ಕರ್ನಾಟಕಕ್ಕೆ ವಾಪಸ್ ಬರುವವರಿಗೆ ಯಡಿಯೂರಪ್ಪ ಮನವಿ

ಬೆಂಗಳೂರು, ಮೇ 11 : ಲಾಕ್ ಡೌನ್ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಕನ್ನಡಿಗರು ಸಿಕ್ಕಿ ಹಾಕಿಕೊಂಡಿದ್ದಾರೆ. ಕರ್ನಾಟಕಕ್ಕೆ ವಾಪಸ್ ಬರಲು ಅವರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ವಾಪಸ್ ಬರಲು ನೋಂದಾಯಿಸಿಕೊಂಡ ಜನರಿಗೆ ಯಡಿಯೂರಪ್ಪ ಮನವಿಯೊಂದನ್ನು ಮಾಡಿದ್ದಾರೆ.

Recommended Video

      ದೆಹಲಿಯ ವಿಮಾನ ನಿಲ್ದಾಣದಲ್ಲಿ ಏನು ನಡೆಯುತ್ತಿದೆ | Whats Happening in Delhi Airport | Oneindia Kannada

      ನಿಮ್ಮ ಪ್ರಸ್ತುತ ಸ್ಥಿತಿಯ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಮತ್ತು ರಾಜ್ಯಕ್ಕೆ ಹಿಂತಿರುಗಲು ನಿಮ್ಮ ವಿನಂತಿಯನ್ನು ಗಮನಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

      ನೀವು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದರೆ ನಿಮಗೆ ಆಗಮನದ ದಿನಾಂಕ ಮತ್ತು ರಾಜ್ಯದ ನಿರ್ದಿಷ್ಟ ಸ್ಥಳದಲ್ಲಿ ಪ್ರವೇಶವನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

      CM Yediyurappa Appeal For Kannadigas Who Wants To Return State

      ನೀವು ಬಂದ ನಂತರ ಹೋಟೆಲ್/ಹಾಸ್ಟೆಲ್/ಡಾರ್ಮಿಟರಿ ಮುಂತಾದ ಸೌಲಭ್ಯಗಳಲ್ಲಿ ನಿಮ್ಮನ್ನು 14 ದಿನಗಳ ತನಕ ಕಡ್ಡಾಯವಾಗಿ ದಿಗ್ಭಂಧನಕ್ಕೆ ಒಳಪಡಿಸಲಾಗುವುದು ಎಂದು ಸ್ಪಷ್ಟಪಡಿಸುತ್ತೇವೆ ಎಂದು ಮನವಿಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.

      ಕಡ್ಡಾಯವಾದ ದಿಗ್ಭಂಧನದ ನಂತರ ನಿಮ್ಮ ಕೋವಿಡ್ - 19 ಪರೀಕ್ಷಾ ಫಲಿತಾಂಶವು ನಕಾರಾತ್ಮಕವಾಗಿ ಬಂದಾಗ ಮಾತ್ರ ನಿಮಗೆ ಮನೆಗೆ ಹೋಗಲು ಅನುಮತಿ ಸಿಗಲಿದೆ. ನಿಮ್ಮ ಹಾಗೂ ನಿಮ್ಮ ಕುಟುಂಬದ ಸದಸ್ಯರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

      ಕೋವಿಡ್ - 19 ವಿರುದ್ಧದ ನಮ್ಮ ಹೋರಾಟದಲ್ಲಿ ನಮಗೆ ಸಹಾಯ ಮಾಡಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+