Breaking; ಸಿದ್ದರಾಮಯ್ಯಗೆ ಸವಾಲು ಹಾಕಿ ಟ್ವೀಟ್ ಮಾಡಿದ ಬಿಜೆಪಿ!
ಬೆಂಗಳೂರು, ಜನವರಿ 01; ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕರ್ನಾಟಕ ಬಿಜೆಪಿ ಟ್ವೀಟ್ ವಾರ್ ಮುಂದುವರೆಸಿದೆ. ಭಾನುವಾರ ಟ್ವೀಟ್ ಮೂಲಕ ಸವಾಲು ಹಾಕಿದೆ.
#CommunalCongress ಎಂ ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಂಡು ಸರಣಿ ಟ್ವೀಟ್ ಮಾಡಲಾಗಿದೆ. ಟ್ವೀಟ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
'ಪಿಎಫ್ಐ ನಿಷೇಧಿಸಿದ ಬಳಿಕ ಎಸ್‌ಡಿಪಿಐ ಜತೆಗೆ ಒಪ್ಪಂದ ಮಾಡಿಕೊಂಡಿರುವ ಸಿದ್ದರಾಮಯ್ಯ ಅವರೇ, ಆ ಒಪ್ಪಂದ ಏನು ಎಂಬುದನ್ನು ಬಹಿರಂಗಪಡಿಸಿ. ಸಿದ್ಧಾಂತವೇ ಇಲ್ಲದೆ ಯಾರ ಜತೆಗೆ ಬೇಕಾದರೂ ಒಪ್ಪಂದಗಳನ್ನು ಮಾಡಿಕೊಳ್ಳುವ ನೀವು, ತಮ್ಮಂತೆ ಪರರನ್ನು ಬಗೆದರೆ ಹೇಗೆ?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

'ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಶಾರಿಕ್ ಪರ ಬಹಿರಂಗವಾಗಿ ನಿಲ್ಲುವ ಅಧ್ಯಕ್ಷರಿರುವ ಪಕ್ಷದಲ್ಲಿ ತಾವಿದ್ದೀರಿ. ನಿಮಗೆ ಬೇಕಾದಷ್ಟು ಕಾಲ ಪಿಎಫ್‌ಐಯನ್ನು ಬಳಸಿಕೊಂಡು ಈಗ ಅದರ ಮೇಲೆ ನಿಷೇಧ ಹೇರಿದ ನಂತರ, ಈಗ ನಿಮ್ಮ ಪಾಪಗಳನ್ನು ತೊಳೆದುಕೊಳ್ಳುವ ಯೋಜನೆಯಲ್ಲಿದ್ದೀರಾ ಸಿದ್ದರಾಮಯ್ಯ ಅವರೇ?' ಎಂದು ಬಿಜೆಪಿ ಕೇಳಿದೆ.
'ಮತೀಯ ಗಲಭೆಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರ ವಿರುದ್ಧ ದಾಖಲಾದ ಕೇಸುಗಳನ್ನು ವಾಪಸ್ ಪಡೆಯಲು ನೀವು ಅನುಸರಿಸಿದ ಮಾರ್ಗಗಳು ಏನು ಎಂಬುದು ದಾಖಲೆಗಳಲ್ಲಿವೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಸಿದ್ದರಾಮಯ್ಯ ಅವರೇ?' ಎಂದು ಬಿಜೆಪಿ ಟೀಕಿಸಿದೆ.
'ಆದರೆ, ನಿಮಗೆ ಬೇಕಾದಾಗ ಮುಸಲ್ಮಾನರ ತುಷ್ಟೀಕರಣಕ್ಕಿಳಿದು ನಿಮಗೆ ಅನುಕೂಲಕರ ಅಲ್ಲ ಎಂದು ಅನಿಸಿದಾಗ ಅವರನ್ನು ಮಧ್ಯದಲ್ಲಿ ಕೈ ಬಿಡುವುದು ಸರಿಯೇ? ಅಥವಾ ನೀವು ಪರ ಮಾತನಾಡಿ; ನಾನು ವಿರೋಧ ಮಾತನಾಡುತ್ತೇನೆ ಎಂದು ಡಿ. ಕೆ. ಶಿವಕುಮಾರ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದೀರಾ?' ಎಂದು ಬಿಜೆಪಿ ಕೇಳಿದೆ.
ಉಡುಪಿಯಲ್ಲಿ ಹಿಜಾಬ್ ಗಲಾಟೆ ನಡೆದಾಗ ನೀವಾಗಲಿ ನಿಮ್ಮಪಕ್ಷವಾಗಲಿ ಅದನ್ನು ವಿರೋಧಿಸಲಿಲ್ಲ, ಮಹಿಳೆಯರ ಹಕ್ಕುಗಳನ್ನು ದಮನ ಮಾಡುವ ಶಕ್ತಿಗಳ ಪರ ನೀವು ಮೌನ ವಹಿಸಿದ್ದೇಕೆ @siddaramaiah? ಇದೀಗ ಮುಸ್ಲಿಂ ರಾಷ್ಟ್ರಗಳ ಕಾಲೇಜ್‌ಗಳಲ್ಲೂ ಹಿಜಾಬ್‌ಗೆ ನಿಷೇಧವಿದೆ. ಅಲ್ಲಿನ ಮಾಧ್ಯಮಗಳಿಗೂ ನೀವು ಹೇಳಿಕೆ ಕೊಡುವಿರಾ?#CommunalCongress
— BJP Karnataka (@BJP4Karnataka) January 1, 2023
5/6
'ಉಡುಪಿಯಲ್ಲಿ ಹಿಜಾಬ್ ಗಲಾಟೆ ನಡೆದಾಗ ನೀವಾಗಲಿ ನಿಮ್ಮ ಪಕ್ಷವಾಗಲಿ ಅದನ್ನು ವಿರೋಧಿಸಲಿಲ್ಲ, ಮಹಿಳೆಯರ ಹಕ್ಕುಗಳನ್ನು ದಮನ ಮಾಡುವ ಶಕ್ತಿಗಳ ಪರ ನೀವು ಮೌನ ವಹಿಸಿದ್ದೇಕೆ ಸಿದ್ದರಾಮಯ್ಯ ಅವರೇ? ಇದೀಗ ಮುಸ್ಲಿಂ ರಾಷ್ಟ್ರಗಳ ಕಾಲೇಜ್‌ಗಳಲ್ಲೂ ಹಿಜಾಬ್‌ಗೆ ನಿಷೇಧವಿದೆ. ಅಲ್ಲಿನ ಮಾಧ್ಯಮಗಳಿಗೂ ನೀವು ಹೇಳಿಕೆ ಕೊಡುವಿರಾ?' ಎಂದು ಆಡಳಿತ ಪಕ್ಷ ಪ್ರಶ್ನೆ ಮಾಡಿದೆ.
'ಅದೇನೇ ಇರಲಿ ನಿಮ್ಮ ಪಕ್ಷದ ಹಾಗೂ ನಿಷೇಧಿತ ಪಿಎಫ್ಐ ನಡುವಿನ ಸಂಬಂಧ ಗುಟ್ಟಾಗೇನೂ ಉಳಿದಿರಲಿಲ್ಲ. ಅಧಿಕಾರಕ್ಕಾಗಿ ದೇಶದ ಹಲವು ಕಡೆ ಮೂಲಭೂತವಾದಿ ಇಸ್ಲಾಮಿಕ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಾರ್ಟಿಗೆ ಕರ್ನಾಟಕದಲ್ಲಿ ಎಸ್‌ಡಿಪಿಐ ಆಸರೆ ಎಂಬ ಸತ್ಯ ತಾವೇ ಈ ಮೂಲಕ ಒಪ್ಪಿಕೊಂಡಿರಲ್ಲವೆ?' ಎಂದು ಟ್ವೀಟ್ ಮಾಡಲಾಗಿದೆ.












Click it and Unblock the Notifications