ಕಾಂಗ್ರೆಸ್‌ ಅಸಮಾಧಾನ ಶಮನಕ್ಕೆ ಸಿಂಗ್ ಆಗಮನ!

Posted By:
Subscribe to Oneindia Kannada

ಬೆಂಗಳೂರು, ಜೂನ್ 23 : ಕರ್ನಾಟಕ ಕಾಂಗ್ರೆಸ್‌ನಲ್ಲಿನ ಭಿನ್ನಮತ ಇನ್ನೂ ಶಮನಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಿನ್ನಮತ ಶಮನಗೊಳಿಸಲು ಹೈಕಮಾಂಡ್ ನಾಯಕರ ಮೊರೆ ಹೋಗಿದ್ದಾರೆ. ಆತ್ತ ಅತೃಪ್ತ ಶಾಸಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಈಗಾಗಲೇ ಆಸ್ಕರ್ ಫರ್ನಾಂಡೀಸ್, ಜಾಫರ್ ಷರೀಫ್ ಮುಂತಾದ ನಾಯಕರು ಅತೃಪ್ತ ಶಾಸಕರ ಜೊತೆ ಸಭೆ ನಡೆಸಿ, ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ಬೆಂಗಳೂರಿಗೆ ಬರಲಿದ್ದು, ಅತೃಪ್ತರ ಜೊತೆ ಮಾತುಕತೆ ನಡೆಸುವ ಸಾಧ್ಯತೆ. [ಶಾಸಕರ ಮನವೊಲಿಕೆಗೆ ಮುಂದಾದ ಕಾಂಗ್ರೆಸ್]

digvijay singh

ಸರಣಿ ಸಭೆಗಳು : ಮಾಜಿ ಸಚಿವ ಅಂಬರೀಶ್ ನಿವಾಸದಲ್ಲಿ ಇಂದು ಹಲವು ಸುತ್ತಿನ ಸಭೆ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಂಬರೀಶ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ['ಸಿಎಂ ಏನು ದೊಡ್ಡ ಬೆಟ್ಟನಾ?, ಅವನಿನ್ನೂ ಹುಡುಗ']

ಅತ್ತ ಶಾಸಕರ ಭವದಲ್ಲಿರುವ ಡಾ.ಎ.ಬಿ.ಮಾಲಕರೆಡ್ಡಿ ಅವರ ಕಚೇರಿಯಲ್ಲಿ ಅತೃಪ್ತ ಶಾಸಕರು ಸಭೆ ನಡೆಸಿದರು. ಅಫ್ಜಲ್‌ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್, ಯಾದಗಿರಿ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. [ಕ್ಯಾಬಿನೆಟ್ ಗೆ ರಮ್ಯಾ ಸೇರಿದರೆ, ಬಂಡಾಯದ ಬೆಂಕಿಗೆ ತುಪ್ಪ ಸುರಿದಂತೆ]

ಮೋದಿ ಹೊಗಳಿದ್ದಕ್ಕೆ ಸಂಪುಟದಿಂದ ಹೊರಕ್ಕೆ : 'ಸಚಿವ ಸಂಪುಟದಿಂದ ಭ್ರಷ್ಟರನ್ನು ತೆಗೆದುಹಾಕಬೇಕಿದ್ದರೆ ಮಹದೇವ ಪ್ರಸಾದ್‌ ಅವರನ್ನು ಮೊದಲು ತೆಗೆಯಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ ಎನ್ನುವ ಕಾರಣಕ್ಕಾಗಿ ಶ್ರೀನಿವಾಸ ಪ್ರಸಾದ್‌ ಅವರನ್ನು ಕೈಬಿಡಲಾಗಿದೆ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Crisis in Karnataka Congress. Karnataka Congress in-charge Digvijay Singh will come to Bengaluru on Friday to meet rebel MLA's.
Please Wait while comments are loading...