ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಮಾಧ್ಯಮ ಸಂವಾದ
ಬೆಂಗಳೂರು, ಫೆ.11- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ರಿಯವಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಇಬ್ಬರು ನಾಯಕರೆಂದರೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ.
ರಾಹುಲ್ ಗಾಂಧಿ ಅವರು ಇದೇ ಫೆಬ್ರವರಿ 15 ಮತ್ತು 16 ರಂದು ರಾಜ್ಯದಲ್ಲಿ ಮೂರು ಕಡೆಗಳಿಗೆ ಭೇಟಿ ನೀಡಿ, ಪ್ರಚಾರ ಸಭೆ ನಡೆಸಲಿದ್ದಾರೆ. ಅದೇ ರೀತಿ ಮೋದಿ ಅವರು ಫೆ. 18 ಮತ್ತು 28 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಅವರು ಮೋದಿ ಚಾಯ್ ಪೆ ಚರ್ಚಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.
ಫೆ.15 ರಂದು ಬೆಳಗಾವಿ ಮತ್ತು ಮೈಸೂರಿನ ರೋಡ್ ಶೋ ಮತ್ತು ಫೆ.16 ರಂದು ತುಮಕೂರಿನಲ್ಲಿ ರಾಹುಲ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ ಪಕ್ಷದ ಮೂಲಗಳು ತಿಳಿಸಿವೆ.
ಸಂಪಾದಕರ ಜತೆ ರಾಹುಲ್ ಸಂವಾದ: ( ರಾಹುಲ್ ಸಂದರ್ಶಿಸಿದ ಅರ್ನಬ್ ಗೋಸ್ವಾಮಿ ಯಾರು )

ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಅವರಿಗೆ ಹೆಚ್ಚು ಮಾಧ್ಯಮ ಪ್ರಚಾರ ಗಿಟ್ಟಿಸಲು AICC media wing ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ನಿರ್ಧರಿಸಿದೆ. ಹಾಗಾಗಿ ರಾಹುಲ್ ಗಾಂಧಿ ಅವರು ಕರ್ನಾಟಕದ ಆಯ್ದ ಸಂಪಾದಕರ ಜತೆ ಫೆ. 15ರಂದು ಸಂವಾದ ನಡೆಸಲಿದ್ದಾರೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಕೆಲ ಸಂಪಾದಕರ ಜತೆ ರಾಹುಲ್ ಮಾತುಕತೆ ನಡೆಸಲಿದ್ದಾರೆ.
ಇತ್ತೀಚೆಗೆ 'ಟೈಮ್ಸ್ ನೌ' ಸಂಪಾದಕ ಆರ್ನಬ್ ಗೋಸ್ವಾಮಿಗೆ ಸಂದರ್ಶನ ನೀಡಿದ ನಂತರ ರಾಹುಲ್ ಗಾಂಧಿ ಅವರು ಸಂಪಾದಕರ ಜತೆ ಸಾಮೂಹಿಕ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಈ ನಿಟ್ಟಿನಲ್ಲಿ KPCC ಕಾರ್ಯೋನ್ಮುಖವಾಗಿದ್ದು, ಸಂಪಾದಕರುಗಳ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಫೆ. 14ರರಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಅದಾದ ಮಾರನೆಯ ದಿನ ಶನಿವಾರ 'ಸಂಪಾದಕರ ಜತೆ ರಾಹುಲ್ ಸಂವಾದ' ಕಾರ್ಯಕ್ರಮ ಸುಮಾರು 2 ಗಂಟೆ ಕಾಲ ನಿಗದಿಯಾಗಿದೆ.












Click it and Unblock the Notifications