಸಿದ್ದರಾಮಯಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಪ್ರಮುಖ ಸ್ಥಾನಗಳು ಕಾಂಗ್ರೆಸ್ಸಿನ ಅತೃಪ್ತ, ಬಂಡಾಯ ಶಾಸಕರ ಪಾಲಾಗುವುದು ನಿಶ್ಚಿತವಾಗಿದೆ.
20ಕ್ಕೂ ಅಧಿಕ ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಯಾರಾಗಬೇಕು ಎಂಬುದದನ್ನು ಸಿದ್ಧಪಡಿಸಿಕೊಂಡಿರುವ ಕಾಂಗ್ರೆಸ್, ಸಭೆಯಲ್ಲಿ ಮಂಡಿಸಿದ್ದು, ಜೆಡಿಎಸ್ ಪ್ರತಿರೋಧದ ನಡುವೆಯೂ ಪಟ್ಟಿಯಲ್ಲಿರುವ ಹೆಸರುಗಳಿಗೆ ಸಮ್ಮತಿ ಸಿಕ್ಕಿದೆ.

ಇನ್ನು 10 ಮಂದಿ ಶಾಸಕರ ಹೆಸರು ಪಟ್ಟಿಯಲ್ಲಿದ್ದರೂ ಈ ಬಗ್ಗೆ ಚರ್ಚೆ ಜಾರಿಯಲ್ಲಿದೆ. 30 ಸ್ಥಾನಕ್ಕೆ 35ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳಿದ್ದರು.
ನಿಯಮ ಮೀರಿ ಹೊಸಬರಿಗೆ ಸ್ಥಾನ ಕಲ್ಪಿಸಲು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಮುಂದಾಗಿದ್ದು, ಹಿರಿತನವನ್ನು ಆಧಾರಿಸಿ, ಪ್ರಮುಖ ನಿಗಮ, ಮಂಡಳಿಗಳಿಗೆ ಜೆಡಿಎಸ್ ಶಾಸಕರ ಹೆಸರು ಸೇರಿಸಲು ಒತ್ತಾಯ ಬಂದಿದೆ. ಆದರೆ, ಸಂಖ್ಯಾಬಲದಲ್ಲಿ ಕಾಂಗ್ರೆಸ್ ಅಧಿಕವಾಗಿರುವುದರಿಂದ ಜೆಡಿಎಸ್ ಮಾತಿಗೆ ಬೆಲೆ ಸಿಗುವುದು ಕಷ್ಟ. ಸದ್ಯಕ್ಕೆ ಪಟ್ಟಿಯಲ್ಲಿರುವ ಹೆಸರುಗಳು ಇಂತಿವೆ:
ಶಾಸಕ : ಕ್ಷೇತ್ರ
ಎಸ್ ಟಿ ಸೋಮಶೇಖರ್ : ಯಶವಂತಪುರ
ಬೈರತಿ ಬಸವರಾಜ್ : ಕೆ.ಆರ್ ಪುರಂ
ಎಂ.ಟಿ ಬಿ ನಾಗರಾಜ್ : ಹೊಸಕೋಟೆ
ಲಕ್ಷ್ಮೀ ಹೆಬ್ಬಾಳ್ಕರ್ : ಬೆಳಗಾವಿ ಗ್ರಾಮೀಣ
ಡಾ.ಸುಧಾಕರ್ : ಚಿಕ್ಕಬಳ್ಳಾಪುರ
ನಾರಾಯಣಸ್ವಾಮಿ : ಬಂಗಾರಪೇಟೆ
ನಾಗೇಶ್ (ಪಕ್ಷೇತರ) : ಮುಳಬಾಗಿಲು
ನರೇಂದ್ರ : ಹನೂರು
ರಾಜೇಗೌಡ ಟಿ.ಡಿ : ಶೃಂಗೇರಿ
ಬಿ.ಕೆ ಸಂಗಮೇಶ : ಭದ್ರಾವತಿ
ಬಿ.ಸಿ ಪಾಟೀಲ್ : ಹಿರೇಕೆರೂರು
ಶಿವರಾಮ ಹೆಬ್ಬಾರ : ಯಲ್ಲಾಪುರ
ಖನೀಸ್ ಫಾತಿಮಾ ಖಮರುಲ್ ಇಸ್ಲಾಂ: ಕಲಬುರ್ಗಿ ಉತ್ತರ
ರಾಘವೇಂದ್ರ ಹಿಟ್ನಾಳ : ಕೊಪ್ಪಳ
ನಾಗೇಂದ್ರ : ಬಳ್ಳಾರಿ ಗ್ರಾಮೀಣ
ಭೀಮಾನಾಯ್ಕ್: ಹಗರಿಬೊಮ್ಮನಹಳ್ಳಿ
ಅಜಯ್ ಸಿಂಗ್ : ಜೇವರ್ಗಿ
ಗಣೇಶ್ ಹುಕ್ಕೇರಿ : ಚಿಕ್ಕೋಡಿ
ಪ್ರಸಾದ ಅಬ್ಬಯ್ಯ : ಧಾರವಾಡ ಪೂರ್ವ
ರಘುಮೂರ್ತಿ : ಚಳ್ಳಕೆರೆ
ರಾಮಪ್ಪ : ಹರಿಹರ
ಬಿ.ನಾರಾಯಣ : ಬಸವಕಲ್ಯಾಣ
ರಂಗನಾಥ : ಕುಣಿಗಲ್
ಅಮರೇಗೌಡ ಬಯ್ಯಾಪುರ : ಕುಷ್ಟಗಿ
ರಘು ಆಚಾರ್ : ಪರಿಷತ್ ಸದಸ್ಯ
ಪ್ರತಾಪ ಗೌಡ : ಮಾನ್ವಿ
ರಿಜ್ವಾನ್ ಅರ್ಷದ್ : ಪರಿಷತ್ ಸದಸ್ಯ ರಹೀಂ ಖಾನ್ : ಬೀದರ್












Click it and Unblock the Notifications