ಕಾಂಗ್ರೆಸ್-ಜೆಡಿಎಸ್ ಗೆದ್ದಿದ್ದು ಮೈತ್ರಿಯಿಂದಲ್ಲ, ಸ್ವಂತ ಬಲದಿಂದ, ಇಲ್ಲಿದೆ ವಿಶ್ಲೇಷಣೆ
ಬೆಂಗಳೂರು, ನವೆಂಬರ್ 07: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ಉಪಚುನಾವಣೆಯಲ್ಲಿ ಗೆಲುವು ಕಂಡಿದೆ ಎಂಬ ವಾದ ಎಲ್ಲೆಡೆ ವ್ಯಕ್ತವಾಗುತ್ತಿದೆ. ಆದರೆ ಇದು ಪೂರ್ಣ ಸತ್ಯವಲ್ಲ.
ಹೌದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಗೆದ್ದಿದೆ. ಜೆಡಿಎಸ್ ಸ್ಪರ್ಧಿಸಿದ್ದ ಮಂಡ್ಯ, ರಾಮನಗರ ದಲ್ಲಿ ಗೆದ್ದಿದೆ, ಆದರೆ ಶಿವಮೊಗ್ಗದಲ್ಲಿ ಸೋತಿದೆ. ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದಕ್ಕೆ ಚುನಾವಣೆಯಲ್ಲಿ ಗೆದ್ದಿವೆ ಎಂಬ ವಾದ ಒಪ್ಪತಕ್ಕುದಲ್ಲ, ಅದಕ್ಕೆ ಸಾಕ್ಷಿ ಈ ಲೇಖನದಲ್ಲಿದೆ.
ಉಪಚುನಾವಣೆಯಲ್ಲಿ ಪ್ರತಿಷ್ಠೆಯ ಕಣ ಎನಿಸಿಕೊಂಡಿದ್ದ ಬಳ್ಳಾರಿಯ ಫಲಿತಾಂಶವನ್ನು ಮೊದಲಿಗೆ ವಿಶ್ಲೇಷಿಸುವುದಾದರೆ. ಅಲ್ಲಿ ಜೆಡಿಎಸ್‌ಗೆ ನೆಲೆಯೇ ಇರಲಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಲ್ಲಿ ಪಡೆದಿದ್ದು ಕೇವಲ 12000+ ಮತಗಳನ್ನಷ್ಟೆ. 11 ಲಕ್ಷಕ್ಕೂ ಹೆಚ್ಚು ಮತಗಳಿರುವ ಬಳ್ಳಾರಿಯಲ್ಲಿ 12000 ಅದಕ್ಕಿಂತ ಕೆಲವು ಸಾವಿರ ಹೆಚ್ಚಿಗೆ ಮತಗಳಿರುವ ಪಕ್ಷದ ಬೆಂಬಲ ಬಹು ನಗಣ್ಯ.

ಬಳ್ಳಾರಿಯಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ
ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಕಾಂಗ್ರೆಸ್ 15000 ಮತಗಳಿಗಿಂತಲೂ ಹೆಚ್ಚಿಗಿಲ್ಲದ ಜೆಡಿಎಸ್‌ನ ಬೆಂಬಲದಿಂದ ಗೆದ್ದಿದೆ ಎಂಬುದರಲ್ಲಿ ಸತ್ಯವಿಲ್ಲ. ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆದ್ದಿರುವುದಕ್ಕೆ ಕಾಂಗ್ರೆಸ್ ಮುಖಂಡರ ಸಂಘಟಿತ ಪ್ರಯತ್ನ ಮತ್ತು ಸತತ 12 ವರ್ಷಗಳ ಕಾಲ ಬಿಜೆಪಿ ಆಡಳಿತ ನೋಡಿದ್ದ ಜನರಿಗೆ ಬೇಕಾಗಿದ್ದ ಬದಲಾವಣೆ.

ಜಮಖಂಡಿಯಲ್ಲಿ ಆರನೇ ಸ್ಥಾನ ಗಳಿಸಿತ್ತು ಜೆಡಿಎಸ್
ಕಾಂಗ್ರೆಸ್ ಗೆದ್ದಿರುವ ಮತ್ತೊಂದು ಕ್ಷೇತ್ರ ಜಮಖಂಡಿ. ಈ ಕ್ಷೇತ್ರದಲ್ಲಿ ಅಂತೂ ಜೆಡಿಎಸ್ ಅಸ್ಥಿತ್ವವೇ ಇಲ್ಲ ಎನ್ನುವಷ್ಟು ನಿಷ್ಕ್ರಿಯವಾಗಿದೆ. ಕೇವಲ ಐದು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂದಿದ್ದು ಆರನೇ ಸ್ಥಾನ, ಬಂದಿದ್ದ ಮತಗಳ ಸಂಖ್ಯೆ 849 ಅಷ್ಟೆ. ಹಾಗಿದ್ದ ಮೇಲೆ ಜೆಡಿಎಸ್ ಬೆಂಬಲದಿಂದ ಕಾಂಗ್ರೆಸ್ ಗೆದ್ದಿತು ಎಂಬ ವಾದದಲ್ಲಿ ಹುರುಳೇ ಇಲ್ಲದಾಗುತ್ತದೆ. ಇಲ್ಲಿಯೂ ಕಾಂಗ್ರೆಸ್ ತನ್ನ ಸ್ವಂತ ಬಲದಿಂದೇ ಗೆದ್ದಿದೆ ವಿನಃ ಜೆಡಿಎಸ್ ಬೆಂಬಲದಿಂದಲ್ಲ.

ರಾಮನಗರದಲ್ಲಿ ಬಿಜೆಪಿಗೆ ಅವಕಾಶ ಇರಲಿಲ್ಲ
ರಾಮನಗರದಲ್ಲಿ ಬಿಜೆಪಿಗೆ ಅವಕಾಶ ಇರಲಲ್ಲಿ ಎಂಬುದು ಹಳೆಯ ಚುನಾವಣೆಗಳ ಫಲಿತಾಂಶ ನೋಡಿದರೆ ಸ್ಪಷ್ಟವಾಗುತ್ತದೆ. ಮೈತ್ರಿ ಧರ್ಮ ನಿಭಾಯಿಸುವುದಕ್ಕಾಗಿ ಅಷ್ಟೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲವೇ ಹೊರತು ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೂ ಅಲ್ಲಿ ಗೆಲುವು ಸಾಧಿಸುತ್ತಿತ್ತು ಎಂಬುದು ಅಲ್ಲಿನ ಸ್ಥಳೀಯರ ಮಾತು. ಕೇವಲ ಐದು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಅಲ್ಲಿ ಬಿಜೆಪಿಗೆ ಬಂದಿದ್ದ ಮತಗಳ ಸಂಖ್ಯೆ 4871. ಆದರೆ ಈ ಬಾರಿ ಮತಗಳ ಸಂಖ್ಯೆ ಹೆಚ್ಚಿಸಿಕೊಂಡು 15000 ತಲುಪಿದೆ. ಅಭ್ಯರ್ಥಿ ಇದ್ದಿದ್ದರೆ ಈ ಸಂಖ್ಯೆ ಇದರ ಎರಡರಷ್ಟಾಗಬಹುದಿತ್ತೇನೋ ಆದರೆ ಆಗಲೂ ಬಿಜೆಪಿ ಸೋಲುತ್ತಿತ್ತು.

ಮಂಡ್ಯದ ಗೆಲುವು ಮೈತ್ರಿಯ ಎನ್ನಬಹುದು
ಮಂಡ್ಯದಲ್ಲಿ ಬಿಜೆಪಿಯ ನೆಲೆ ಈ ಮುಂಚೆ ಅಷ್ಟು ಗಟ್ಟಿ ಇರಲಿಲ್ಲ ಆದರೆ ಈ ಉಪಚುನಾವಣೆಯಲ್ಲಿ ಅದು ಭಾರಿ ಪ್ರಗತಿ ತೋರಿಸಿದೆ. ಭವಿಷ್ಯದಲ್ಲಿ ಮಂಡ್ಯವನ್ನು ತೆಕ್ಕೆಗೆ ತೆಗೆದುಕೊಳ್ಳುವ ಲಕ್ಷಣವನ್ನು ಅದು ತೋರಿಸಿದೆ. ಮಂಡ್ಯದಲ್ಲಿ ಜೆಡಿಎಸ್‌ನ ಅಭ್ಯರ್ಥಿ ಶಿವರಾಮೇಗೌಡ ಗೆದ್ದಿದಾರಾದರೂ ಇಲ್ಲಿಯದ್ದು ಮೈತ್ರಿಯ ಗೆಲುವು ಎಂದು ಹೇಳಲೇ ಬೇಕು. ಬಿಜೆಪಿ ಸಂಪಾದಿಸುವ ಮತಗಳನ್ನು ಗಮನಿಸಿದರೆ ಜೆಡಿಎಸ್ ಸ್ವಂತ ಬಲದ ಮೇಲೆ ಸ್ಪರ್ಧಿಸಿದ್ದರೆ ಸೋಲಾಗುವ ಸಂಭವ ಇತ್ತು ಎಂಬ ಅನುಮಾನ ದಟ್ಟವಾಗುತ್ತದೆ. ಇಲ್ಲಿ ಬಿಜೆಪಿಗೆ ಹೆಚ್ಚು ಮತ ದೊರಕಲು ಜೆಡಿಎಸ್ ಅಭ್ಯರ್ಥಿ ಬಗ್ಗೆ ಜನರಲ್ಲಿ ಇದ್ದ ಅಸಮಾಧಾನವೂ ಕಾರಣ ಆಗಿರುವ ಸಾಧ್ಯತೆ ಇದೆ.

ಶಿವಮೊಗ್ಗದಲ್ಲಿ ಮೈತ್ರಿಯ ಹೋರಾಟ
ಶಿವಮೊಗ್ಗದಲ್ಲಿ ಬಿಜೆಪಿಯ ರಾಘವೇಂದ್ರ ಗೆದ್ದಿದ್ದಾರೆ. ಅವರಿಗೆ ಸುಲಭ ಗೆಲುವು ಆಗಬಹುದಾಗಿದ್ದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಭಾರಿ ಪೈಪೋಟಿ ನೀಡಿದ್ದಾರೆ ಇದಕ್ಕೆ ಕಾರಣ ಮೈತ್ರಿಯೇ. ಜೆಡಿಎಸ್ ಏಕಾಂಗಿಯಾಗಿ ಇಲ್ಲಿ ಸ್ಪರ್ಧಿಸಿದ್ದಿದ್ದರೆ ಅಥವಾ ಕಾಂಗ್ರೆಸ್ ಏಕಾಂಗಿಯಾಗಿದ್ದರೆ ಈ ಮಟ್ಟಿನ ಸ್ಪರ್ಧೆಯನ್ನು ಒಡ್ಡುವುದೂ ಕಷ್ಟವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಬಿಜೆಪಿ ಕೋಟೆಯಲ್ಲಿ ನಡುಕ ಹುಟ್ಟಿಸಲಂತೂ ಮೈತ್ರಿ ಇಲ್ಲಿ ಯಶಸ್ವಿಯಾಗಿದೆ. ಇದು ಬಿಜೆಪಿಗೆ ಎಚ್ಚರಿಕೆ ಗಂಟೆ.
-
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications