ಅಂದಹಾಗೆ ನಿಮ್ಮ ‘ಚಾಣಕ್ಯ’ ಎಲ್ಲಿ, ಪತ್ತೆಯೇ ಇಲ್ಲ: ಕಾಂಗ್ರೆಸ್!

ಬೆಂಗಳೂರು: ಬಿಜೆಪಿ ಸೋಲು ಹಾಗೂ ಕರ್ನಾಟಕ ಬಿಜೆಪಿ ನಾಯಕರ ನಡುವೆ ಎದ್ದಿರುವ ಗೊಂದಲಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಅದರಲ್ಲೂ ಮಾಜಿ ಶಾಸಕ ಸಿಟಿ ರವಿ ಮತ್ತು ಸಂಸದ ಪ್ರತಾಪ್ ಸಿಂಹ 'ಹೊಂದಾಣಿಕೆ ಪಾಲಿಟಿಕ್ಸ್' ಎಂದ ಬಳಿಕ ಕಿರಿಕಿರಿ ಜೋರಾಗಿದೆ. ಈ ಹೊತ್ತಲ್ಲಿ ಕಾಂಗ್ರೆಸ್, 'ನಿಮ್ಮ ಚಾಣಕ್ಯ ಎಲ್ಲಿ, ಪತ್ತೆ ಇಲ್ಲ' ಎಂದು ಪ್ರಶ್ನೆ ಮಾಡಿದೆ.

ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮಾತು ರಾಜ್ಯ ರಾಜಕೀಯದಲ್ಲಿ ಸುನಾಮಿ ಎಬ್ಬಿಸಿದೆ. ಹೊಸಬರಿಗೆ ಟಿಕೆಟ್‌ ಕೊಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಯಾರು ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರನ್ನು ನೇಣಿಗೆ ಬೇಕಾದರೂ ಹಾಕಿ, ಅವರ ಕಾಲನ್ನಾದರೂ ಕಡಿಯಿರಿ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಕೂಡ ಟ್ವೀಟ್ ಮಾಡಿ ತಿರುಗೇಟು ನೀಡಿದ್ದ ಕಾಂಗ್ರೆಸ್, ಇದೀಗ ಇದೇ ವಿಚಾರವನ್ನ ಹೊಸ ಅಸ್ತ್ರ ಮಾಡಿಕೊಂಡಿದೆ. ಹೀಗಾಗಿ ಟ್ವೀಟ್ ಮೂಲಕ 'ಅಂದಹಾಗೆ ನಿಮ್ಮ ಚಾಣಕ್ಯ ಎಲ್ಲಿ, ಪತ್ತೆಯೇ ಇಲ್ಲವಲ್ಲ' ಎಂದು ಬಿಜೆಪಿ ನಾಯಕರನ್ನ ಕೆಣಕಿದೆ.

Congress & BJP tweet war against parties internal fight

ಬಿಜೆಪಿ ವಿರುದ್ಧ ಕಾಂಗ್ರೆಸ್ ತಂತ್ರವೇನು?

ಕರ್ನಾಟಕ ಬಿಜೆಪಿ ಘಟಕದಲ್ಲಿ ಸ್ವಂತ ಪಕ್ಷದ ನಾಯಕರ ನಡುವೆಯೇ ಬಿರುಗಾಳಿ ಎದ್ದಿದೆ. ಅದರಲ್ಲೂ ಸಂಸದ ಪ್ರತಾಪ್ ಸಿಂಹ ಹಾಗೂ ಸಿಟಿ ರವಿ ಹೇಳಿಕೆಗಳು ಸುನಾಮಿ ಎಬ್ಬಿಸಿದೆ. ಈ ಮಧ್ಯೆ ಮತ್ತೊಬ್ಬ ಸಂಸದ ರಮೇಶ ಜಿಗಜಿಣಗಿ ಕೂಡ ತಿರುಗಿಬಿದ್ದಿದ್ದಾರೆ. ಈ ಹೊತ್ತಲ್ಲಿ ಕಾಂಗ್ರೆಸ್ ಮತ್ತೊಂದು ತಂತ್ರ ಹೂಡಿದೆ. ಅದೇ ಕಾರಣಕ್ಕೆ ಟ್ವೀಟ್ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತಿದೆ. ಅದರಲ್ಲೂ ಸಾಲು ಸಾಲು ಸರಣಿ ಟ್ವೀಟ್ ಮೂಲಕವೇ ಅಖಾಡಕ್ಕೆ ಆಹ್ವಾನ ನೀಡುತ್ತಿದೆ. ಇದು ರಾಜ್ಯ ಬಿಜೆಪಿ ಒಳಗೆ ಎದ್ದಿರುವ ಅಸಮಾಧಾನದ ಸುನಾಮಿಯನ್ನ ಮತ್ತಷ್ಟು ತೀವ್ರವಾಗಿಸಿದೆ.

ಕಾಂಗ್ರೆಸ್ ಹೇಳಿದ್ದು ಏನು ಗೊತ್ತಾ?

ಬೆಳಗ್ಗೆ ಇದೇ ವಿಚಾರಕ್ಕೆ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಈಗ ಮತ್ತೆ ಅದೇ ವಿಚಾರದ ಬಗ್ಗೆ ಇನ್ನೊಂದು ಟ್ವೀಟ್ ಮಾಡಿದೆ. 'ಗೆಲುವಿನ ಹೊಣೆಯನ್ನು ಮೋದಿ ಹೊರುತ್ತಿದ್ದರು, ಈಗ ಸೋಲಿನ ಹೊಣೆಯನ್ನು ಯಾರು ಹೊರುತ್ತಾರೆ @BJP4Karnataka? ರಮೇಶ್ ಜಿಗಜಣಗಿ ಹೇಳಿದಂತೆ, ಯಾರನ್ನು ನೇಣಿಗೆ ಹಾಕುವಿರಿ, ಯಾರ ಕಾಲು ಕಡಿಯುವಿರಿ? ಜೋಶಿ, ಸಂತೋಷ್ ತಲೆಮರೆಸಿಕೊಂಡಿರುವುದು ನೇಣಿನ ಭಯಕ್ಕೋ, ಕಾಲು ಕಡಿಯುವ ಭಯಕ್ಕೋ? ಅಂದಹಾಗೆ ನಿಮ್ಮ "ಚಾಣಕ್ಯ" ಎಲ್ಲಿ, ಪತ್ತೆಯೇ ಇಲ್ಲವಲ್ಲ?' ಎನ್ನುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ತಣಿಸಲು ಬಿಜೆಪಿಯ ದೆಹಲಿ ವರಿಷ್ಠರು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದೆ ಕಾಂಗ್ರೆಸ್.

ಬೆಳಗ್ಗೆ ಕೂಡ ಚಾಲೆಂಜ್ ಹಾಕಿತ್ತು!

ಇನ್ನು ಬೆಳಗ್ಗೆ ಕೂಡ ಇದೇ ವಿಚಾರದಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿ, 'ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ @BJP4Karnataka? ಅಮಿತ್ ಷಾರವರನ್ನೋ? ಬಿ.ಎಲ್. ಸಂತೋಷರನ್ನೊ? ಪ್ರಹ್ಲಾದ್ ಜೋಶಿಯವರನ್ನೋ ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ?' ಎಂದು ಸವಾಲು ಹಾಕಿತ್ತು. ಈ ಮಧ್ಯೆ ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ತಿರುಗೇಟು ನೀಡಿದೆ ರಾಜ್ಯ ಕಾಂಗ್ರೆಸ್.

ಒಟ್ನಲ್ಲಿ ಬಿಜೆಪಿ ಒಳಗೆ ವಿಧಾನಸಭೆ ಚುನಾವಣೆ ಸೋಲು ಅಸಮಾಧಾನದ ಹೊಗೆ ಹಬ್ಬಿಸಿ, ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ನಡುವೆ ಕೇಂದ್ರದ ನಾಯಕರು ಹಾಗೂ ಚುನಾವಣೆ ಸಮಯದಲ್ಲಿ ರಾಜ್ಯದ ಉಸ್ತುವಾರಿ ನೋಡಿಕೊಂಡಿದ್ದ ಬಿಜೆಪಿ ಲೀಡರ್ಸ್ ಅಸಮಾಧಾನಕ್ಕೆ ನೀರು ಎರಚುವ ಕೆಲಸ ಮಾಡುತ್ತಿಲ್ಲ. ಆದರೆ ಇದೇ ಕಿಚ್ಚನ್ನು ಮತ್ತಷ್ಟು ಹೆಚ್ಚಿಸುವಂತೆ, ಸಂಸದ ಪ್ರತಾಪ್ ಸಿಂಹ ಹಾಗೂ ಸಿಟಿ ರವಿ ಹೇಳಿಕೆ ವಿರುದ್ಧ ಬಿಜೆಪಿ ಹಿರಿಯ ನಾಯಕರ ಪಡೆ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಇದು ಕೂಡ ಶೀಘ್ರದಲ್ಲೇ ಸ್ಫೋಟಿಸುವುದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+