ಬಿಜೆಪಿ ಆಡಳಿತದಲ್ಲೇ 2000 ಟನ್ ಗೋಮಾಂಸ ರಫ್ತು: ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ 'ಗೋ ಹತ್ಯೆ' ನಿಷೇಧದ ಚರ್ಚೆ ತಾರಕಕ್ಕೆ ಏರಿದೆ. ಅದರಲ್ಲೂ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಬಿಜೆಪಿ ಆಡಳಿತದಲ್ಲೇ ಗೋವಾಗೆ ತಿಂಗಳಿಗೆ ಬರೋಬ್ಬರಿ 2000 ಟನ್ ಗೋಮಾಂಸ ರಫ್ತು ಆಗುತ್ತಿತ್ತು ಎಂದು ಆರೋಪಿಸಿದೆ. ಹೀಗೆ ಎರಡೂ ಪಕ್ಷಗಳ ಮಧ್ಯೆ ವಾಗ್ದಾಳಿ ಕಿಚ್ಚು ಧಗಧಗಿಸುತ್ತಿದೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ರಾಜ್ಯದಲ್ಲಿ 'ಗೋ ಹತ್ಯೆ' ನಿಷೇಧ ಕಾನೂನು ಜಾರಿಗೆ ಬಂತು. ಆದರೆ ಆಗ ಬಿಜೆಪಿ ಆಡಳಿತದಲ್ಲೇ ಗೋವಾಗೆ ತಿಂಗಳಿಗೆ ಬರೋಬ್ಬರಿ 2000 ಟನ್ ಗೋಮಾಂಸ ರಫ್ತು ಆಗುತ್ತಿತ್ತು ಎಂದು ಆರೋಪಿಸಿದೆ ಕಾಂಗ್ರೆಸ್. ಇದು ಮೊದಲೇ ಎರಡೂ ಪಕ್ಷಗಳ ಮಧ್ಯೆ ಹೊತ್ತಿ ಉರಿಯುತ್ತಿದ್ದ ಪರಿಸ್ಥಿತಿಯನ್ನ ಇನ್ನಷ್ಟು ಬಿಗಡಾಯಿಸುವ ಸಂದರ್ಭ ತಂದಿದೆ. ಇನ್ನೇನು ಬಿಬಿಎಂಪಿ & ಲೋಕಸಭೆ ಚುನಾವಣೆ ಹತ್ತಿರುವಾಗುತ್ತಿರುವ ಸಂದರ್ಭದಲ್ಲೇ ಬಿಜೆಪಿ ಲೀಡರ್ಸ್ ವಿರುದ್ಧ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗಿಸಿದೆ.

ಬಿಜೆಪಿ & ಕಾಂಗ್ರೆಸ್ 'ಗೋ ಹತ್ಯೆ' ವಾರ್!
ಇನ್ನು ಈ ಕುರಿತು ಟ್ವೀಟ್ ಮೂಲಕ ಕೇಸರಿ ಪಡೆ ನಾಯಕರ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಅಲ್ಲದೆ ಬಿಜೆಪಿ ಅವಧಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಗೋ ಮಾಂಸ ರಫ್ತು ಆಗಿದೆ ಎಂದಿದೆ ರಾಜ್ಯ ಕಾಂಗ್ರೆಸ್. 'ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವಲ್ಲಿ ಭಾರತವೇ ನಂ1 ಆಗಿದೆ. ಬಿಜೆಪಿ ಆಡಳಿತದಲ್ಲೇ ಗೋವಾಕ್ಕೆ ಮಾಸಿಕ 2000 ಟನ್ ಗೋಮಾಂಸ ರಫ್ತಾಗುತ್ತಿತ್ತು. ಮಣಿಪುರ, ಗೋವಾ, ಕೇರಳದಲ್ಲಿ ಬಿಜೆಪಿ ಜನತೆಗೆ ಗೋಮಾಂಸದ ಭರವಸೆ ನೀಡಿದೆ. ಇಂತಹ ಇಬ್ಬಂದಿ ನಿಲುವಿನ @BJP4Karnataka ಗೋವುಗಳ ಬಗ್ಗೆ ಮಾತಾಡುವುದು ತೋಳಗಳು ಸಸ್ಯಾಹಾರದ ಪಾಠ ಮಾಡಿದಂತೆಯೇ ಸರಿ!' ಎಂದು ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
◆ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವಲ್ಲಿ ಭಾರತವೇ ನಂ1 ಆಗಿದೆ
— Karnataka Congress (@INCKarnataka) June 8, 2023
◆ಬಿಜೆಪಿ ಆಡಳಿತದಲ್ಲೇ ಗೋವಾಕ್ಕೆ ಮಾಸಿಕ 2000 ಟನ್ ಗೋಮಾಂಸ ರಫ್ತಾಗುತ್ತಿತ್ತು
◆ಮಣಿಪುರ, ಗೋವಾ, ಕೇರಳದಲ್ಲಿ ಬಿಜೆಪಿ ಜನತೆಗೆ ಗೋಮಾಂಸದ ಭರವಸೆ ನೀಡಿದೆ
ಇಂತಹ ಇಬ್ಬಂದಿ ನಿಲುವಿನ @BJP4Karnataka ಗೋವುಗಳ ಬಗ್ಗೆ ಮಾತಾಡುವುದು ತೋಳಗಳು ಸಸ್ಯಾಹಾರದ ಪಾಠ ಮಾಡಿದಂತೆಯೇ ಸರಿ! pic.twitter.com/MpwQ6pxdl1
ಪ್ರತಿಭಟನೆ ನಡೆಸಿದ್ದ ಬಿಜೆಪಿ!
ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕರು ಗೋ ಹತ್ಯೆ ನಿಷೇಧ ವಿಚಾರವಾಗಿ ಪ್ರತಿಭಟನೆ ನಡೆಸಿದ್ದರು. ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲು ನಾವು ಬಿಡಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಕಾಂಗ್ರೆಸ್ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. ಅದ್ರಲ್ಲೂ ಬಿಜೆಪಿ ಅವಧಿಯಲ್ಲೇ ಹೆಚ್ಚು ಪ್ರಮಾಣದಲ್ಲಿ ಗೋಮಾಂಸ ರಫ್ತು ಮಾಡಿದ್ದರು ಎಂಬ ಆರೋಪ ಮಾಡಿದೆ. ಇದಕ್ಕೆ ಬಿಜೆಪಿ ಲೀಡರ್ಸ್ ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೆ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಮಾಂಸ ರಫ್ತು ಮಾಡಿಲ್ಲ ಅನ್ನೋದಕ್ಕೆ ಸಾಕ್ಷಿಯನ್ನ ಕೊಡ್ತಾರಾ? ಅನ್ನೋ ಬಗ್ಗೆ ಚರ್ಚೆ ಬಲು ಜೋರಾಗಿ ನಡೆಯುತ್ತಿದೆ.

ಬಿಜೆಪಿ ವಿರುದ್ಧ ದುರಾಡಳಿತದ ಆರೋಪ!
ಹಾಗೇ ಇನ್ನೊಂದು ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಟೀಕಿಸುವ ಅಬ್ಬರದಲ್ಲಿ ಬಿಜೆಪಿ ಮಾಡಿದ್ದ ಟ್ವೀಟ್‌ಗೆ ತಿರುಗೇಟು ನೀಡಿದೆ ರಾಜ್ಯ ಕಾಂಗ್ರೆಸ್ ಘಟಕ. 'ತಮ್ಮ ದುರಾಡಳಿತದಲ್ಲಿ ರಾಜ್ಯವನ್ನು ಯಾವ ಮಟ್ಟದ ದುಸ್ಥಿತಿಗೆ ತಳ್ಳಿದ್ದೀರಿ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು @BJP4Karnataka! ಈ ಅಪರೂಪದ ಪ್ರಾಮಾಣಿಕತೆಗೆ ಬಿಜೆಪಿಗೆ ಯಾವುದಾದರೊಂದು ಪ್ರಶಸ್ತಿ ಖಂಡಿತ ಸಿಗಲೇಬೇಕು!' ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಲಾಗಿದೆ.
ತಮ್ಮ ದುರಾಡಳಿತದಲ್ಲಿ ರಾಜ್ಯವನ್ನು ಯಾವ ಮಟ್ಟದ ದುಸ್ಥಿತಿಗೆ ತಳ್ಳಿದ್ದೀರಿ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು @BJP4Karnataka!
— Karnataka Congress (@INCKarnataka) June 8, 2023
ಈ ಅಪರೂಪದ ಪ್ರಾಮಾಣಿಕತೆಗೆ ಬಿಜೆಪಿಗೆ ಯಾವುದಾದರೊಂದು ಪ್ರಶಸ್ತಿ ಖಂಡಿತ ಸಿಗಲೇಬೇಕು! pic.twitter.com/CcPAWjLKL2
ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ 'ಗೋ ಹತ್ಯೆ' ನಿಷೇಧ ಕಾಯ್ದೆಯ ಯುದ್ಧವೂ ಜೋರಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾ ಮಂದಿ ಕೂಡ ಚರ್ಚೆ ನಡೆಸುತ್ತಿದ್ದು ಪರ-ವಿರೋಧದ ಮಾತುಗಳು ಕೇಳಿಬರ್ತಿವೆ. ಹಾಗೇ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ, ಬಿಜೆಪಿ ನಾಯಕರು ಉತ್ತರ ನೀಡಲಿ ಅನ್ನೋ ಒತ್ತಾಯ ಕೂಡ ಕೇಳಿಬರ್ತಿದೆ. ಇಷ್ಟೆಲ್ಲದರ ನಡುವೆ ಇನ್ನೂ ಎಷ್ಟುದಿನ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 'ಗೋ ಹತ್ಯೆ' ನಿಷೇಧ ಕಾಯ್ದೆಯ ಬಗ್ಗೆ ವಾರ್ ನಡೆಯುತ್ತೆ ಗೊತ್ತಿಲ್ಲ. ಇದು ಚುನಾವಣೆ ತನಕವು ಹೀಗೆ ಮುಂದುವರಿಯುತ್ತಾ? ಅಥವಾ ಚುನಾವಣೆಗೆ ಮೊದಲೇ ನಿಲ್ಲುತ್ತಾ ಅಂತಿದ್ದಾರೆ ಜನ!












Click it and Unblock the Notifications