ಸಿಎಂ ನೇತೃತ್ವದ ರಾಜ್ಯ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ

ಬೆಂಗಳೂರು, ಜೂನ್ 28: ಇಂದು ರಾಜ್ಯ ಸಂಪುಟ ಸಭೆ ನಡೆದಿದ್ದು, ವಿಧಾನಮಂಡಲ ಅಧಿವೇಶ ದಿನಾಂಕ ನಿಗದಿಯ ಜೊತೆಗೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಸಂಪುಟ ಸಭೆಯ ನಿರ್ಣಯಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು, ವಿಧಾನಮಂಡಲ ಅಧಿವೇಶನವು ಜುಲೈ 12 ರಿಂದ 21 ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ರೈತರ ನಿಖರವಾದ ಬೆಳೆ ಮಾಹಿತಿ ಪಡೆಯಲು ಮೊಬೈಲ್ ಆಪ್‌ (app) ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ರಾಜ್ಯದಲ್ಲಿನ 2 ಕೋಟಿ 20 ಲಕ್ಷ ಪ್ಲಾಟ್‍ಗಳಲ್ಲಿ ಯಾವ ಬೆಳೆ ಇದೆ ಎನ್ನುವ ಮಾಹಿತಿ ಪಡೆಯಬಹುದು. ಇದರ ಮೂಲಕ ಸಮೀಕ್ಷೆ ನಡೆಸಲಾಗುವುದು ಎಂದರು.

Coalition government cabinet meeting took many decisions

ಸಮೀಕ್ಷೆಗೆ ಆಸಕ್ತ ಯುವಕ-ಯುವತಿಯರು ಭಾಗವಹಿಸಲಿದ್ದು, ಪ್ರತಿ ಸಮೀಕ್ಷೆಗೆ ಅವರಿಗೆ 10 ರೂಪಾಯಿ ನೀಡಲಾಗುವುದು, ಆಸಕ್ತರು ಗ್ರಾಮ ಲೆಕ್ಕಿಗರ ಬಳಿ ನೊಂದಾವಣಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಪಸಲ್ ಭೀಮಾ ಯೋಜನೆಯಡಿ ರೈತರ ವಿಮಾಕಂತು ಪಾವತಿಸಲು ಸಚಿವ ಸಂಪುಟ ಸಭೆಯ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವು ಬೆಳೆಗಳಿಗೆ ಶೇಕಡಾ 2 ಮತ್ತು ಕೆಲವು ಬೆಳೆಗಳಿಗೆ ಶೇಕಡಾ 1.5 ರಷ್ಟು ತಮ್ಮ ಪಾಲಿನ ಕಂತನ್ನು ಪಾವತಿಸಬೇಕು. ಉಳಿದ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ 50:50 ರಷ್ಟು ಪಾವತಿಸುತ್ತದೆ. 2019-20ನೇ ಸಾಲಿನ ಪ್ರೀಮಿಯಂ ಪಾವತಿಗಾಗಿ 546.21 ಕೋಟಿ ರೂ.ಗಳನ್ನು ಪಾವತಿಸಲು ಸಚಿವ ಸಂಪಟು ಸಭೆ ಒಪ್ಪಿಗೆ ನೀಡಿದೆ ಎಂದರು.

2020-21ನೇ ಸಾಲಿನಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲಿ ಹೆಚ್ಚುವರಿಯಾಗಿ ಡಿ.ಎನ್.ಬಿ. ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಹೊಸದಾಗಿ ಸಾತ್ನಕೋತ್ತರ ವೈದ್ಯಕೀಯ ಪದವಿಗೆ 72 ಹೆಚ್ಚುವರಿ ಸೀಟುಗಳನ್ನು ಸೃಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದರಿಂದ ರಾಜ್ಯದ 10 ಆಸ್ಪತ್ರೆಗಳಲ್ಲಿ ಸಾತ್ನಕೋತ್ತರ ಪದವಿ ಮಾಡಲು ಅವಕಾಶ ಕಲ್ಪಿಸಿದೆ. (ಹೊಳೇನರಸಿಪುರ, ದೊಡ್ಡಬಳ್ಳಾಪುರ, ಗಂಗಾವತಿ, ಶಿರಾ, ಬಸವಕಲ್ಯಾಣ, ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ವೆನ್‍ಲಾಕ್ ಆಸ್ಪತ್ರೆಗಳಲ್ಲಿ ಇದನ್ನು ಆರಂಭಿಸಲಾಗುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+