‘ಬಡವರ ಬಗ್ಗೆ ಕಾಳಜಿ ಇದ್ದರೆ ಮೋದಿ ವಿರುದ್ಧ ಪ್ರತಿಭಟಿಸಿ’
ಬೆಂಗಳೂರು: ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿದೆ ಅನ್ನೋ ಆರೋಪ ಇದೀಗ ರಾಜ್ಯ ರಾಜಕೀಯದಲ್ಲಿ ಸುನಾಮಿ ಎಬ್ಬಿಸಿದೆ. ಈ ಹೊತ್ತಲ್ಲಿ ಬಿಜೆಪಿ & ಕಾಂಗ್ರೆಸ್ ಮಧ್ಯೆ ರಾಜಕೀಯ ಕೆಸರೆರಚಾಟ ಜೋರಾಗಿದೆ. ಅದಕ್ಕೆ ತಕ್ಕಂತೆ ಟ್ವೀಟ್ ಮಾಡಿ ಎರಡೂ ಪಕ್ಷಗಳು ಫೈಟ್ ಮಾಡುತ್ತಿವೆ. ಇದೀಗ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹೊಸ ಸವಾಲನ್ನೇ ನೀಡಿದೆ. ಏನದು ಸವಾಲು? ಮುಂದೆ ಓದಿ.
ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡ ವರ್ಗಕ್ಕೆ ಕೇಂದ್ರದ ಪಾಲೂ ಸೇರಿ ಒಟ್ಟು 10 ಕೆಜಿ ಅಕ್ಕಿ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಹೆಚ್ಚಿನ ಅಕ್ಕಿ ಖರೀದಿಗಾಗಿ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದರೆ ಮೊದಲು ಒಪ್ಪಿ ನಂತರ ಕೈಕೊಟ್ಟಿದೆ ಅಂತಾ ಕಾಂಗ್ರೆಸ್ ಆರೋಪಿಸುತ್ತಿದೆ. ಇದು ರಾಜಕೀಯ ಅಸ್ತ್ರವಾಗಿ ಬದಲಾಗಿದೆ. ಇದೇ ಹೊತ್ತಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ರಾಜ್ಯದ ಬಡವರ ಬಗ್ಗೆ ಕಾಳಜಿ ಇದ್ದರೆ ಮೋದಿ ವಿರುದ್ಧ ಪ್ರತಿಭಟಿಸಲಿ ಎಂದು ಸವಾಲು ಹಾಕಿದೆ.

ವಿಲಕ್ಷಣ ಬುದ್ದಿ ಇರುವುದು ನಿಜವಲ್ಲವೇ?
ಕಾಂಗ್ರೆಸ್ ಇದೀಗ ಹಾಕಿರುವ ಸವಾಲಿನ ಪ್ರಕಾರ, '12ನೇ ತಾರೀಖೀನಂದು ಅಕ್ಕಿ ಕೊಡಲು ಒಪ್ಪಿಗೆ, 13 ನೇ ತಾರೀಖಿನಂದು ಯೂಟರ್ನ್. ಕ್ವಿಂಟಾಲಿಗೆ 3,400ರೂ ಗಳಿಗೆ ಅಕ್ಕಿ ನೀಡಲು FCI ಒಪ್ಪಿಕೊಂಡಿದ್ದ ಪತ್ರ ಇದು. ಒಂದೇ ದಿನದಲ್ಲಿ ಉಲ್ಟಾ ಹೊಡೆಯುವುದರ ಹಿಂದೆ ಬಿಜೆಪಿಯ ವಿಕೃತ, ವಿಲಕ್ಷಣ ಬುದ್ದಿ ಇರುವುದು ನಿಜವಲ್ಲವೇ? @BJP4Karnataka ನಾಯಕರಿಗೆ ರಾಜ್ಯದ ಬಡವರ ಬಗ್ಗೆ ಕಾಳಜಿ ಇದ್ದರೆ ಮೋದಿ ವಿರುದ್ಧ ಪ್ರತಿಭಟಿಸಲಿ ರಾಜ್ಯದ 25 ಸಂಸದರು ಮೋದಿಯನ್ನು ಒತ್ತಾಯಿಸಲಿ.' ಎಂದಿದೆ. ಈ ಮೂಲಕ ಎರಡೂ ಪಕ್ಷಗಳ ನಡುವೆ ಸೃಷ್ಟಿಯಾಗಿರುವ ಅಕ್ಕಿ ಫೈಟ್ ಇನ್ನಷ್ಟು ಜೋರಾಗಿದೆ.
12ನೇ ತಾರೀಖೀನಂದು ಅಕ್ಕಿ ಕೊಡಲು ಒಪ್ಪಿಗೆ, 13 ನೇ ತಾರೀಖಿನಂದು ಯೂಟರ್ನ್.
— Karnataka Congress (@INCKarnataka) June 16, 2023
ಕ್ವಿಂಟಾಲಿಗೆ 3,400ರೂ ಗಳಿಗೆ ಅಕ್ಕಿ ನೀಡಲು FCI ಒಪ್ಪಿಕೊಂಡಿದ್ದ ಪತ್ರ ಇದು.
ಒಂದೇ ದಿನದಲ್ಲಿ ಉಲ್ಟಾ ಹೊಡೆಯುವುದರ ಹಿಂದೆ ಬಿಜೆಪಿಯ ವಿಕೃತ, ವಿಲಕ್ಷಣ ಬುದ್ದಿ ಇರುವುದು ನಿಜವಲ್ಲವೇ?@BJP4Karnataka ನಾಯಕರಿಗೆ ರಾಜ್ಯದ ಬಡವರ ಬಗ್ಗೆ ಕಾಳಜಿ ಇದ್ದರೆ ಮೋದಿ… pic.twitter.com/Luq6IBX8TY
'ಇಥೆನಾಲ್ ಉತ್ಪಾದನೆಗೆ ಉತ್ತಮ ಅಕ್ಕಿ'
ಹಾಗೇ ಇನ್ನೊಂದು ಗಂಭೀರ ಆರೋಪವನ್ನೂ ಕೇಂದ್ರ ಸರ್ಕಾರದ ವಿರುದ್ಧ ಈಗ ಕಾಂಗ್ರೆಸ್ ಮಾಡಿದೆ, 'ಖಾಸಗಿ ಕಂಪೆನಿಗಳಿಗೆ ಇಥೆನಾಲ್ ಉತ್ಪಾದನೆಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೆಜಿಗೆ 24 ರೂಪಾಯಿಗಳಂತೆ ಕೊಡುವ FCI ನಮ್ಮ ಸರ್ಕಾರ 34 ರೂಪಾಯಿಗಳನ್ನು ಕೊಡಲು ಮುಂದಾದರೂ ಅಕ್ಕಿ ಕೊಡಲು ಒಪ್ಪದಿರುವುದು ಮೋದಿಯ ದ್ವೇಷ ರಾಜಕಾರಣವಲ್ಲದೆ ಇನ್ನೇನು? ಬಳಕೆ ಯೋಗ್ಯ ಧನ್ಯಗಳನ್ನೂ ಇಥೆನಾಲ್ ಉತ್ಪಾದನೆಗೆ ಬಳಸಲು ಅನುಮತಿ ಕೊಟ್ಟಿರುವುದರ ಹಿಂದೆ ಜನರ ಹೊಟ್ಟೆಯ ಮೇಲೆ ಹೊಡೆಯುವ ದುರುದ್ದೇಶ ಇರುವುದು ಸ್ಪಷ್ಟವಾಗಿದೆ.' ಎಂದು ಆರೋಪ ಮಾಡಿದೆ.
ಖಾಸಗಿ ಕಂಪೆನಿಗಳಿಗೆ ಇಥೆನಾಲ್ ಉತ್ಪಾದನೆಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೆಜಿಗೆ 24 ರೂಪಾಯಿಗಳಂತೆ ಕೊಡುವ FCI ನಮ್ಮ ಸರ್ಕಾರ 34 ರೂಪಾಯಿಗಳನ್ನು ಕೊಡಲು ಮುಂದಾದರೂ ಅಕ್ಕಿ ಕೊಡಲು ಒಪ್ಪದಿರುವುದು ಮೋದಿಯ ದ್ವೇಷ ರಾಜಕಾರಣವಲ್ಲದೆ ಇನ್ನೇನು?
— Karnataka Congress (@INCKarnataka) June 16, 2023
ಬಳಕೆ ಯೋಗ್ಯ ಧನ್ಯಗಳನ್ನೂ ಇಥೆನಾಲ್ ಉತ್ಪಾದನೆಗೆ ಬಳಸಲು ಅನುಮತಿ ಕೊಟ್ಟಿರುವುದರ ಹಿಂದೆ ಜನರ…
ಒಟ್ಟಾರೆ ಹೇಳೋದಾದ್ರೆ ಅಕ್ಕಿ ವಿಚಾರ ಕೂಡ ಇದೀಗ ಕರ್ನಾಟಕದಲ್ಲಿ ರಾಜಕೀಯ ಅಸ್ತ್ರ ಎನಿಸಿಕೊಳ್ಳುತ್ತಿದೆ. ಅತ್ತ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದೆ. ಇತ್ತ ರಾಜ್ಯ ಬಿಜೆಪಿ ನಾಯಕರು ತಪ್ಪೆಲ್ಲಾ ಕಾಂಗ್ರೆಸ್ ಸರ್ಕಾರದ್ದು ಅಂತಿದ್ದಾರೆ. ಹೀಗೆ ಎರಡೂ ಪಕ್ಷದ ನಾಯಕರ ಜಗಳ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಕ್ರಿಯೇಟ್ ಮಾಡಿದೆ.












Click it and Unblock the Notifications