Congress Manifesto 2023: ರೈತರಿಗೆ 10 ಲಕ್ಷ ಬಡ್ಡಿ ರಹಿತ ಸಾಲದ ವಾಗ್ದಾನ
ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದೆ. ಇದರಲ್ಲಿ ಮುಖ್ಯವಾಗಿ ರೈತರಿಗೆ 10 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಿಸಲಾಗಿದೆ.
ಕೃಷಿ ಹಾಗೂ ಬೇಸಾಯಕ್ಕಾಗಿ ರೈತಸ್ನೇಹಿ ಕಾರ್ಯಕ್ರಮ
ರಾಯಪುರ ಅಧಿವೇಶನದಲ್ಲಿ ಕನಿಷ್ಟ ಬೆಂಬಲದ ಬಗ್ಗೆ (ಎಂಎಸ್‌ಪಿ) ಕಾಂಗ್ರೆಸ್ ಪಕ್ಷವು ತೆಗೆದುಕೊಂಡ ನಿರ್ಣಯದಂತೆ-ರೈತರ ಹಕ್ಕಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಅನುಷ್ಠಾನಗೊಳಿಸಲು ಸ್ವಾಮಿನಾಥನ್ ವರದಿಯ ಮತ್ತು ಕರ್ನಾಟಕ ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗದ ವರದಿಗಳ ಆಧಾರದಂತೆ, ರೈತ ಪ್ರತಿನಿಧಿಗಳೊಡನೆ ಚರ್ಚೆ ಮಾಡಿ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ನೀತಿಯನ್ನು ಜಾಲಿ ಮಾಡುವುದು.

ಬಡ್ಡಿ ರಹಿತ ಸಾಲ ರೂ 3 ಲಕ್ಷದಿಂದ ರೂ 10 ಲಕ್ಷಕ್ಕೆ:
ಪ್ರತಿ ವಿಭಾಗಕ್ಕೆ ಒಂದರಂತೆ ಕೃಷಿ ಬೆಲೆ ಆಯೋಗ ಸ್ಥಾಪನೆ. ರೈತರಿಗೆ ಬಡ್ಡಿ ರಹಿತ ಸಾಲ ರೂ 3 ಲಕ್ಷದಿಂದ ರೂ 10 ಲಕ್ಷಕ್ಕೆ ವಿಸ್ತರಣೆ, ಕನಿಷ್ಠ ಶೇ 3ರ ಬಡ್ಡಿದರದಲ್ಲಿ ರೂ. 15 ಲಕ್ಷದವರೆಗೆ ಸಾಲ, ಸರ್ಕಾರದಿಂದಲೇ ಬಡ್ಡಿ ವ್ಯತ್ಯಾಸ ಪಾವತಿ ಕೃಷಿ ಉನ್ನತಿ ನಿಧಿ- ಕೃಷಿ ಉತ್ಪನ್ನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್ ಆರಂಭಿಸಲು ಮತ್ತು ಇತರ ಸಂಶೋಧನೆಗಳ ಉತ್ತೇಜನಕ್ಕೆ ಸಾಲ ರೂ 500 ಕೋಟಗಳ ಸಾಲ ನಿಧಿ ಗ್ರಾಮೀಣ ಮಹಿಳೆಯರು ನಡೆಸುವ ಕೃಷಿ ಅಧಾರಿತ ಗ್ರಾಮೀಣ ಉದ್ಯಮಗಳ ಉತ್ತೇಜನಕ್ಕೆ ರೂ 200 ಕೋಣ ಹೂಡಿಕೆ ಮಾಡಲಾಗುವುದು.
ಕೃಷಿ ಉತ್ತೇಜನಕ್ಕೆ ರೂ 2,500 ಕೋಟಿ ಹೂಡಿಕೆ:
ಬಿಜೆಪಿ ಸರ್ಕಾರ ಪಾಲಿಗೆ ತಂದಿರುವ ಕೃಷಿ ಕಾಯ್ದೆಗಳು, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ರದ್ದು ರೈತರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗುವುದು. ಸಾವಯವ ಸರದಾರ ಯೋಜನೆ ಸಾವಯವ ಕೃಷಿ ಉತ್ತೇಜನಕ್ಕೆ ರೂ 2,500 ಕೋಟಿ ಹೂಡಿಕೆ. ಜಲ ಚೇತನ ಅಂದೋಲನ-ತುಂತುರು ಮತ್ತು ಹನಿ ನೀರಾವರಿ ಅಳವಡಿಕೆಗೆ ಶೇ 100ರಷ್ಟು ಸಬ್ಸಿಡಿ ಗ್ರಾಮೀಣ ಕೃಷಿಕ ಮಹಿಳೆಯರಿಗಾಗಿ ಸ್ವ ಸಹಾಯ ಗುಂಪುಗಳಿಗೆ ಹಾಗೂ ರೂ 3 ಲಕ್ಷದವರೆಗೆ ಬಡ್ಡಿರಹಿತ, ಬರಗಾಲ ಮತ್ತು ಕ್ಷಾಮದ ಅವಧಿಯಲ್ಲಿ ಕೃಷಿ ಉತ್ಪನ್ನಗಳಿಗೆ ಆಗುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸಾಲ ಮರುಪಾವತಿ ಮುಂದೂಡುವಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ವನ್ಯ ಕಾಡುಪ್ರಾಣಿಗಳ ಸಂಘರ್ಷ ತಡೆಗೆ 200 ಕೋಟಿ:
ಶರಾವತಿ ಹಿನ್ನೀರು ಪುನರ್ವಸತಿ ಸಮಸ್ಯೆಗೆ ಆದ್ಯತೆಯಲ್ಲಿ ಪರಿಹಾರ. ವಸತಿ ಸಮಸ್ಯೆಗೆ ತೊಡಗಕಾಗಿರುವ ಅರಣ್ಯ ಕಾಯ್ದೆಯ ಬಿಧಿಗಳ ತಿದ್ದುಪಡಿ. ರೈತರು ಮತ್ತು ವನ್ಯ ಕಾಡುಪ್ರಾಣಿಗಳ ಸಂಘರ್ಷವನ್ನು ತಪ್ಪಿಸಲು ವೈಜ್ಞಾನಿಕ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರೂ 200 ಕೋಟಿಗಳ ಹೂಡಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಅಲ್ಲದೆ ತೋಟಗಾರಿಕೆ ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ ಒದಗಿಸಲು ರೂ 500 ಕೋಟ ಕಾಫಿ ಕರ್ನಾಟಕ ಸ್ಟ್ಯಾಂಡ್ ಸೃಷ್ಟಿ ಮಾಡಲಾಗುವುದು. ರೇಷ್ಮೆ ಸ್ಥಿರತೆ ನಿಧಿಗೆ ಆರಂಭಿಕ ಹಂತದಲ್ಲಿ ರೂ 2000 ಕೋಟಿ ಅನುದಾನ ಎಲ್ಲಾ ರೇಷ್ಮೆ ನೂಲು ಲೀಲರ್‌ಗಳಿಗೆ ರೂ 3 ಲಕ್ಷ ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ತಿಳಿಸಿದೆ.
ಮೇಕೆದಾಟು ಯೋಜನಾ ವೆಚ್ಚ ರೂ 9,000 ಕೋಟಿ:
ಅಲ್ಲದೆ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಂದಿನ 5 ವರ್ಷಗಳಲ್ಲಿ ನೀರಾವರಿಗಾಗಿ ರೂ 1.50 ಲಕ್ಷ ಕೋಟಿ ವಿನಿಯೋಗ. ಈ ಕೆಳಕಂಡ ನೀರಾವರಿ ಯೋಜನೆಗಳನ್ನು 5 ವರ್ಷಗಳಲ್ಲಿ ಪೂರ್ಣಗೊಆಸುವುದು. ಹೊಸ ಯೋಜನೆಗಳು-ಮೇಕೆದಾಟು ಯೋಜನಾ ವೆಚ್ಚ ರೂ 9,000 ಕೋಟಿ, ಮಹದಾಯಿ ರೂ.3,000 ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ಮಹಾದಾಯಿ ಯೋಜನೆ ಸಂಪೂರ್ಣ:
ಬೆಳಗಾವಿ, ಹುಬ್ಬಳ್ಳಿ ಧಾರವಾಡ ಜಿಲ್ಲೆಗಳ 50 ಲಕ್ಷ ಜನರಿಗೆ ಕುಡಿಯುವ ನೀರಿನ ಪೂರೈಕೆಗೆ ಮಹಾದಾಯಿ ಯೋಜನೆಯನ್ನು ಕಾರ್ಯಗತಗೊಳಿಸುವ ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವು ಮಹಾದಾಯಿ ಯೋಜನೆಯನ್ನು ಸಂಪೂರ್ಣಗೊಳಿಸುವಲ್ಲಿ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ರೂ. 500 ಕೋಟಿಗಳನ್ನು ವಿನಿಯೋಗಿಸಿ ಯೋಜನಾ ವೆಚ್ಚವಾದ ರೂ.3 ಸಾವಿರ ಕೋಟಿಗಳನ್ನು 5 ವರ್ಷದಲ್ಲಿ ವಿನಿಯೋಗಿಸುವುದು.
ಕಳಸಾ-ಬಂಡೂರಿ ಯೋಜನೆ ಪೂರೈಕೆ:
ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗಾಗಿ ಈ ಯೋಜನೆಗಳನ್ನು ಬಳಸಿಕೊಳ್ಳಲಾಗುವುದು. ಹಳೆಯ ಯೋಜನೆಗಳು- ಕೃಷ್ಣಾ ಮೇಲ್ದಂಡೆ, ಆಲಮಟ್ಟಿ ಅಣೆಕಟ್ಟೆ ಎತ್ತರ, ಭದ್ರಾ ಮೇಲ್ದಂಡೆ ಯೋಜನೆ. ಎತ್ತಿನಹೊಳೆ ಹಾಗೂ ವಾರಾಹಿ ಯೋಜನೆಗಳು ಮತ್ತು ಎಲ್ಲಾ ಉಪಕಾಲುವೆಗಳ ಯೋಜನೆಗಳು ಜಾರಿ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಕಳಸಾ-ಬಂಡೂರಿ ಯೋಜನೆಯನ್ನು ಪೂರೈಸಲಾಗುವುದು. ಕೇಂದ್ರ ಸರ್ಕಾರದಿಂದ ಈ ಯೋಜನೆಗಳಗೆ ಅನುಮತಿಗಳನ್ನು ತರಲು ತ್ವರಿತ ಪ್ರಯತ್ನ ನಡೆಸಲಾಗುವುದು. ಎತ್ತಿನಹೊಳೆ ಯೋಜನೆಯನ್ನು ಎರಡು ವರ್ಷದೊಳಗಡೆ ಸಂಪೂರ್ಣಗೊಳಿಸುವುದು ಎಂದು ತಿಳಿಸಲಾಗಿದೆ.












Click it and Unblock the Notifications