Congress Manifesto 2023: ಮೇಕೆದಾಟು ಯೋಜನೆಗೆ 9,000 ಕೋಟಿ ಭರವಸೆ

ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದೆ. ಇದರಲ್ಲಿ ಮುಖ್ಯವಾಗಿ ಮೇಕೆದಾಟು ಯೋಜನೆಗೆ ಬರೋಬ್ಬರಿ 9,000 ಕೋಟಿ ನೀಡುವುದಾಗಿ ತಿಳಿಸಲಾಗಿದೆ.

ಅಲ್ಲದೆ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಂದಿನ 5 ವರ್ಷಗಳಲ್ಲಿ ನೀರಾವರಿಗಾಗಿ ರೂ 1.50 ಲಕ್ಷ ಕೋಟಿ ವಿನಿಯೋಗಿಸಲಾಗುವುದು. ಈ ಕೆಳಕಂಡ ನೀರಾವರಿ ಯೋಜನೆಗಳನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸುವುದು. ಅದರಲ್ಲಿ ಹೊಸ ಯೋಜನೆಗಳು-ಮೇಕೆದಾಟು ಯೋಜನಾ ವೆಚ್ಚ ರೂ 9,000 ಕೋಟಿ, ಮಹದಾಯಿ ರೂ.3,000 ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

Congress 9,000 crore grant promised for Mekedatu project Election Manifesto For Karnataka Poll 2023

ಮಹಾದಾಯಿ ಯೋಜನೆ ಸಂಪೂರ್ಣ:

ಬೆಳಗಾವಿ, ಹುಬ್ಬಳ್ಳಿ ಧಾರವಾಡ ಜಿಲ್ಲೆಗಳ 50 ಲಕ್ಷ ಜನರಿಗೆ ಕುಡಿಯುವ ನೀರಿನ ಪೂರೈಕೆಗೆ ಮಹಾದಾಯಿ ಯೋಜನೆಯನ್ನು ಕಾರ್ಯಗತಗೊಳಿಸುವ ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವು ಮಹಾದಾಯಿ ಯೋಜನೆಯನ್ನು ಸಂಪೂರ್ಣಗೊಳಿಸುವಲ್ಲಿ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ರೂ. 500 ಕೋಟಿಗಳನ್ನು ವಿನಿಯೋಗಿಸಿ ಯೋಜನಾ ವೆಚ್ಚವಾದ ರೂ.3 ಸಾವಿರ ಕೋಟಿಗಳನ್ನು 5 ವರ್ಷದಲ್ಲಿ ವಿನಿಯೋಗಿಸುವುದು.

ಕಳಸಾ-ಬಂಡೂರಿ ಯೋಜನೆ ಪೂರೈಕೆ:

ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಈ ಯೋಜನೆಗಳನ್ನು ಬಳಸಿಕೊಳ್ಳಲಾಗುವುದು. ಹಳೆಯ ಯೋಜನೆಗಳು- ಕೃಷ್ಣಾ ಮೇಲ್ದಂಡೆ, ಆಲಮಟ್ಟಿ ಅಣೆಕಟ್ಟೆ ಎತ್ತರ, ಭದ್ರಾ ಮೇಲ್ದಂಡೆ ಯೋಜನೆ. ಎತ್ತಿನಹೊಳೆ ಹಾಗೂ ವಾರಾಹಿ ಯೋಜನೆಗಳು ಮತ್ತು ಎಲ್ಲಾ ಉಪಕಾಲುವೆಗಳ ಯೋಜನೆಗಳು ಜಾರಿ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಳಸಾ-ಬಂಡೂರಿ ಯೋಜನೆಯನ್ನು ಪೂರೈಸಲಾಗುವುದು. ಕೇಂದ್ರ ಸರ್ಕಾರದಿಂದ ಈ ಯೋಜನೆಗಳಗೆ ಅನುಮತಿಗಳನ್ನು ತರಲು ತ್ವರಿತ ಪ್ರಯತ್ನ ನಡೆಸಲಾಗುವುದು. ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷದೊಳಗಡೆ ಸಂಪೂರ್ಣಗೊಳಿಸುವುದು ಎಂದು ತಿಳಿಸಲಾಗಿದೆ.

ಕೃಷಿ ಹಾಗೂ ಬೇಸಾಯಕ್ಕಾಗಿ ರೈತಸ್ನೇಹಿ ಕಾರ್ಯಕ್ರಮ

ರಾಯಪುರ ಅಧಿವೇಶನದಲ್ಲಿ ಕನಿಷ್ಟ ಬೆಂಬಲದ ಬಗ್ಗೆ (ಎಂಎಸ್‌ಪಿ) ಕಾಂಗ್ರೆಸ್ ಪಕ್ಷವು ತೆಗೆದುಕೊಂಡ ನಿರ್ಣಯದಂತೆ-ರೈತರ ಹಕ್ಕಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಅನುಷ್ಠಾನಗೊಳಿಸಲು ಸ್ವಾಮಿನಾಥನ್ ವರದಿಯ ಮತ್ತು ಕರ್ನಾಟಕ ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗದ ವರದಿಗಳ ಆಧಾರದಂತೆ, ರೈತ ಪ್ರತಿನಿಧಿಗಳೊಡನೆ ಚರ್ಚೆ ಮಾಡಿ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ನೀತಿಯನ್ನು ಜಾಲಿ ಮಾಡುವುದು.

ಬಡ್ಡಿ ರಹಿತ ಸಾಲ ರೂ 3 ಲಕ್ಷದಿಂದ ರೂ 10 ಲಕ್ಷಕ್ಕೆ:

ಪ್ರತಿ ವಿಭಾಗಕ್ಕೆ ಒಂದರಂತೆ ಕೃಷಿ ಬೆಲೆ ಆಯೋಗ ಸ್ಥಾಪನೆ. ರೈತರಿಗೆ ಬಡ್ಡಿ ರಹಿತ ಸಾಲ ರೂ 3 ಲಕ್ಷದಿಂದ ರೂ 10 ಲಕ್ಷಕ್ಕೆ ವಿಸ್ತರಣೆ, ಕನಿಷ್ಠ ಶೇ 3ರ ಬಡ್ಡಿದರದಲ್ಲಿ ರೂ. 15 ಲಕ್ಷದವರೆಗೆ ಸಾಲ, ಸರ್ಕಾರದಿಂದಲೇ ಬಡ್ಡಿ ವ್ಯತ್ಯಾಸ ಪಾವತಿ ಕೃಷಿ ಉನ್ನತಿ ನಿಧಿ- ಕೃಷಿ ಉತ್ಪನ್ನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್ ಆರಂಭಿಸಲು ಮತ್ತು ಇತರ ಸಂಶೋಧನೆಗಳ ಉತ್ತೇಜನಕ್ಕೆ ಸಾಲ ರೂ 500 ಕೋಟಗಳ ಸಾಲ ನಿಧಿ ಗ್ರಾಮೀಣ ಮಹಿಳೆಯರು ನಡೆಸುವ ಕೃಷಿ ಅಧಾರಿತ ಗ್ರಾಮೀಣ ಉದ್ಯಮಗಳ ಉತ್ತೇಜನಕ್ಕೆ ರೂ 200 ಕೋಣ ಹೂಡಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+