ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲ್ಲಾಪುರ: ಅತಿಥಿ ಉಪನ್ಯಾಕರ ನೇಮಕದಲ್ಲಿ ಗೊಂದಲ, ಉಪನ್ಯಾಸಕಿಯ ದಿಢೀರ್ ಪ್ರತಿಭಟನೆ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್ 27: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಉಪನ್ಯಾಸಕಿ ಜ್ಯೋತಿ ರಾಯ್ಕರ್ ಎಂಬುವವರು ಕಾಲೇಜಿನ ಮುಂದೆಯೇ ಒಬ್ಬರೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರು ಪ್ರತಿಭಟನೆ ನಡೆಸಿದ್ದಾರೆ.

ಕಳೆದ 7 ವರ್ಷಗಳಿಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿರುವ ಜ್ಯೋತಿ, ಎಂ.ಎ., ಪಿ.ಎಚ್.ಡಿ ಮಾಡಿದ್ದಾರೆ. ಈ ಬಾರಿ ಅತಿಥಿ ಉಪನ್ಯಾಸಕಿ ಹುದ್ದೆಗೆ ಅರ್ಜಿ ಸಲ್ಲಿಸಿದವರ ಜ್ಯೇಷ್ಠತಾ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲೇ ಇವರ ಹೆಸರಿದ್ದರೂ ಕೂಡ ಕಡೆಗಣಿಸಿ ಮತ್ತೊಬ್ಬರನ್ನು ನೇಮಿಸಿಕೊಳ್ಳಲಾಗಿದೆ ಎಂದು ಜ್ಯೋತಿ ಆರೋಪಿಸಿದ್ದಾರೆ.

Confusion in the appointment of Guest Lectures, instant protest by the lecturer at Yallapur

"ಸಮಾಜಶಾಸ್ತ್ರ ವಿಷಯಕ್ಕೆ ಈಗ ನೇಮಕವಾಗಿರುವ ಅತಿಥಿ ಉಪನ್ಯಾಸಕಿ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎಡ್ ವ್ಯಾಸಂಗ ಮಾಡುತ್ತಿದ್ದರೂ ಕೂಡ ಅವರನ್ನು ಉಪನ್ಯಾಸಕಿಯಾಗಿ ನೇಮಿಸಿಕೊಂಡಿರುವುದೇಕೆ? ಜ್ಯೇಷ್ಠತಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಅನಗತ್ಯ ಕಾರಣಗಳನ್ನು ಹೇಳಿ ನನ್ನನ್ನು ಕಡೆಗಣಿಸಲಾಗಿದೆ. ಪ್ರಾಂಶುಪಾಲರು ವೈಯಕ್ತಿಕ ದ್ವೇಷ ಸಾಧನೆಗೆ ಮುಂದಾಗಿದ್ದಾರೆ," ಎಂದು ಜ್ಯೋತಿ ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲೆ ಡಾ.ದಾಕ್ಷಾಯಿಣಿ ಹೆಗಡೆ, "ಪಿ.ಎಚ್.ಡಿ ಆಗಿರುವುದರಿಂದ ಜ್ಯೋತಿ ಅವರ ಹೆಸರು ಪಟ್ಟಿಯಲ್ಲಿ ಪ್ರಥಮ ಸ್ಥಾನ ಬಂದಿರುವುದು ಹೌದು. ಆದರೆ ಪಿ.ಎಚ್.ಡಿ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಅವರು ಪೂರೈಸಿರುವ ದಾಖಲೆಗಳು ನಿಯಮಾನುಸಾರವಾಗಿ ಇರದ ಕಾರಣ ಅವರನ್ನು ಬಿಟ್ಟು, ದೀಪಿಕಾ ನಾಯ್ಕ ಎಂಬುವವರನ್ನು ಅತಿಥಿ ಉಪನ್ಯಾಸಕಿಯಾಗಿ ನೇಮಿಸಿಕೊಳ್ಳಲಾಗಿದೆ," ಎಂದು ಸ್ಪಷ್ಟನೆ ನೀಡಿದ್ದಾರೆ.

ಜ್ಯೇಷ್ಠತಾ ಪಟ್ಟಿಯಲ್ಲಿ ಹೆಸರಿದ್ದರೂ ಅವರ ದಾಖಲೆಗಳನ್ನು ಪರಿಶೀಲಿಸಿ, ಸಮರ್ಪಕವಾಗಿದ್ದರೆ ಮಾತ್ರ ನೇಮಿಸಿಕೊಳ್ಳುವಂತೆ ಇಲಾಖೆಯ ಆದೇಶವಿದೆ. ಅದರಂತೆ ನಿಯಮಾನುಸಾರ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ, ದ್ವೇಷಕ್ಕೆ ಅವಕಾಶವಿಲ್ಲ. ಅದನ್ನು ನಾನು ಮಾಡಿಯೂ ಇಲ್ಲ ಎಂದು ಪ್ರಾಂಶುಪಾಲೆ ಸಮಜಾಯಿಷಿ ನೀಡಿದ್ದಾರೆ.

"ದೀಪಿಕಾ ನಾಯ್ಕ ಅವರು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದುಕೊಂಡೇ ಬಿ.ಎಡ್ ಓದುತ್ತಿರುವ ವಿಷಯ ತಿಳಿದಿರಲಿಲ್ಲ. ಅತಿಥಿ ಉಪನ್ಯಾಸಕರು ಎರಡು ಸರ್ಕಾರಿ ಸಂಸ್ಥೆಗಳಿಂದ ಏಕಕಾಲದಲ್ಲಿ ಸಂಬಳ ಪಡೆಯಬಾರದು. ಕಾಲೇಜಿನಲ್ಲಿ ವಾರಕ್ಕೆ 8 ತಾಸು ಪಾಠ ಮಾಡಬೇಕೆಂಬ ನಿಯಮವಿದೆ. ಉಳಿದ ಸಮಯದಲ್ಲಿ ಅವರು ವ್ಯಾಸಂಗ ಮಾಡಬಾರದೆಂದೇನೂ ಇಲ್ಲ," ಎಂದು ಪ್ರಾಂಶುಪಾಲೆ ವಿವರ ನೀಡಿದ್ದಾರೆ

ಹೀಗಿದ್ದೂ ವಿಷಯ ತಿಳಿದ ತಕ್ಷಣ ದೀಪಿಕಾ ಅವರಿಗೆ ಮೆಮೊ ನೀಡಲಾಗಿದ್ದು, ಈ ಕಾಲೇಜಿನಲ್ಲಿ ಪಾಠ ಮಾಡುವ ಮೂರು ದಿನಗಳಲ್ಲಿ ವ್ಯಾಸಂಗಕ್ಕೆ ತೆರಳುತ್ತಿಲ್ಲ. ಉಳಿದ ಸಮಯವನ್ನು ಮಾತ್ರ ವ್ಯಾಸಂಗಕ್ಕೆ ಮೀಸಲಿಟ್ಟಿರುವುದಾಗಿ ಉತ್ತರಿಸಿದ್ದಾರೆ ಎಂದು ದಾಕ್ಷಾಯಿಣಿ ಮಾಹಿತಿ ನೀಡಿದ್ದಾರೆ.

ಈಗಲೂ ಜ್ಯೋತಿ ಅವರು ನೀಡಿದ ದಾಖಲಾತಿಗಳನ್ನು ಪರಿಶೀಲಿಸಿ, ಮೇಲಾಧಿಕಾರಿಗಳು ಅವು ಸಮರ್ಪಕವಾಗಿದೆ ಎಂದರೆ ಅವರನ್ನು ನೇಮಿಸಿಕೊಳ್ಳುವಲ್ಲಿ ಯಾವ ಅಭ್ಯಂತರವೂ ಇಲ್ಲ. ನೇಮಕಾತಿಯಲ್ಲಿ ಯಾವುದೇ ಅನ್ಯಾಯ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ದಾಕ್ಷಾಯಿಣಿ ತಿಳಿಸಿದ್ದಾರೆ.

English summary
Karnataka1) Meta Description: KSRTC on Wednesday launched 6 multi Axel Volvo Buses with toilets and in-house pantry services. The buses with chemical toilets are called Airawat Superia, and those with toilets and pantry are named Airawat Bliss. 2) Meta Title: KSRTC launches Airawat buses with toilets and in-house pantry services3) meta keywords: KSRTC Airawat bus, Airwat bus, Airawat buses with toilets, Airawat buses with pantry, Airawat Bliss, Airawat Superia, ಕೆಎಎಸ್ಆರ್ಟಿಸಿ ಐರಾವತ ಬಸ್, ಐರಾವತ ಬಸ್, ಬಸ್ಸಿನಲ್ಲೇ ಶೌಚಾಲಯ, ಬಸ್ಸಿನಲ್ಲೇ ಆಹಾರ ಪೂರೈಕೆ4) tags: ksrtc, bus, toilet, food, karnataka, ಕೆಎಸ್ಆರ್ ಟಿಸಿ, ಬಸ್, ಶೌಚಾಲಯ, ಆಹಾರ, ಕರ್ನಾಟಕಐಶಾರಾಮಿ 6 ಐರಾವತ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ರಸ್ತೆಗಿಳಿಸಿದೆ. ಈವರೆಗೆ ಬಂದಿರುವ ಎಲ್ಲಾ ಬಸ್ಸುಗಳಿಗಿಂತ ಈ ಬಸ್ಸುಗಳು ದುಬಾರಿಯಾಗಿದ್ದು, ಐಶಾರಾಮಿ ಸೌಲಭ್ಯಗಳನ್ನು ಪ್ರಯಾಣಿಕರಿಗೆ ನೀಡಲಿವೆ.ಇವು ಮಲ್ಟಿ ಆಕ್ಸೆಲ್ ವೋಲ್ವೋ ಬಸ್ಸುಗಳಾಗಿದ್ದು, ಬಸ್ಸಿನಲ್ಲೇ ಶೌಚಾಲಯ ಮತ್ತು ಆಹಾರ ಸರಬರಾಜು ವ್ಯವಸ್ಥೆಯನ್ನು ಒಳಗೊಂಡಿದೆ.ಬಸ್ಸಿನಲ್ಲೇ ಆಹಾರ, ಟಾಯ್ಲೆಟ್; ರಸ್ತೆಗಿಳಿದ ಐಶಾರಾಮಿ 'ಐರಾವತ' ಬೆಂಗಳೂರು, ಸೆಪ್ಟೆಂಬರ್ 27: ಐಶಾರಾಮಿ 6 ಐರಾವತ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ರಸ್ತೆಗಿಳಿಸಿದೆ. ಈವರೆಗೆ ಬಂದಿರುವ ಎಲ್ಲಾ ಬಸ್ಸುಗಳಿಗಿಂತ ಈ ಬಸ್ಸುಗಳು ದುಬಾರಿಯಾಗಿದ್ದು, ಐಶಾರಾಮಿ ಸೌಲಭ್ಯಗಳನ್ನು ಪ್ರಯಾಣಿಕರಿಗೆ ನೀಡಲಿವೆ.ಇವು ಮಲ್ಟಿ ಆಕ್ಸೆಲ್ ವೋಲ್ವೋ ಬಸ್ಸುಗಳಾಗಿದ್ದು, ಬಸ್ಸಿನಲ್ಲೇ ಶೌಚಾಲಯ ಮತ್ತು ಆಹಾರ ಸರಬರಾಜು ವ್ಯವಸ್ಥೆಯನ್ನು ಒಳಗೊಂಡಿದೆ.ಬಸ್ಸಿನಲ್ಲಿ ಕೆಮಿಕಲ್ ಟಾಯ್ಲೆಟ್ ಗಳು ಇರಲಿವೆ. ಕೇವಲ ರಾಸಾಯನಿಕ ಶೌಚಾಲಯಗಳಿರುವ ಬಸ್ಸುಗಳಿಗೆ ಐರಾವತ ಸುಪೇರಿಯಾ ಎಂದು ಹೆಸರಿಡಲಾಗಿದೆ. ಟಾಯ್ಲೆಟ್ ಜತೆಗೆ ಆಹಾರ ಸರಬರಾಜು ವ್ಯವಸ್ಥೆ ಇರುವ ಬಸ್ಸುಗಳಿಗೆ ಐರಾವತ ಬ್ಲಿಸ್ ಎಂದು ಹೆಸರಿಡಲಾಗಿದೆ.ವಿಮಾನ ಮತ್ತು ಐಶಾರಾಮಿ ರೈಲುಗಳಲ್ಲಿರುವಂತೆ ಸೀಟಿನ ಹಿಂಬಾಗ ಎಲ್ಇಡಿ ಪರದೆ ಇರಲಿದೆ. ಇದರಲ್ಲಿ ತಮ್ಮಿಷ್ಟದ ಮನರಂಜನೆಯನ್ನು ಪ್ರಯಾಣಿಕರು ಪಡೆಯಬಹುದಾಗಿದೆ. ಇನ್ನು ವೈಫೈ ಸೌಲಭ್ಯವೂ ಬಸ್ ನಲ್ಲಿ ಇದೆ.Lecturer Jyothi Raikar has been sitting alone in front of the college as the appointment of guest lecturers is unfair. She protested at the Government First Grade College in Yallapur taluk in Uttara Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X