Congress Ticket, Caste break-up: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು! ಜಾತಿವಾರು ಲೆಕ್ಕ ಇಲ್ಲಿದೆ
ಬೆಂಗಳೂರು,ಮಾರ್ಚ್ 25: 2023 ರ ವಿಧಾನಸಭಾ ಚುನಾವಣೆ ರಣಕಣ ಜೋರಾಗಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಇನ್ನೂ 124 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.
ಇನ್ನೂ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮುನ್ನ ಜಾತಿವಾರು ಪ್ರಮಾಣದಲ್ಲಿ ಟಿಕೆಟ್ ನೀಡಬೇಕು ಎಂದು ಸಾಲು ಸಾಲು ಸಭೆಗಳನ್ನ ನಡೆಸಿ ಹೆಚ್ಚಿನ ಟಿಕೆಟ್ ನೀಡಲು, ಲಿಂಗಾಯತ ಸಮುದಾಯ, ಕುರು, ಒಕ್ಕಲಿತ, ಮುಸ್ಲಿಂ ಸಮುದಾಯ ಸೇರಿದಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಹ ಹೆಚ್ಚಿನ ಟಿಕೆಟ್ ಗಾಗಿ ಲಾಭಿ ನಡೆಸಿದರು.

2018 ರ ಚುನಾವಣೆಗೆ ನೀಡಿದ ಟಿಕೆಟ್ ಗಿಂತ 2023 ರಲ್ಲಿ ಹೆಚ್ಚಿನ ಟಿಕೆಟ್ ನೀಡುವಂತೆ ಲಾಭಿ ನಡೆಸಿದ್ದು, ಕಾಂಗ್ರೆಸ್ ಹೈಕಮಾಂಡ್ ಗೆ ದೊಡ್ಡ ತಲೆ ನೋವಾಗಿದೆ. ಆದರೆ, ಇದೀಗ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಜಾತಿ ಲೆಕ್ಕಾಚಾರ ಹಾಗೂ ಎಲ್ಲಾ ಸಮುದಾಯಕ್ಕೂ ಮಣೆ ಹಾಕುವ ಪ್ರಯತ್ನವನ್ನ ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.
ಒಟ್ಟು 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇನ್ನೂ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದು ಬಾಕಿ ಇದೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವ ಜಾತಿಗೆ ಎಷ್ಟು ಟಿಕೆಟ್ ಸಿಕಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಜಾತಿವಾರು ಟಿಕೆಟ್ ಲಭಿಸಿರುವ ಪಟ್ಟಿಯಲ್ಲಿ ಲಿಂಗಾಯತ ಸಮುದಾಯ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಪರಿಷಿಷ್ಠ ಜಾತಿ ಮತ್ತು ಮೂರನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯವಿದೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಅಭ್ಯರ್ಥಿ ಪಟ್ಟಿಯಲ್ಲಿ ಜಾತಿವಾರು ಎಷ್ಟು ಟಿಕೆಟ್ ಲಭಿಸಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್ ?
ಲಿಂಗಾಯತ: 30
ಎಸ್‍ಸಿ: 22
ಒಕ್ಕಲಿಗ: 19
ಎಸ್‍ಟಿ: 10
ಮುಸ್ಲಿಂ: 8
ಈಡಿಗ: 6
ಕುರುಬ: 6
ರೆಡ್ಡಿ: 5
ಬ್ರಾಹ್ಮಣ: 5
ಬಂಟ್ಸ್: 3
ಮರಾಠ:2
ಕ್ರಿಶ್ಚಿಯನ್: 1
ಮೊಗವೀರ:1
ಉಪ್ಪಾರ:1
ರಜಪೂತ್: 1
ಇತರೆ:1
ಜೈನ್: 1
ಕೊಡವ:1
ವೈಶ್ಯ :1
ಕಾಂಗ್ರೆಸ್ ಸಂಪೂರ್ಣ ಮೊದಲ ಪಟ್ಟಿ ಇಲ್ಲಿದೆ.
ಚಿಕ್ಕೋಡಿ - ಗಣೇಶ್ ಹುಕ್ಕೇರಿ
ಕಾಗವಾಡ - ಭೀಮಗಗೌಡ ಕಾಗೆ
ಕುಡಚಿ - ಮಹೇಂದ್ರ ಕೆ
ಹುಕ್ಕೇರಿ - ಎ.ಬಿ.ಪಾಟೀಲ್
ಯಮಕನಮಡಿ - ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ - ಲಕ್ಷ್ಮಿ ಹೆಬ್ಬಾಳ್ಕರ್
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ಖಾನಾಪು - ಅಂಜಲಿ ನಿಂಬಾಳ್ಕರ್
ಬೈಲಹೊಂಗಲ - ಮಹಾಂತೇಶ್ ಕೌಜಲಗಿ
ರಾಮದುರ್ಗ - ಅಶೋಕ್ ಪಟ್ಟಣ್
ಜಮಖಂಡಿ - ಆನಂದ್ ನ್ಯಾಮಗೌಡ
ಹುನಗುಂದ - ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ - ಅಪ್ಪಾಜಿ ನಾಡಗೌಡ
ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್
ಬಬಲೇಶ್ವರ್ - ಎಂ.ಬಿ.ಪಾಟೀಲ್
ಇಂಡಿ - ಯಶವಂತರಾಯ ಗೌಡ ಪಾಟೀಲ್
ಜೇವರ್ಗಿ - ಅಜಯ್ ಸಿಂಗ್
ಸುರಪುರ - ರಾಜಾವೆಂಕಟಪ್ಪ ನಾಯಕ
ಶಹಪುರ_ಶರಣಬಸಪ್ಪ ಗೌಡ
ಚಿತ್ತಾಪುರ - ಪ್ರಿಯಾಂಕ್ ಖರ್ಗೆ
ಸೇಡಂ - ಶರಣಪ್ರಕಾಶ್ ಪಾಟೀಲ್
ಚಿಂಚೋಳಿ - ಸುಭಾಷ್ ರಾಠೋಡ್
ಕಲಬುರಗಿ ಉತ್ತರ - ಕನಿಜ ಫಾತಿಮಾ
ಆಳಂದ - ಬಿ.ಎಆರ್.ಪಾಟೀಲ್
ಹುಮ್ನಾಬಾದ್ - ರಾಜಶೇಖರ್ ಪಾಟೀಲ್
ಬೀದರ್ ದಕ್ಷಿಣ - ಅಶೋಕ್ ಖೇಣಿ
ಬೀದರ್ - ರಹೀಂ ಖಾನ್
ಬಾಲ್ಕಿ - ಈಶ್ವರ್ ಖಂಡ್ರೆ
ರಾಯಚೂರು ಗ್ರಾಮೀಣ - ಬಸನಗೌಡ ದದ್ದಲ್
ಮಸ್ಕಿ - ಬಸನಗೌಡ ತುರ್ವಿಹಾಳ
ಕುಷ್ಟಗಿ - ಅಮರೇಗೌಡ ಬಯ್ಯಾಪುರ
ಕನಕಗಿರಿ - ಶಿವರಾಜ್ ತಂಗಡಗಿ
ಯಲಬುರ್ಗಾ - ಬಸವರಾಜ ರಾಯರೆಡ್ಡಿ
ಕೊಪ್ಪಳ - ರಾಘವೇಂದ್ರ ಹಿಟ್ನಾಳ್
ಗದಗ - ಎಚ್.ಕೆ.ಪಾಟೀಲ್
ರೋಣ - ಜಿ.ಎಸ್.ಪಾಟೀಲ್
ಹುಬ್ಬಳ್ಳಿ-ಧಾರವಾಡ (ಪೂರ್ವ) - ಪ್ರಸಾದ್ ಅಬ್ಬಯ್ಯ
ಹಳಿಯಾಳ- ಆರ್.ವಿ.ದೇಶಪಾಂಡೆ
ಕಾರವಾರ - ಸತೀಶ್ ಸೈಲ್
ಭಟ್ಕಳ - ಮಂಕಾಳ ವೈದ್ಯ
ಹಾನಗಲ್ - ಶ್ರೀನಿವಾಸ್ ಮಾನೆ
ಹಾವೇರಿ - ರುದ್ರಪ್ಪ ಲಮಾಣಿ
ಬ್ಯಾಡಗಿ - ಬಸವರಾಜ ಶಿವಣ್ಣನವರ್
ಹಿರೆಕೇರೂರು - ಯು.ಬಿ.ಬಣಕಾರ್
ರಾಣೆಬೆನ್ನೂರು - ಪ್ರಕಾಶ್ ಕೋಳಿವಾಡ
ಹೂವಿನ ಹಡಗಲಿ - ಪರಮೇಶ್ವರ್ ನಾಯ್ಕ್
ಹಗರಿಬೊಮ್ಮನಹಳ್ಳಿ - ಭೀಮಾನಾಯ್ಕ್
ವಿಜಯನಗರ - ಎಚ್.ಆರ್.ಗವಿಯಪ್ಪ
ಕಂಪ್ಲಿ - ಗಣೇಶ್
ಬಳ್ಳಾರಿ ಗ್ರಾಮೀಣ - ನಾಗೇಂದ್ರ
ಸಂಡೂರು - ತುಕಾರಾಂ
ಚಳ್ಳಕೆರೆ - ರಘುಮೂರ್ತಿ
ಹಿರಿಯೂರು - ಡಿ.ಸುಧಾಕರ್
ಹೊಸದುರ್ಗ - ಗೋವಿಂದಪ್ಪ
ದಾವಣಗೆರೆ ಉತ್ತರ- ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
ಮಾಯಕೊಂಡ - ಕೆ.ಎಸ್.ಬಸವರಾಜ್
ಭದ್ರಾವತಿ - ಸಂಗಮೇಶ್ವರ್
ಸೊರಬ - ಮಧು ಬಂಗಾರಪ್ಪ
ಸಾಗರ - ಬೇಳೂರು ಗೋಪಾಲಕೃಷ್ಣ
ಬೈಂದೂರು - ಗೋಪಾಲ್ ಪೂಜಾರಿ
ಕುಂದಾಪುರ - ದಿನೇಶ್ ಹೆಗಡೆ
ಕಾಪು - ವಿನಯ್ ಕುಮಾರ್ ಸೊರಕೆ
ಶೃಂಗೇರಿ - ಟಿಡಿ ರಾಜೇಗೌಡ
ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್
ತಿಪಟೂರು - ಷಡಕ್ಷರಿ
ತುರುವೆಕೆರೆ - ಬೆಮೆಲ್ ಕಾಂತರಾಜ್
ಕುಣಿಗಲ್ - ರಂಗನಾಥ್
ಕೊರಟಗೆರೆ - ಪರಮೇಶ್ವರ್
ಶಿರಾ - ಟಿಬಿ ಜಯಚಂದ್ರ
ಪಾವಗಡ - ಎಚ್ವಿ ವೆಂಕಟೇಶ್
ಮಧುಗಿರಿ - ಕೆಎನ್ ರಾಜಣ್ಣ
ಗೌರಿಬಿದನೂರು ಶಿವಶಂಕರ ರೆಡ್ಡಿ
ಬಾಗೇಪಲ್ಲಿ - ಎಸ್.ಎನ್.ಸುಬ್ಬಾರೆಡ್ಡಿ
ಚಿಂತಾಮಣಿ - ಎಂಸಿ ಸುಧಾಕರ್
ಶ್ರೀನಿವಾಸಪುರ - ರಮೇಶ್ ಕುಮಾರ್
ಕೆಜಿಎಫ್ - ರೂಪಾ ಶಶೀಧರ್
ಬಂಗಾರಪೇಟೆ - ನಾರಾಯಣಸ್ವಾಮಿ
ಮಾಲೂರು - ನಂಜೇಗೌಡ
ಬ್ಯಾಟರಾಯನಪುರ - ಕೃಷ್ಣಭೈರೇಗೌಡ
ಆರ್.ಆರ್.ನಗರ - ಕುಸುಮಾ
ಮಲ್ಲೇಶ್ವರಂ - ಅನೂಪ್ ಅಯ್ಯಂಗಾರ್
ಹೆಬ್ಬಾಳ - ಭೈರತಿ ಸುರೇಶ್
ಸರ್ವಜ್ಞನಗರ - ಕೆಜೆ ಜಾರ್ಜ್
ಶಿವಾಜಿನಗರ - ರಿಜ್ವಾನ್ ಅರ್ಷದ್
ಶಾಂತಿನಗರ - ಎನ್.ಎಹ್ಯಾರಿಸ್
ಗಾಂಧಿನಗರ - ದಿನೇಶ್ ಗುಂಡೂರಾವ್
ರಾಜಾಜಿನಗರ - ಪುಟ್ಟಣ್ಣ
ಗೋವಿಂದರಾಜನಗರ - ಪ್ರಿಯಾಕೃಷ್ಣ
ವಿಜಯನಗರ - ಎಂ.ಕೃಷ್ಣಪ್ಪ
ಚಾಮರಾಜಪೇಟೆ - ಜಮೀರ್ ಅಹ್ಮದ್ ಖಾನ್
ಬಸವನಗುಡಿ - ಯುಬಿ ವೆಂಕಟೇಶ್
ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ
ಜಯನಗರ - ಸೌಮ್ಯಾ ರೆಡ್ಡಿ
ಮಹದೇವಪುರ - ನಾಗೇಶ್
ಆನೇಕಲ್ - ಶಿವಣ್ಣ
ಹೊಸಕೋಟೆ - ಶರತ್ ಬಚ್ಚೇಗೌಡ
ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
ದೊಡ್ಡಬಳ್ಳಾಪುರ - ವೆಂಕಟರಾಮಯ್ಯ
ನೆಲಮಂಗಲ - ಶ್ರೀನಿವಾಸ್ ಎನ್
ಮಾಗಡಿ - ಬಾಲಕೃಷ್ಣ
ರಾಮನಗರ - ಇಕ್ಬಾಲ್ ಹುಸೇನ್
ಕನಕಪುರ - ಡಿಕೆ ಶಿವಕುಮಾರ್
ಮಳವಳ್ಳಿ - ನರೇಂದ್ರ ಸ್ವಾಮಿ
ಶ್ರೀರಂಗಪಟ್ಟಣ - ರಮೇಶ್ ಬಂಡಿಸಿದ್ದೇಗೌಡ
ನಾಗಮಂಗಲ - ಚಲುವರಾಯಸ್ವಾಮಿ
ಹೊಳೆನರಸೀಪುರ - ಶ್ರೇಯಸ್ ಪಟೇಲ್
ಸಕಲೇಶಪುರ - ಮುರಳಿ ಮೋಹನ್
ಬೆಳ್ತಂಗಡಿ - ರಕ್ಷಿತ್ ಶಿವರಾಮ್
ಮೂಡಬಿದ್ರೆ - ಮಿಥುನ್ ರೈ
ಮಂಗಳೂರು - ಯುಟಿ ಖಾದರ್
ಬಂಟ್ವಾಳ - ರಮಾನಾಥ್ ರೈ
ಸುಳ್ಯ - ಕೃಷ್ಣಪ್ಪ ಜಿ
ವಿರಾಜಪೇಟೆ - ಪೊನ್ನಣ್ಣ
ಪಿರಿಯಾಪಟ್ಟಣ - ಕೆ.ವೆಂಕಟೇಶ್
ಕೆ.ಆರ್.ನಗರ - ಡಿ.ರವಿಶಂಕರ್
ಹುಣಸೂರು - ಎಚ್.ಪಿ.ಮಂಜುನಾಥ್
ಎಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು
ನಂಜನಗೂರು -ದರ್ಶನ್ ಧ್ರುವನಾರಾಯಣ
ನರಸಿಂಹರಾಜ - ತನ್ವೀರ್ ಸೇಠ್
ವರುಣಾ - ಸಿದ್ದರಾಮಯ್ಯ
ಟಿ.ನರಸಿಪುರ - ಎಚ್.ಸಿ.ಮಹದೇವಪ್ಪ
ಹನೂರು - ನರೇಂದ್ರ
ಚಾಮರಾಜನಗರ - ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ - ಗಣೇಶ್ ಪ್ರಸಾದ್












Click it and Unblock the Notifications