Get Updates
Get notified of breaking news, exclusive insights, and must-see stories!

Government Employee: ಸರ್ಕಾರಿ ನೌಕರರ ಆತಂಕ ದೂರ ಮಾಡಿದ ಲೋಕಾಯುಕ್ತರು

ಬೆಂಗಳೂರು, ನವೆಂಬರ್ 22: ಕರ್ನಾಟಕ ಲೋಕಾಯುಕ್ತದಲ್ಲಿ ಸರ್ಕಾರಿ ನೌಕರರ ವಿರುದ್ಧ ಹಲವು ದೂರುಗಳು ದಾಖಲಾಗುತ್ತಿರುತ್ತವೆ. ಇವುಗಳಲ್ಲಿ ಕೆಲವು ದೂರುಗಳು ಸುಳ್ಳು ಸಹ ಆಗಿರುತ್ತವೆ. ಇದರಿಂದಾಗಿ ಸರ್ಕಾರಿ ನೌಕರರ ಕೆಲಸಕ್ಕೆ ಸಹ ತೊಂದರೆಯಾಗುತ್ತದೆ. ಲೋಕಾಯುಕ್ತ ಈ ಕುರಿತು ಸರ್ಕಾರಿ ನೌಕರರಿಗೆ ಮಾಹಿತಿ ನೀಡಿದೆ. ದೂರುಗಳು, ತನಿಖೆ, ಸರ್ಕಾರಿ ನೌಕರರು ಸುಳ್ಳು ದೂರು ಕುರಿತು ಹೇಗೆ ಮರು ದೂರು ನೀಡಬಹುದು? ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ವಿವರಣೆಯನ್ನು ನೀಡಿದ್ದಾರೆ.

" ಸರ್ಕಾರಿ ನೌಕರರು ತಮ್ಮ ಹುದ್ದೆಗೆ ಅನ್ವಯಿಸುವ ಕಾರ್ಯಗಳನ್ನು ನಿಯಮಾನುಸಾರ ಮಾಡಿದರೆ ದೂರುಗಳ ಪ್ರಶ್ನೆ ಬರುವದಿಲ್ಲ. ಲೋಕಾಯುಕ್ತದ ಬಗ್ಗೆ ಅನಗತ್ಯ ಭಯ, ಆತಂಕ ಪಡದೆ ಕಾನೂನಾತ್ಮಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿ, ವೃತ್ತಿ ನಿಷ್ಠುರತೆ ತೋರಬೇಕು. ಲೋಕಾಯುಕ್ತದ ಕಾಯ್ದೆ, ಕಾರ್ಯಗಳ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದೆ" ಎಂದು ಕೆ. ಎನ್. ಫಣೀಂದ್ರ ಹೇಳಿದರು.

Complaint Against Karnataka Government Employees Upalokayukta Statement

ಧಾರವಾಡದಲ್ಲಿ ನಡೆದ ಲೋಕಾಯುಕ್ತ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ಕರ್ನಾಟಕ ಲೋಕಾಯುಕ್ತ ಕಾಯ್ದೆ ಬಗ್ಗೆ ಸರ್ಕಾರಿ ನೌಕರರಿಗೆ ಭಯ, ಆತಂಕ ಬೇಡ. ಲೋಕಾಯುಕ್ತ ಕಾನೂನು ಬಗ್ಗೆ ಸರಿಯಾದ ಅರಿವು, ತಿಳುವಳಿಕೆ ಇರುವುದು ಬಹು ಮುಖ್ಯ" ಎಂದು ತಿಳಿಸಿದರು.

"ಕರ್ನಾಟಕ ಲೋಕಾಯುಕ್ತವು ಸಾರ್ವಜನಿಕ ನೌಕರರ ಕರ್ತವ್ಯ, ದುರ್ನಡತೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಮತ್ತು ವರದಿ ಮಾಡಲು ಸ್ಥಾಪಿಸಲಾಗಿರುವ ಸಂಸ್ಥೆಯಾಗಿದೆ. ಸಾರ್ವಜನಿಕ ಆಡಳಿತದ ಗುಣಮಟ್ಟ ಸುಧಾರಿಸುವುದು, ಸಾರ್ವಜನಿಕ, ಸರ್ಕಾರಿ ನೌಕರರ ದುರ್ನಡತೆಯಿಂದ ಸಂಭವಿಸಿದ ಕುಂದುಕೊರತೆಗಳನ್ನು ನಿವಾರಣೆ ಮಾಡುವುದು, ತಪ್ಪಿತಸ್ಥರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984, ಭ್ರಷ್ಟಚಾರ ತಡೆ ಕಾಯ್ದೆ 1988, ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1958, ಕರ್ನಾಟಕ ನಾಗರೀಕ ಸೇವೆ (ನಡತೆ) ನಿಯಮಗಳು, 1966 ಹಾಗೂ ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ, ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವುದು ಈ ಸಂಸ್ಥೆಯ ಕಾರ್ಯ ವ್ಯಾಪ್ತಿಗೆ ಒಳಪಡುತ್ತದೆ" ಎಂದು ಕೆ. ಎನ್. ಫಣೀಂದ್ರ ಹೇಳಿದರು.

ಯಾರ ವಿರುದ್ಧ ದೂರು: ಯಾವುದೇ ವ್ಯಕ್ತಿ ಕರ್ನಾಟಕ ರಾಜ್ಯದ ಆಡಳಿತ ನಿರ್ವಹಣೆಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರ್ನಡತೆ, ಅಶಿಸ್ತು ಮತ್ತು ಕರ್ತವ್ಯ ಲೋಪ ನಡೆದಿದೆ ಎಂದು ಹೇಳುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಸಾರ್ವಜನಿಕ, ಸರ್ಕಾರಿ ನೌಕರರ ವಿರುದ್ಧ ಮಾತ್ರ ದೂರು ನೀಡಬಹುದಾಗಿದೆ. ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ರಂತೆ ಸಾರ್ವಜನಿಕ ನೌಕರರು ಮಾತ್ರ ಕ್ರಮವಾಗಿ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುತ್ತಾರೆ.

ಯಾವುದೇ ಸಾರ್ವಜನಿಕ, ಸರ್ಕಾರಿ ನೌಕರ ತನ್ನಿಂದಾಗಲೀ ಅಥವಾ ಇನ್ನೊಬ್ಬ ಸರ್ಕಾರಿ ನೌಕರನಿಂದಾಗಲೀ ಸಾರ್ವಜನಿಕ ಕರ್ತವ್ಯವನ್ನು ಮಾಡದೇ ಇರುವಂತೆ ಮಾಡಲು ಅಥವಾ ಮಾಡದಿರುವುದಕ್ಕೆ ಅಥವಾ ಆ ಕರ್ತವ್ಯವನ್ನು ಅನುಚಿತವಾಗಿ ಅಥವಾ ಅಪ್ರಾಮಾಣಿಕವಾಗಿ ನಿರ್ವಹಿಸಲು ಅಥವಾ ನಿರ್ವಹಿಸುವ ಉದ್ದೇಶದಿಂದ ಯಾವುದೇ ವ್ಯಕ್ತಿಯಿಂದ ಅನಗತ್ಯ ಪ್ರಯೋಜನ ಪಡೆಯುವುದು ಅಥವಾ ಸ್ವೀಕರಿಸುವುದು ಅಥವಾ ಪ್ರತಿಫಲವಾಗಿ ಅನಗತ್ಯ ಪ್ರಯೋಜನ ಪಡೆಯುವುದು ಅಥವಾ ಸ್ವೀಕರಿಸುವುದು ಅಥವಾ ಅದಕ್ಕಾಗಿ ಪ್ರಯತ್ನಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ರೀತಿಯಾಗಿ ವರ್ತಿಸಲು ಇನ್ನೊಬ್ಬ ಸಾರ್ವಜನಿಕ ನೌಕರನನ್ನು ಪ್ರೇರೇಪಿಸುವುದು ಸಹ ಶಿಕ್ಷಾರ್ಹ ಅಪರಾಧ.

ಯಾವುದೇ ವ್ಯಕ್ತಿ, ಸಾರ್ವಜನಿಕ, ಸರ್ಕಾರಿ ನೌಕರ ತನ್ನ ಕರ್ತವ್ಯ ಮಾಡದೇ ಇರಲು ಅಥವಾ ಅನುಚಿತವಾಗಿ ಅಥವಾ ಅಪ್ರಮಾಣಿಕವಾಗಿ ಮಾಡಲು ಭ್ರಷ್ಟ ಅಥವಾ ಕಾನೂನು ಬಾಹಿರ ವಿಧಾನಗಳಿಂದ ಅಥವಾ ತನ್ನ ವೈಯಕ್ತಿಕ ಪ್ರಭಾವವನ್ನು ಚಲಾಯಿಸಿ ಆ ಸಾರ್ವಜನಿಕ ನೌಕರನನ್ನು ಪ್ರೇರೆಪಿಸುವುದು ಮತ್ತು ಯಾವುದೇ ವ್ಯಕ್ತಿಗೆ ಅನಗತ್ಯ ಪ್ರಯೋಜನ ನೀಡಲು ಅಥವಾ ತನಗಾಗಿಯೇ ಬೇರೊಬ್ಬ ವ್ಯಕ್ತಿಯಿಂದ ಇನಾಮು ಪಡೆದರೆ, ಪಡೆಯುವುದಕ್ಕೆ ಪ್ರಯತ್ನಿಸಿದರೆ ಅಥವಾ ಸ್ವೀಕರಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಭ್ರಷ್ಟಾಚಾರ ತಡೆ ಅಧಿನಿಯಮದಡಿಯಲ್ಲಿ ಶಿಕ್ಷಾರ್ಹವಾದ ಅಪರಾಧಗಳಿಗೆ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದಾಗ ನ್ಯಾಯಾಲಯವು ವಿಚಾರಣೆ ನಡೆಸಿ ಸಂಬಂಧಪಟ್ಟ ಸರ್ಕಾರಿ ನೌಕರ ತಪ್ಪಿತಸ್ಥ ಎಂದು ಕಂಡುಬಂದಲ್ಲಿ, ಆತನಿಗೆ ಸೂಕ್ತ ಶಿಕ್ಷೆ ಮತ್ತು ದಂಡನೆಯನ್ನು ವಿಧಿಸುತ್ತದೆ. ಅಲ್ಲದೇ ಶಿಕ್ಷೆಗೆ ಒಳಪಟ್ಟ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಬೇಕಾಗುತ್ತದೆ. ಇದಲ್ಲದೇ ಇಲಾಖಾ ವಿಚಾರಣೆಗೆ ಸಂಬಂಧಿಸಿದಂತೆ ಸಾರ್ವಜನಿಕ, ಸರ್ಕಾರಿ ನೌಕರನ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಸರ್ಕಾರದ ವಹಿಸುವಿಕೆಯ ಮೇರೆಗೆ ತನಿಖೆಯನ್ನು ನಡೆಸಿ ಆತನ ವಿರುದ್ಧ ಇಲಾಖಾ ವಿಚಾರಣೆ ಅವಶ್ಯಕತೆ ಕಂಡು ಬಂದರೆ ಅದರ ಬಗ್ಗೆ ಮತ್ತು ಇಲಖಾ ವಿಚಾರಣೆಯ ನಂತರ ಸೂಕ್ತ ಶಿಫಾರಸನ್ನು ಸರ್ಕಾರಕ್ಕೆ ಲೋಕಾಯುಕ್ತದಿಂದ ಮಾಡಲಾಗುತ್ತದೆ.

ಸರ್ಕಾರಿ ನೌಕರ ತನಗೆ ಸುಳ್ಳು ದೂರುಗಳಿಂದ ತೊಂದರೆ ಆದಾಗ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಬಹುದು. ಯಾರೇ ಆಗಲಿ ಲೋಕಾಯುಕ್ತಕ್ಕೆ ದೂರುಗಳನ್ನು kla.kar(at)nic(dot)in ಇ-ಮೇಲ್ ಮೂಲಕವು ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿಯನ್ನು ಅಂತರ್ಜಾಲ https://lokayukta.kar.nic.inಮತ್ತು ದೂರವಾಣಿ 080-22258767, 080-22250278 ಪಡೆಯಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+