Foxconn: ‘ಕಾಂಗ್ರೆಸ್ ಬಂದಿದ್ದೆ ತಡ, ಹೂಡಿಕೆಗಳು ಕರ್ನಾಟಕದತ್ತ...’

ಕಾಂಗ್ರೆಸ್ & ಬಿಜೆಪಿ ನಡುವೆ ಅಭಿವೃದ್ಧಿ ವಿಚಾರಕ್ಕೆ ಫೈಟ್ ಮುಂದುವರಿದ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಸಂಸ್ಥೆಯೊಂದು, ಬರೋಬ್ಬರಿ 600 ಮಿಲಿಯನ್ ಡಾಲರ್ ಅಂದ್ರೆ ಹತ್ತಿರ ಹತ್ತಿರ 5000 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದೆ. ಈಗ ಇದೇ ವಿಚಾರ ಅಸ್ತ್ರವಾಗಿ ಮಾಡಿಕೊಂಡು ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಹಾಗಾದ್ರೆ ಕರ್ನಾಟಕ ಕಾಂಗ್ರೆಸ್ ಹೇಳಿದ್ದೇನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ರಾಜ್ಯದಲ್ಲಿ ಕಮಿಷನ್ ಸರ್ಕಾರ ನಡೀತಿದ್ದು, ಬಿಜೆಪಿ ಸರ್ಕಾರದ ಕಮಿಷನ್ ಮಾರ್ಗದಿಂದ ಕರ್ನಾಟಕಕ್ಕೆ ಉದ್ಯಮಗಳು ಬರ್ತಿಲ್ಲ ಎಂಬ ಆರೋಪವನ್ನ ಕಾಂಗ್ರೆಸ್ ಮಾಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿದ್ದು, ಇತ್ತೀಚೆಗೆ ಫಾಕ್ಸ್‌ಕಾನ್ ಸಂಸ್ಥೆ (Foxconn) ಗುಡ್ ನ್ಯೂಸ್ ಕೊಟ್ಟಿದೆ. ಕರ್ನಾಟಕದಲ್ಲಿ ಇನ್ನೂ 2 ಘಟಕ ಸ್ಥಾಪಿಸಲು ಫಾಕ್ಸ್‌ಕಾನ್ ಸಂಸ್ಥೆ ಮುಂದಾಗಿದೆ. ಅಂದಹಾಗೆ ಐಫೋನ್​ ಕೇಸಿಂಗ್ ಭಾಗಗಳನ್ನ ತಯಾರಿಸುವ ಘಟಕ ಸೇರಿ ಚಿಪ್ ತಯಾರಿಸುವ ಉಪಕರಣ ತಯಾರಿಕೆಗೆ ಇನ್ನೊಂದು ಘಟಕವನ್ನ ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಸಂಸ್ಥೆಯು ಸ್ಥಾಪನೆ ಮಾಡಲಿದೆ. ಇದೇ ಅಸ್ತ್ರ ಹಿಡಿದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Congress & BJP fight over Foxconn investment in Karnataka

'ಬಿಜೆಪಿ ಅವಧಿಯಲ್ಲಿ ರಾಜ್ಯದ ಘನತೆ ಮಣ್ಣುಪಾಲು...'

ಫಾಕ್ಸ್‌ಕಾನ್ ಕರ್ನಾಟಕದಲ್ಲಿ 600 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವ ಹಿನ್ನೆಲೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, 'ಬಿಜೆಪಿ ಅವಧಿಯಲ್ಲಿ ರಾಜ್ಯದ ಘನತೆ ಮಣ್ಣುಪಾಲು ಮಾಡಿದ್ದರ ಪರಿಣಾಮ ಹೂಡಿಕೆಗಳು ಪರರಾಜ್ಯದತ್ತ ಮುಖ ಮಾಡಿದ್ದವು, ಕಾಂಗ್ರೆಸ್ ಸರ್ಕಾರ ಬಂದಿದ್ದೆ ತಡ, ಹೂಡಿಕೆಗಳು ಕರ್ನಾಟಕದತ್ತ ಹರಿದು ಬರುತ್ತಿದೆ, ಹೂಡಿಕೆದಾರರಿಗೆ ರಾಜ್ಯದ ಬಗ್ಗೆ ಸಾಕಾರಾತ್ಮಕ ಭಾವನೆ ಮೂಡಿದೆ. ಫಾಕ್ಸ್ ಕಾನ್ ಸಂಸ್ಥೆ ಹಿಂದಿನ ಐಫೋನ್ ತಯಾರಿಕಾ ಘಟಕದ ಒಪ್ಪಂದವಲ್ಲದೆ ಮತ್ತೆ 5000 ಕೋಟಿ ಮೊತ್ತದ ಹೂಡಿಕೆ ಮಾಡಲು ತಯಾರಾಗಿದೆ. ಇದರಿಂದ 13 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಯುವಕರ ಕೈಗೆ ಉದ್ಯೋಗ ಕೊಡುತ್ತದೆ ಹೊರತು ಕೇಸರಿ ಶಾಲು, ತ್ರಿಶೂಲಗಳನ್ನಲ್ಲ.' ಎಂದಿದೆ.

ತಮಿಳುನಾಡಿಗೂ ಬಂಪರ್ ಕೊಟ್ಟಿರುವ ಕಂಪನಿ

ಅಂದಹಾಗೆ ಫಾಕ್ಸ್‌ಕಾನ್ ಸಂಸ್ಥೆಯ ಲೆಕ್ಕಾಚಾರವೇ ಬೇರೆಯಾಗಿದೆ. ಭವಿಷ್ಯದ ಬಗ್ಗೆ ಭರ್ಜರಿ ಪ್ಲ್ಯಾನ್ ಮಾಡಿರುವ ಸಂಸ್ಥೆ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆಗೆ ಮುಂದಾಗಿದೆ. ಈಗಾಗಲೇ ಫಾಕ್ಸ್‌ಕಾನ್ ಸಂಸ್ಥೆ ತಮಿಳುನಾಡಿನಲ್ಲಿ ಐಫೋನ್ ಅಸೆಂಬ್ಲಿಂಗ್ ಯೂನಿಟ್ ಅನ್ನ ಹೊಂದಿದೆ. ಚೆನ್ನೈ ಫ್ಯಾಕ್ಟರಿ ಜೊತೆ ಇನ್ನೆರಡು ಘಟಕಗಳನ್ನ ಸ್ಥಾಪಿಸುವ ಯೋಚನೆಯಲ್ಲಿದೆ. ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ಸ್ಥಾಪಿಸಲಿದ್ದು ಅದಕ್ಕೆ 195 ಮಿಲಿಯನ್ ಡಾಲರ್ ಬಂಡವಾಳ ಹೂಡಲಿದೆ. ಈ ಘಟಕದಿಂದ 6,000 ಮಂದಿಗೆ ಉದ್ಯೋಗ ಸಿಗಲಿದ್ದು, ಇದೀಗ ಕರ್ನಾಟಕದಲ್ಲೂ ಭಾರಿ ಮೊತ್ತದ ಹೂಡಿಕೆ ಮಾಡುತ್ತಿದೆ.

Congress & BJP fight over Foxconn investment in Karnataka

ಕರ್ನಾಟಕಕ್ಕೆ ಏನೆಲ್ಲಾ ಲಾಭ ಆಗುತ್ತೆ?

ಈಗಾಗಲೇ ನೆರೆಯ ತೆಲಂಗಾಣದಲ್ಲಿ ಕೂಡ ಫಾಕ್ಸ್‌ಕಾನ್ ಸಂಸ್ಥೆ ಹೂಡಿಕೆಗೆ ಮುಂದಾಗಿದೆ. ಫಾಕ್ಸ್‌ಕಾನ್ ಹೈದರಾಬಾದ್‌ನಲ್ಲೂ 1 ಘಟಕ ತೆರೆಯಲಿದೆ. ಬೆಂಗಳೂರಿನಲ್ಲಿ ಈಗ 2 ಘಟಕ ಬರುತ್ತಿರುವುದು ಗಮನ ಸೆಳೆದಿದೆ. ಅಷ್ಟಕ್ಕೂ ಐಫೋನ್ ಬಿಡಿಭಾಗ ತಯಾರಿಕೆಗೆ ನಿರ್ಮಿಸುವ ಘಟಕಕ್ಕೆ 350 ಮಿಲಿಯನ್ ಡಾಲರ್ ವಿನಿಯೋಗವಾಗುವ ಸಾಧ್ಯತೆ ಇದೆ. ಈ ಘಟಕದಿಂದಾಗಿ 12,000 ಜನರಿಗೆ ಉದ್ಯೋಗ ಸಿಗಬಹುದು. ಫಾಕ್ಸ್‌ಕಾನ್ ಈಗಾಗಲೇ ದೊಡ್ಡಬಳ್ಳಾಪುರದಲ್ಲಿ 14,000 ಕೋಟಿ ರೂಪಾಯಿ ಮೊತ್ತದ ಐಫೋನ್ ತಯಾರಿಕಾ ಘಟಕಗಳನ್ನು ಸ್ಥಾಪಿಸುತ್ತಿದೆ. ಹೆಚ್ಚುವರಿಯಾಗಿ ಈಗ 2 ಹೊಸ ಯೋಜನೆ ಆರಂಭಿಸಲಿದೆ.

ಒಟ್ನಲ್ಲಿ ಫಾಕ್ಸ್‌ಕಾನ್ ಸಂಸ್ಥೆ ಹೂಡಿಕೆ ವಿಚಾರದಲ್ಲಿ ಬಿಜೆಪಿ & ಕಾಂಗ್ರೆಸ್ ನಡುವೆ ದಂಗಲ್ ಜೋರಾಗಿದೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೊಮ್ಮೆ ಎರಡು ಪಕ್ಷಗಳ ನಡುವೆ ತಿಕ್ಕಾಟ ಸಖತ್ ಸದ್ದು ಮಾಡುತ್ತಿದೆ. ಹೀಗೆ ನಡೆಯುತ್ತಿರುವ ಈ ಟ್ವೀಟ್ ಯುದ್ಧವು ಎಂದಿಗೆ ಅಂತ್ಯವಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಸೋಷಿಯಲ್ ಮೀಡಿಯಾ ಮಂದಿ ಮಾತ್ರ ಎರಡೂ ಪಕ್ಷಗಳ ಟ್ವೀಟ್ ಯುದ್ಧವನ್ನು ನೋಡಿ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+