ಪ್ರಬಲ ಎದುರಾಳಿಗಳ ವಿರುದ್ದ ಟಿಕೆಟ್ ಘೋಷಣೆ ಮಾಡದ ಕಾಂಗ್ರೆಸ್: ಕೈ ನಾಯಕರ ಪ್ಲಾನ್ ಏನು?
ಬೆಂಗಳೂರು, ಮಾರ್ಚ್26: ರಾಜ್ಯ ವಿಧಾನ ಚುನಾವಣಾ ವೇದಿಕೆ ಸಜ್ಜಾಗಿದ್ದು, ಕಾಂಗ್ರೆಸ್ 124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇತ್ತ ಸಾಕಷ್ಟು ಕುತೂಹಲಕಾರಿ ಸಂಗತಿ ಎಂದರೇ ರಾಜಕೀಯ ಪ್ರಬಲ ಎದುರಾಳಿ ಕ್ಷೇತ್ರಗಳಲ್ಲಿ ಇನ್ನೂ ಕಾಂಗ್ರೆಸ್ ಟಕೆಟ್ ಘೋಷಣೆ ಮಾಡದೇ ಆ ಕ್ಷೇತ್ರವನ್ನ ಸಸ್ಪೆನ್ಸ್ ಆಗಿ ಇಟ್ಟಿದೆ.
ಈಗಾಗಲೇ 124 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಘೋಷಿಸಿದ್ದು, ಇನ್ನೂ ಎರಡನೇ ಪಟ್ಟಿ ಏಪ್ರಿಲ್ ಮೊದಲ ವಾರದಂದು ಬಿಡುಗಡೆಯಾಗಲಿದೆ. ಈಗಾಗಲೇ ಟಿಕೆಟ್ ಕುರಿತು ಸಾಕಷ್ಟು ಸಭೆಗಳನ್ನ ನಡೆಸಿರುವ ಕಾಂಗ್ರೆಸ್ ನಾಯಕರು ಅನ್ಯ ಪಕ್ಷಗಳಿಂದ ಬರುವ ನಾಯಕರಿಗೆ 25 ರಿಂದ 30 ಸ್ಥಾನಗಳನ್ನ ಕಾಯ್ದಿರಿಸಲಾಗಿದೆ.

ಇನ್ನೂ ಆಪರೇಷನ್ ಅಸ್ತ ದ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಗಾಳ ಹಾಕಿರುವ ಕಾಂಗ್ರೆಸ್ ಪ್ರಬಲ ಎದುರಾಳಿ ಕ್ಷೇತ್ರಗಳಿ ಅಭ್ಯರ್ಥಿ ಆಯ್ಕೆಯನ್ನ ಸಸ್ಪೆನ್ಸ್ ಆಗಿ ಇಟ್ಟಿದೆ. ಇತ್ತ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾದ ಕೆಲ ನಾಯಕರು ಮತ್ತೆ ಮಾತೃ ಪಕ್ಷಕ್ಕೆ ಬರಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದು, ಕಾಂಗ್ರೆಸ್ ನಾಯಕರು ಕಾದುನೋಡುವ ತಂತ್ರಗಾರಿಕೆಯನ್ನ ನಡೆಸಿ ಅಂತಿಮವಾಗಿ ಕೊನೆಯ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಬೇಕು ಎಂಬ ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ವಿನಯ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಚಿಂತನೆ ಹೊಂದಿದೆ. ಆದರೆ, ವಿನಯ ಕುಲಕರ್ಣಿ ಅವರು ಧಾರವಾಡದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಜತೆಗೆ, ವಿನಯ ಕುಲಕರ್ಣಿ ಅವರಿಗೆ ಅವರ ಬಯಕೆಯ ಕ್ಷೇತ್ರಕ್ಕೂ ಹೆಸರು ಪ್ರಕಟಿಸಿಲ್ಲ. ಹೀಗಾಗಿ ಕಾದು ನೋಡಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರು, ತಮ್ಮ ಪುತ್ರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ದು, ಈ ಕ್ಷೇತ್ರದಲ್ಲೂ ಅಭ್ಯರ್ಥಿಯ ಹೆಸರನ್ನ ಕಾಂಗ್ರೆಸ್ ಪ್ರಕಟಿಸಿಲ್ಲ. ಅಲ್ಲದೇ ಸಚಿವರಾದ ಆರ್. ಅಶೋಕ್ ಕ್ಷೇತ್ರವಾದ ಪದ್ಮನಾಭನಗರ, ಮುರುಗೇಶ್ ನಿರಾಣಿಯವರ ಬೀಳಗಿ ಕ್ಷೇತ್ರ, ಬಿ. ಶ್ರೀರಾಮುಲು ಅವರ ಮೊಳಕಾಲ್ಮೂರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಶಿರಸಿ, ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿಜಯಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆ ಸಸ್ಪನ್ಸ್ ಆಗಿ ಉಳಿದಿದೆ.

ಇನ್ನೂ ಜಗದೀಶ್ ಶೆಟ್ಟರ್ ಅವರ ಕ್ಷೇತ್ರವಾದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಈಶ್ವರಪ್ಪ ಅವರ ಶಿವಮೊಗ್ಗ, ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಚನ್ನಪಟ್ಟಣ ಸೇರಿದಂತೆ ಪ್ರಮುಖ ಎದುರಾಳಿ ಪಕ್ಷಗಳ ನಾಯಕರ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿಲ್ಲ. ಹೊಸ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸ್ಪರ್ಧಿಸಲಿರುವ ಗಂಗಾವತಿ ಕ್ಷೇತ್ರಕ್ಕೂ ಟಿಕೆಟ್ ಘೋಷಣೆ ಮಾಡಿಲ್ಲ.
ಇನ್ನೂ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣದ 17 ಕ್ಷೇತ್ರಗಳ ಪೈಕಿ ಎಂಟು ರಮೇಶ್ ಜಾರಕಿಹೊಳಿ- ಗೋಕಾಕ್, ಎಸ್.ಟಿ. ಸೋಮಶೇಖರ್- ಯಶವಂತಪುರ, ಗೋಪಾಲಯ್ಯ- ಮಹಾಲಕ್ಷ್ಮೇಲೇಔಟ್, ಬೈರತಿ ಬಸವರಾಜ- ಕೆ.ಆರ್. ಪುರ, ಶಿವರಾಮ ಹೆಬ್ಬಾರ್- ಯಲ್ಲಾಪುರ, ಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರ, ಮಹೇಶ್ ಕುಮಟಳ್ಳಿ- ಅಥಣಿ, ನಾರಾಯಣ ಗೌಡ- ಕೆ.ಆರ್. ಪೇಟೆ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡದೇ ಕಾಂಗ್ರೆಸ್ ನಾಯಕರು ಅನ್ಯ ಪಕ್ಷಗಳ ನಾಯಕರಿಗಾಗಿ ಕೆಲ ಕ್ಷೇತ್ರಗಳನ್ನ ಕಾಯ್ದಿರಿಸಿ, ಕಾದು ನೋಡುವ ತಂತ್ರಕ್ಕೆ ಕೈ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಸಂಪೂರ್ಣ ಮೊದಲ ಪಟ್ಟಿ ಇಲ್ಲಿದೆ.
ಚಿಕ್ಕೋಡಿ - ಗಣೇಶ್ ಹುಕ್ಕೇರಿ
ಕಾಗವಾಡ - ಭೀಮಗಗೌಡ ಕಾಗೆ
ಕುಡಚಿ - ಮಹೇಂದ್ರ ಕೆ
ಹುಕ್ಕೇರಿ - ಎ.ಬಿ.ಪಾಟೀಲ್
ಯಮಕನಮಡಿ - ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ - ಲಕ್ಷ್ಮಿ ಹೆಬ್ಬಾಳ್ಕರ್
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ಖಾನಾಪು - ಅಂಜಲಿ ನಿಂಬಾಳ್ಕರ್
ಬೈಲಹೊಂಗಲ - ಮಹಾಂತೇಶ್ ಕೌಜಲಗಿ
ರಾಮದುರ್ಗ - ಅಶೋಕ್ ಪಟ್ಟಣ್
ಜಮಖಂಡಿ - ಆನಂದ್ ನ್ಯಾಮಗೌಡ
ಹುನಗುಂದ - ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ - ಅಪ್ಪಾಜಿ ನಾಡಗೌಡ
ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್
ಬಬಲೇಶ್ವರ್ - ಎಂ.ಬಿ.ಪಾಟೀಲ್
ಇಂಡಿ - ಯಶವಂತರಾಯ ಗೌಡ ಪಾಟೀಲ್
ಜೇವರ್ಗಿ - ಅಜಯ್ ಸಿಂಗ್
ಸುರಪುರ - ರಾಜಾವೆಂಕಟಪ್ಪ ನಾಯಕ
ಶಹಪುರ_ಶರಣಬಸಪ್ಪ ಗೌಡ
ಚಿತ್ತಾಪುರ - ಪ್ರಿಯಾಂಕ್ ಖರ್ಗೆ
ಸೇಡಂ - ಶರಣಪ್ರಕಾಶ್ ಪಾಟೀಲ್
ಚಿಂಚೋಳಿ - ಸುಭಾಷ್ ರಾಠೋಡ್
ಕಲಬುರಗಿ ಉತ್ತರ - ಕನಿಜ ಫಾತಿಮಾ
ಆಳಂದ - ಬಿ.ಎಆರ್.ಪಾಟೀಲ್
ಹುಮ್ನಾಬಾದ್ - ರಾಜಶೇಖರ್ ಪಾಟೀಲ್
ಬೀದರ್ ದಕ್ಷಿಣ - ಅಶೋಕ್ ಖೇಣಿ
ಬೀದರ್ - ರಹೀಂ ಖಾನ್
ಬಾಲ್ಕಿ - ಈಶ್ವರ್ ಖಂಡ್ರೆ
ರಾಯಚೂರು ಗ್ರಾಮೀಣ - ಬಸನಗೌಡ ದದ್ದಲ್
ಮಸ್ಕಿ - ಬಸನಗೌಡ ತುರ್ವಿಹಾಳ
ಕುಷ್ಟಗಿ - ಅಮರೇಗೌಡ ಬಯ್ಯಾಪುರ
ಕನಕಗಿರಿ - ಶಿವರಾಜ್ ತಂಗಡಗಿ
ಯಲಬುರ್ಗಾ - ಬಸವರಾಜ ರಾಯರೆಡ್ಡಿ
ಕೊಪ್ಪಳ - ರಾಘವೇಂದ್ರ ಹಿಟ್ನಾಳ್
ಗದಗ - ಎಚ್.ಕೆ.ಪಾಟೀಲ್
ರೋಣ - ಜಿ.ಎಸ್.ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ) - ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್.ವಿ.ದೇಶಪಾಂಡೆ
ಕಾರವಾರ - ಸತೀಶ್ ಸೈಲ್
ಭಟ್ಕಳ - ಮಂಕಾಳ ವೈದ್ಯ
ಹಾನಗಲ್ - ಶ್ರೀನಿವಾಸ್ ಮಾನೆ
ಹಾವೇರಿ - ರುದ್ರಪ್ಪ ಲಮಾಣಿ
ಬ್ಯಾಡಗಿ - ಬಸವರಾಜ ಶಿವಣ್ಣನವರ್
ಹಿರೆಕೇರೂರು - ಯು.ಬಿ.ಬಣಕಾರ್
ರಾಣೆಬೆನ್ನೂರು - ಪ್ರಕಾಶ್ ಕೋಳಿವಾಡ
ಹೂವಿನ ಹಡಗಲಿ - ಪರಮೇಶ್ವರ್ ನಾಯ್ಕ್
ಹಗರಿಬೊಮ್ಮನಹಳ್ಳಿ - ಭೀಮಾನಾಯ್ಕ್
ವಿಜಯನಗರ - ಎಚ್.ಆರ್.ಗವಿಯಪ್ಪ
ಕಂಪ್ಲಿ - ಗಣೇಶ್
ಬಳ್ಳಾರಿ ಗ್ರಾಮೀಣ - ನಾಗೇಂದ್ರ
ಸಂಡೂರು - ತುಕಾರಾಂ
ಚಳ್ಳಕೆರೆ - ರಘುಮೂರ್ತಿ
ಹಿರಿಯೂರು - ಡಿ.ಸುಧಾಕರ್
ಹೊಸದುರ್ಗ - ಗೋವಿಂದಪ್ಪ
ದಾವಣಗೆರೆ ಉತ್ತರ- ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
ಮಾಯಕೊಂಡ - ಕೆ.ಎಸ್.ಬಸವರಾಜ್
ಭದ್ರಾವತಿ - ಸಂಗಮೇಶ್ವರ್
ಸೊರಬ - ಮಧು ಬಂಗಾರಪ್ಪ
ಸಾಗರ - ಬೇಳೂರು ಗೋಪಾಲಕೃಷ್ಣ
ಬೈಂದೂರು - ಗೋಪಾಲ್ ಪೂಜಾರಿ
ಕುಂದಾಪುರ - ದಿನೇಶ್ ಹೆಗಡೆ
ಕಾಪು - ವಿನಯ್ ಕುಮಾರ್ ಸೊರಕೆ
ಶೃಂಗೇರಿ - ಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್
ತಿಪಟೂರು - ಷಡಕ್ಷರಿ
ತುರುವೆಕೆರೆ - ಬೆಮೆಲ್ ಕಾಂತರಾಜ್
ಕುಣಿಗಲ್ - ರಂಗನಾಥ್
ಕೊರಟಗೆರೆ - ಪರಮೇಶ್ವರ್
ಶಿರಾ - ಟಿಬಿ ಜಯಚಂದ್ರ
ಪಾವಗಡ - ಎಚ್ವಿ ವೆಂಕಟೇಶ್
ಮಧುಗಿರಿ - ಕೆಎನ್ ರಾಜಣ್ಣ
ಗೌರಿಬಿದನೂರು ಶಿವಶಂಕರ ರೆಡ್ಡಿ
ಬಾಗೇಪಲ್ಲಿ - ಎಸ್.ಎನ್.ಸುಬ್ಬಾರೆಡ್ಡಿ
ಚಿಂತಾಮಣಿ - ಎಂಸಿ ಸುಧಾಕರ್
ಶ್ರೀನಿವಾಸಪುರ - ರಮೇಶ್ ಕುಮಾರ್
ಕೆಜಿಎಫ್ - ರೂಪಾ ಶಶೀಧರ್
ಬಂಗಾರಪೇಟೆ - ನಾರಾಯಣಸ್ವಾಮಿ
ಮಾಲೂರು - ನಂಜೇಗೌಡ
ಬ್ಯಾಟರಾಯನಪುರ - ಕೃಷ್ಣಭೈರೇಗೌಡ
ಆರ್.ಆರ್.ನಗರ - ಕುಸುಮಾ
ಮಲ್ಲೇಶ್ವರಂ - ಅನೂಪ್ ಅಯ್ಯಂಗಾರ್
ಹೆಬ್ಬಾಳ - ಭೈರತಿ ಸುರೇಶ್
ಸರ್ವಜ್ಞನಗರ - ಕೆಜೆ ಜಾರ್ಜ್
ಶಿವಾಜಿನಗರ - ರಿಜ್ವಾನ್ ಅರ್ಷದ್
ಶಾಂತಿನಗರ - ಎನ್.ಎಹ್ಯಾರಿಸ್
ಗಾಂಧಿನಗರ - ದಿನೇಶ್ ಗುಂಡೂರಾವ್
ರಾಜಾಜಿನಗರ - ಪುಟ್ಟಣ್ಣ
ಗೋವಿಂದರಾಜನಗರ - ಪ್ರಿಯಾಕೃಷ್ಣ
ವಿಜಯನಗರ - ಎಂ.ಕೃಷ್ಣಪ್ಪ
ಚಾಮರಾಜಪೇಟೆ - ಜಮೀರ್ ಅಹ್ಮದ್ ಖಾನ್
ಬಸವನಗುಡಿ - ಯುಬಿ ವೆಂಕಟೇಶ್
ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ
ಜಯನಗರ - ಸೌಮ್ಯಾ ರೆಡ್ಡಿ
ಮಹದೇವಪುರ - ನಾಗೇಶ್
ಆನೇಕಲ್ - ಶಿವಣ್ಣ
ಹೊಸಕೋಟೆ - ಶರತ್ ಬಚ್ಚೇಗೌಡ
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ದೊಡ್ಡಬಳ್ಳಾಪುರ - ವೆಂಕಟರಾಮಯ್ಯ
ನೆಲಮಂಗಲ - ಶ್ರೀನಿವಾಸ್ ಎನ್
ಮಾಗಡಿ - ಬಾಲಕೃಷ್ಣ
ರಾಮನಗರ - ಇಕ್ಬಾಲ್ ಹುಸೇನ್
ಕನಕಪುರ - ಡಿಕೆ ಶಿವಕುಮಾರ್
ಮಳವಳ್ಳಿ - ನರೇಂದ್ರ ಸ್ವಾಮಿ
ಶ್ರೀರಂಗಪಟ್ಟಣ - ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ - ಚಲುವರಾಯಸ್ವಾಮಿ
ಹೊಳೆನರಸೀಪುರ - ಶ್ರೇಯಸ್ ಪಟೇಲ್
ಸಕಲೇಶಪುರ - ಮುರಳಿ ಮೋಹನ್
ಬೆಳ್ತಂಗಡಿ - ರಕ್ಷಿತ್ ಶಿವರಾಮ್
ಮೂಡಬಿದ್ರೆ - ಮಿಥುನ್ ರೈ
ಮಂಗಳೂರು - ಯುಟಿ ಖಾದರ್
ಬಂಟ್ವಾಳ - ರಮಾನಾಥ್ ರೈ
ಸುಳ್ಯ - ಕೃಷ್ಣಪ್ಪ ಜಿ
ವಿರಾಜಪೇಟೆ - ಪೊನ್ನಣ್ಣ
ಪಿರಿಯಾಪಟ್ಟಣ - ಕೆ.ವೆಂಕಟೇಶ್
ಕೆ.ಆರ್.ನಗರ - ಡಿ.ರವಿಶಂಕರ್
ಹುಣಸೂರು - ಎಚ್.ಪಿ.ಮಂಜುನಾಥ್
ಎಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು
ನಂಜನಗೂರು -ದರ್ಶನ್ ಧ್ರುವನಾರಾಯಣ
ನರಸಿಂಹರಾಜ - ತನ್ವೀರ್ ಸೇಠ್
ವರುಣಾ - ಸಿದ್ದರಾಮಯ್ಯ
ಟಿ.ನರಸಿಪುರ - ಎಚ್.ಸಿ.ಮಹದೇವಪ್ಪ
ಹನೂರು - ನರೇಂದ್ರ
ಚಾಮರಾಜನಗರ - ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ - ಗಣೇಶ್ ಪ್ರಸಾದ್












Click it and Unblock the Notifications