ತೆಂಗು ಬೆಳೆಗಾರರಿಗೆ ಭರ್ಜರಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ... Coconut Crop
ತೆಂಗು ಕಲ್ಪವೃಕ್ಷ ಎಂಬ ಸ್ಥಾನಮಾನ ಪಡೆದಿದ್ದು, ತೆಂಗು ಬೆಳೆಯನ್ನು ಸ್ವರ್ಗಲೋಕದಿಂದ ಬಂದ ಕೊಡುಗೆ ಅಂತಾ ಹಿಂದೂಗಳು ಪೂಜಿಸುತ್ತಾರೆ. ಅದರಲ್ಲೂ ಕನ್ನಡ ನಾಡು ಕಲ್ಪವೃಕ್ಷದ ತವರು ಅನ್ನೋ ಬಿರುದು ಕೂಡ ಪಡೆದಿದೆ. ತೆಂಗಿನ ಬೆಳೆಯಲ್ಲಿ ಇಡೀ ಜಗತ್ತಿನಲ್ಲೇ ಕರ್ನಾಟಕ ಹೆಸರು & ಕೀರ್ತಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ತೆಂಗು ಅದರಲ್ಲೂ ಎಳನೀರು ಬೆಲೆ 70 ರೂಪಾಯಿ ದಾಟಿ ಹೋಗಿದ್ದು ರೈತರಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿತ್ತು. ಹೀಗಿದ್ದಾಗ ಕೊಬ್ಬರಿ ಬೆಲೆಯು ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿತ್ತು. ಇಂತಹ ಸಮಯದಲ್ಲೇ ದಿಢೀರ್ ಆಘಾತ ಎದುರಾಗಿತ್ತು...
ತೆಂಗಿನ ಬೆಳೆಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈಗ ಮತ್ತೆ ತೆಂಗು ಬೆಳೆಯುವ ರೈತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಅದರಲ್ಲೂ ಅಡಿಕೆ ಬೆಳೆ ಬಿಟ್ಟು ತೆಂಗು ಬೆಳೆಯಲು ರೈತರು ಕೂಡ ಮುಂದೆ ಬರುತ್ತಿದ್ದು, ಎಳನೀರು ಹಾಗೂ ತೆಂಗಿನ ಕಾಯಿ ಸೇರಿದಂತೆ ಕೊಬ್ಬರಿಗೆ ಅಷ್ಟೇ ಮಟ್ಟದ ಡಿಮ್ಯಾಂಡ್ ಜಗತ್ತಿನಾದ್ಯಂತ ಇದೆ. ಹೀಗೆ ಇದ್ದಾಗಲೇ ಒಂದು ವಿಚಿತ್ರ ರೋಗ ತೆಂಗು ರೈತರಿಗೆ ಭಯ ಮೂಡಿಸಿದೆ. ಇನ್ನೇನು ಭರ್ಜರಿ ಲಾಭ ಗ್ಯಾರಂಟಿ ಅನ್ನುವಾಗಲೇ ಕೈಗೆ ಬಂದಿರುವ ತುತ್ತು ಬಾಯಿಗೆ ಬರುತ್ತಿಲ್ಲ ಅನ್ನೋ ಬೇಸರದಲ್ಲಿ ರೈತರು ಇರುವಾಗಲೇ, ತೆಂಗು ಬೆಳೆಗಾರರಿಗೆ ಭರ್ಜರಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ...

1.94 ಕೋಟಿ ರೂಪಾಯಿ ಶೀಘ್ರದಲ್ಲೇ...
ಹೌದು, ತೆಂಗು ಬೆಳೆಗೆ ಭಾರಿ ಭರ್ಜರಿ ಡಿಮ್ಯಾಂಡ್ ಬಂದಿದ್ದು, ತೆಂಗು ಬೆಳೆದ ರೈತರಿಗೆ ಬಂಪರ್ ಬೆಲೆ ಈಗ ಸಿಗುತ್ತಿದೆ. ಆದ್ರೆ ಈ ಸಂತಸದ ಸಮಯದಲ್ಲೇ ತೆಂಗು ಬೆಳೆಗೆ ದೊಡ್ಡ ಸಮಸ್ಯೆ ಎದುರಾಗಿ ಆತಂಕ ಕೂಡ ಮನೆ ಮಾಡಿದೆ. ಯಾಕಂದ್ರೆ ಕಪ್ಪುತಲೆ ಹುಳು ಬಾಧೆ ತೆಂಗು ಬೆಳೆಗಾರರನ್ನು ಇನ್ನಿಲ್ಲದಂತೆ, ಪ್ರತಿಕ್ಷಣ ಕೂಡ ಕಾಡುತ್ತಲೇ ಇದೆ. ಹೀಗಾಗಿ ಕನ್ನಡ ನಾಡಿನಲ್ಲಿ ಈಗ ಬೆಳೆದಿರುವ ಲಕ್ಷಾಂತರ ಎಕರೆ ತೆಂಗು ಬೆಳೆ ನಾಶವಾಗಿ ಹೋಗುತ್ತದೆ ಎಂಬ ಭಯ ರೈತರಲ್ಲಿ ಮನೆ ಮಾಡಿತ್ತು. ಹೀಗಿದ್ದಾಗಲೇ, ರೈತರ ಸಂಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿದ್ದು, ಸಮೀಕ್ಷೆಗೆ ಅಗತ್ಯ ಇರುವ 1.94 ಕೋಟಿ ರೂಪಾಯಿ ಶೀಘ್ರದಲ್ಲೇ ರಿಲೀಸ್...
ಸಮೀಕ್ಷೆ ನಡೆಸಿದರೆ ಮಾತ್ರ ತೆಂಗು ಬೆಳೆ ರಕ್ಷಣೆ
ತೆಂಗು ಬೆಳೆಯನ್ನು ಕಾಡುತ್ತಿರುವ ಕಪ್ಪುತಲೆ ಹುಳು ಬಾಧೆ ಬಗ್ಗೆ ಮೊದಲೇ ಹೇಳಿದಂತೆ, ಈಗಾಗಲೇ ಲಕ್ಷಾಂತರ ಎಕರೆ ಬೆಳೆ ಸಂಕಷ್ಟದಲ್ಲಿ ಸಿಲುಕಿದೆ. ಹೀಗಿದ್ದಾಗ 2026ರ ಜನವರಿಯಿಂದ ಕಪ್ಪುತಲೆ ಹುಳು ಬಾಧೆಯ ಸಮೀಕ್ಷೆ ಪುನಾರಂಭಿಸಿ ಬೇಗ ಪೂರ್ಣಗೊಳಿಸಿ ಪರಿಹಾರ ಕಲ್ಪಿಸುವುದಾಗಿ ಸರ್ಕಾರ ಇದೀಗ ಭರವಸೆ ನೀಡಿದೆ. ಈ ಮೂಲಕ ಕರ್ನಾಟಕ ರಾಜ್ಯದ ತೆಂಗು ಬೆಳೆಗಾರರ ಬೆಂಬಲಕ್ಕೆ ನಿಂತು ಸಪೋರ್ಟ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಗಡಿನಾಡು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಬಗ್ಗೆ ಮಹತ್ವದ ಮಾಹಿತಿ ನೀಡಲಾಗಿದೆ. ಕಪ್ಪುತಲೆ ಹುಳು ಬಾಧೆ ಬಗ್ಗೆ ಸಮೀಕ್ಷೆ ಪೂರ್ಣಗೊಂಡರೆ ಭವಿಷ್ಯದಲ್ಲಿ ಇದಕ್ಕೆ ತಕ್ಕ ಪರಿಹಾರ ಹುಡುಕಲು ಸಾಧ್ಯ ಎಂಬ ನಿರೀಕ್ಷೆ ಇದೀಗ ರೈತರಲ್ಲಿ ಮೂಡಿದೆ.












Click it and Unblock the Notifications