ಸ್ಮೃತಿ ಇರಾನಿ ಅವರ ಪದವಿ ಹುಡುಕಿ ತನ್ನಿ: ಕಾಂಗ್ರೆಸ್ ಚಾಲೆಂಜ್!
ಬೆಂಗಳೂರು: ಇಷ್ಟುದಿನ ಕಾಂಗ್ರೆಸ್ ತನ್ನ ಗ್ಯಾರಂಟಿ ಘೋಷಣೆ ಮಾಡಲು ಆಗಲ್ಲ ಅಂತಿದ್ದ ಬಿಜೆಪಿ ನಾಯಕರು, ಇದೀಗ ಗ್ಯಾರಂಟಿ ಘೋಷಣೆ ಆಗುತ್ತಿದ್ದಂತೆ ಅದರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ನಿನ್ನೆಯಿಂದ ಶುರುವಾದ ಈ ಯುದ್ಧಕ್ಕೆ ಇದೀಗ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ಅವರ ಹೆಸರು ಕೂಡ ಎಂಟ್ರಿಯಾಗಿದೆ! ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.
ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ನಿನ್ನೆ ತೀರ್ಮಾನ ಕೈಗೊಂಡು 5 ಗ್ಯಾರಂಟಿ ಜಾರಿಗೆ ಆದೇಶ ಹೊರಬಿದ್ದಿತ್ತು. ಇದಾದ ಬಳಿಕ ಕಾಂಗ್ರೆಸ್ ಟ್ವೀಟ್ ಮಾಡಿ, '@nalinkateel ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ @BSBommai ಅವರೇ, ನಿಮ್ಮ ಮನೆಗೂ ಫ್ರೀ! @ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ!, @CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!, ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ.' ಎಂದಿತ್ತು. ಇದೇ ಟ್ವೀಟ್ ಬಗ್ಗೆ ಬಿಜೆಪಿ ತಿರುಗೇಟು ನೀಡಲು ಹೋಗಿ ಟ್ವೀಟ್ ವಾರ್ ಶುರುಮಾಡಿದೆ.

ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಲೇವಡಿ!
ನಿನ್ನೆ ಬಿಜೆಪಿ ನಾಯಕರ ಕುರಿತು ಕಾಂಗ್ರೆಸ್ ಮಾಡಿದ್ದ ಟ್ವೀಟ್‌ಗೆ ಬಿಜೆಪಿ ತಿರುಗೇಟು ನೀಡಿ, 'ಖಂಡಿತಾ ಸ್ವಾಮಿ.... ಹಾಗೆಯೇ ನಿರುದ್ಯೋಗ ಭತ್ಯೆಯನ್ನು ಶ್ರೀ @RahulGandhi ಯವರಿಗೂ (ಪದವೀಧರರಾಗಿದ್ದರೆ ಮಾತ್ರ) ಹಾಗೂ ಡಾ|| ಯತೀಂದ್ರ ಸಿದ್ದರಾಮಯ್ಯನವರಿಗೂ ದಯಪಾಲಿಸಿ.' ಎಂದು ಟ್ವೀಟ್ ಪೋಸ್ಟ್ ಮಾಡಿತ್ತು. ಇದೀಗ ಇದೇ ಟ್ವೀಟ್‌ಗೆ ಕಾಂಗ್ರೆಸ್ ಕೂಡ ರೀಪ್ಲೇ ನೀಡಿದೆ. ಆ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಭರ್ಜರಿಯಾಗಿ ನಡೆಯುತ್ತಿದೆ. ಹಾಗಾದ್ರೆ ಕಾಂಗ್ರೆಸ್ ಉತ್ತರ ಕೊಟ್ಟಿದ್ದೇನು? ಸ್ಮೃತಿ ಇರಾನಿ ಅವರ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು? ಮುಂದೆ ಓದಿ.
ಖಂಡಿತಾ ಸ್ವಾಮಿ….
— BJP Karnataka (@BJP4Karnataka) June 2, 2023
ಹಾಗೆಯೇ ನಿರುದ್ಯೋಗ ಭತ್ಯೆಯನ್ನು ಶ್ರೀ @RahulGandhiಯವರಿಗೂ (ಪದವೀಧರರಾಗಿದ್ದರೆ ಮಾತ್ರ) ಹಾಗೂ ಡಾ|| ಯತೀಂದ್ರ ಸಿದ್ದರಾಮಯ್ಯನವರಿಗೂ ದಯಪಾಲಿಸಿ. https://t.co/Nl7qS356ft
'ಸ್ಮೃತಿ ಇರಾನಿ ಅವರ ಪದವಿ ಹುಡುಕಿ ತನ್ನಿ'
ಅಷ್ಟಕ್ಕೂ ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಸವಾಲು ಹಾಕಿರುವ ಕಾಂಗ್ರೆಸ್ 'ರಾಹುಲ್ ಗಾಂಧಿಯವರು ಪದವೀಧರರಿದ್ದಾರೆ ಸರಿ, @Dr_Yathindra_S ಅವರೂ ನೀವೇ ಹೇಳಿದಂತೆ ಡಾಕ್ಟರ್ ಆಗಿದ್ದಾರೆ. @smritiirani ಅವರ ಪದವಿ ಹುಡುಕಿ ತನ್ನಿ, ಹಾಗೆಯೇ ವಿಶ್ವದಲ್ಲಿ ಯಾವ ಯುನಿವರ್ಸಿಟಿಯಲ್ಲಿ "ಎಂಟೈರ್ ಪೊಲಿಟಿಕಲ್ ಸೈನ್ಸ್" ಪದವಿ ಇದೆ ಎಂಬುದನ್ನೂ ಹುಡುಕಿ ತನ್ನಿ. ಅವರಿಗೂ ಭತ್ಯೆ ಕೊಡುವ ಬಗ್ಗೆ ಚಿಂತಿಸೋಣ! (ವಿ ಸೂ - ವಾಟ್ಸಾಪ್ ಯೂನಿವರ್ಸಿಟಿಯ ಪದವಿಯನ್ನು ಪರಿಗಣಿಸುವುದಿಲ್ಲ)' ಎಂದು ರಣವೀಳ್ಯ ನೀಡಿದೆ.
'@BJP4Karnataka,
— Karnataka Congress (@INCKarnataka) June 3, 2023
ರಾಹುಲ್ ಗಾಂಧಿಯವರು ಪದವೀಧರರಿದ್ದಾರೆ ಸರಿ, @Dr_Yathindra_S ಅವರೂ ನೀವೇ ಹೇಳಿದಂತೆ ಡಾಕ್ಟರ್ ಆಗಿದ್ದಾರೆ.@smritiirani ಅವರ ಪದವಿ ಹುಡುಕಿ ತನ್ನಿ, ಹಾಗೆಯೇ ವಿಶ್ವದಲ್ಲಿ ಯಾವ ಯುನಿವರ್ಸಿಟಿಯಲ್ಲಿ "ಎಂಟೈರ್ ಪೊಲಿಟಿಕಲ್ ಸೈನ್ಸ್" ಪದವಿ ಇದೆ ಎಂಬುದನ್ನೂ ಹುಡುಕಿ ತನ್ನಿ.
ಅವರಿಗೂ ಭತ್ಯೆ ಕೊಡುವ ಬಗ್ಗೆ ಚಿಂತಿಸೋಣ!… https://t.co/LUY9Rr5HhF
'ನಾವು ನುಡಿದಂತೆ ನಡೆಯುವವರು'
ಹಾಗೇ ಮತ್ತೊಂದ್ಕಡೆ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಬಗ್ಗೆ ನಿನ್ನೆ ಇನ್ನೊಂದು ಟ್ವೀಟ್ ಮಾಡಿ, 'ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿ ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ,' ಎನ್ನುವ ಮೂಲಕ ಬಿಜೆಪಿ & ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿತ್ತು. ನಿನ್ನೆ ಶುರುವಾಗಿದ್ದ ಗ್ಯಾರಂಟಿಗಳ ವಾರ್ ಇಂದು ಕೂಡ ತಣ್ಣಗಾಗಿಲ್ಲ. ಜನ ಮಾತ್ರ ಇಬ್ಬರ ಜಗಳದಲ್ಲಿ ಭರ್ಜರಿ ಎಂಟರ್‌ಟೈನ್‌ಮೆಂಟ್ ಪಡೆಯುತ್ತಿರೋದು ಸುಳ್ಳಲ್ಲ.
ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು.
— Karnataka Congress (@INCKarnataka) June 2, 2023
ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ.
ಇದು ನಮ್ಮ ಬದ್ಧತೆ,
ಹೀಗೆ 5 ಗ್ಯಾರಂಟಿ ವಿಚಾರದ ಬಗ್ಗೆ ಚರ್ಚೆ ನಡೆಯುವಾಗಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ. 'ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಅರ್ಥಿಕ ಪರಿಸ್ಥಿತಿಯ ಬಗ್ಗೆ ವಿಸ್ತೃತವಾಗಿ ವಿವರಿಸಬೇಕಾಗಿರುವ ಅನಿವಾರ್ಯತೆಯಿದೆ ಎಂದು ತಿಳಿಸಿದ್ದರು. ಈ ಕುರಿತಂತೆ ಸಿದ್ದರಾಮಯ್ಯ ಅವರು ಇಲ್ಲಿಯವರೆಗೂ ತುಟಿ ಬಿಚ್ಚಿಲ್ಲ. ಇಂದು ಆ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಶ್ರೀ ಕೆ.ಎಚ್.ಮುನಿಯಪ್ಪ ಅವರು ಉತ್ತರಿಸದೇ 'No Comments' ಎಂದಿದ್ದಾರೆ. ಹಾಗಾದರೆ ಕಾಂಗ್ರೆಸ್ ಗ್ಯಾರಂಟಿಗಳ ಪುಂಗಿಯನ್ನು ಪೂರೈಸಲು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿವರಿಸಲು, ಕ್ರೂಢೀಕರಣದ ಬಗ್ಗೆ ಉತ್ತರಿಸುವವರು ಯಾರು?' ಎಂದು ಪ್ರಶ್ನೆ ಮಾಡಿದೆ ಬಿಜೆಪಿ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications