ಹಿಂದಿ ಟ್ವೀಟ್‌ಗೆ ಸಿದ್ದರಾಮಯ್ಯ ಎದಿರೇಟು, ಉಘೇ ಉಘೇ ಎಂದ ಟ್ವಿಟ್ಟಿಗರು

22 ರಾಜ್ಯಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಬಿಜೆಪಿಗೆ ಕರ್ನಾಟಕ ಸುಲಭದ ತುತ್ತಲ್ಲ ಎಂಬುದು ಈಗಾಗಲೇ ಅರಿವಾಗಿದೆ. ಸಿದ್ದರಾಮಯ್ಯ ಅವರ ರಾಜಕೀಯ ಪಟ್ಟುಗಳು ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ರೆಕ್ಕೆ ಬಿಚ್ಚಲು ಪರದಾಡುವಂತೆ ಮಾಡುತ್ತಿವೆ.

ಹಲವು ರಾಜ್ಯಗಳಲ್ಲಿ ಅಮಿತ್ ಶಾ, ನರೇಂದ್ರ ಮೋದಿ ಅವರುಗಳು ಕಾಲಿಡುತ್ತಿದ್ದಂತೆ ಹೋರಾಟವನ್ನೇ ಮಾಡದೇ, ನಡು ಬಗ್ಗಿಸಿ ರಾಜ್ಯವನ್ನು ಬಿಜೆಪಿ ಸುಪರ್ಧಿಗೆ ಒಪ್ಪಿಸಿದ ಹಲವು ರಾಜಕೀಯ ಮುಖಂಡರ ಮುಂದೆ ಸಿದ್ದರಾಮಯ್ಯ ಅನನ್ಯ ಎನಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ಬಿಜೆಪಿ ಒಡ್ಡುತ್ತಿರುವ ಸವಾಲುಗಳು.

ಬಿಜೆಪಿಯನ್ನು ಎದುರಿಸಲು ಸಿದ್ದರಾಮಯ್ಯ ತಮ್ಮದೇ ಆದ ಶೈಲಿ ಬಳಸುತ್ತಾರೆ. ತಮ್ಮ ಮೂಲವಾದ ಗ್ರಾಮ ಬೇರುಗಳಿಂದ, ಸಮುದಾಯದಿಂದ ಬಂದ ಒರಟು ತನ ಹೊಂದಿರುವ ನೈಜ ಶೈಲಿಯದು. ಗ್ರಾಮ್ಯ ಶೈಲಿಯಲ್ಲೇ ಸಿದ್ದರಾಮಯ್ಯ ಅವರು ಬಿಜೆಪಿಗೆ ಎದಿರೇಟು ನೀಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ.

ಬಿಜೆಪಿಯ ಮುರಳೀಧರ ರಾವ್‌ ಅವರು ಇಂದು ಸಿದ್ದರಾಮಯ್ಯ ಅವರಿಗೆ ಟ್ವೀಟ್ ಒಂದನ್ನು ಮಾಡಿದ್ದಾರೆ ಅದೂ ಹಿಂದಿಯಲ್ಲಿ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು 'ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿ ಸರ್ ಹಿಂದಿ ಅರ್ಥವಾಗುವುದಿಲ್ಲ' ಎಂದು ಮರು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿಗಳಿಗೆ ಹಿಂದಿ ಬರುತ್ತದೆಯೋ ಬಿಡುತ್ತದೆಯೊ ಬೇಡೆ ವಿಷಯ ಹಿಂದಿ ಬರುವವರು ಅವರ ಆಸು ಪಾಸೆ ಇದ್ದೇ ಇರುತ್ತಾರೆ ಅವರಿಂದ ಆದರೂ ಟ್ವೀಟ್ ನ ಅರ್ಥ ತಿಳಿದು ಅವರು ಪ್ರತಿಕ್ರಿಯಿಸಬಹುದಿತ್ತು ಆದರೆ ಅವರು ಹಾಗೆ ಮಾಡದೇ ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ತೂಗು ಕತ್ತಿ ನೇತಾಡಿಸುತ್ತಿರುವ ಬಿಜೆಪಿಗರಿಗೆ ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಎನ್ನುವ ಮೂಲಕ ಪ್ರಾದೇಶಿಕತೆ ಮುನ್ನಲೆಗೆ ಇಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಮುರಳಿ ಮುರಳೀಧರ ರಾವ್‌ ಅವರ ಟ್ವೀಟ್‌ಗೆ ನೀಡಿರುವ ಪ್ರತಿಕ್ರಿಯೆಗೆ ಟ್ವಿಟ್ಟರ್‌ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಟ್ರಾನ್ಸ್‌ಲೇಟರ್‌ನಲ್ಲಿ ಅರ್ಥ ಹುಡುಕುತ್ತಿರುವ ಮುರಳಿ

ಸಿದ್ದರಾಮಯ್ಯ ಅವರು ಸಖತ್ ರಿಪ್ಲೆಯ ಅರ್ಥವನ್ನು ಮುರಳೀಧರ ರಾವ್‌ ಅವರು ಗೂಗಲ್ ಟ್ರಾನ್ಸ್‌ಲೇಟರ್ ಬಳಸಿ ಹುಡುಕುತ್ತಿರುತ್ತಾರೆ ಎಂದು ಪ್ಯಾರ್‌ ಸೆ ಮಾರಿಯೋ ಎಂಬ ಟ್ವಿಟರ್ ಖಾತೆ ಟ್ವೀಟ್ ಮಾಡಿದೆ. ಸಿದ್ದರಾಮಯ್ಯ ಅವರ ಕನ್ನಡದ ಟ್ವೀಟ್‌ನ ಹಿಂದಿ ಅನುವಾದವನ್ನೂ ಅದು ಹಾಕಿದೆ.

ಒಂದೇ ಟ್ವೀಟ್‌ಗೆ ಅಭಿಮಾನಿಯಾದ

ಶಮಂತಕ ಸೋಮಯಾಜಿ ಎಂಬಾತ ಮಾಡಿರುವ ಟ್ವೀಟ್ ಪ್ರಕಾರ ಆತ ಶಿಸ್ತುಬದ್ಧ ಬಿಜೆಪಿ ಅಭಿಮಾನಿ ಆದರೆ ಸಿದ್ದರಾಮಯ್ಯ ಅವರ ಈ ಒಂದೇ ಟ್ವೀಟ್‌ಗೆ ಸಿದ್ದರಾಮಯ್ಯ ಅಭಿಮಾನಿ ಆಗಿದ್ದಾರಂತೆ, ಈ ಬಾರಿ ಕಾಂಗ್ರೆಸ್‌ಗೆ ಮತ ಕೂಡಾ ಹಾಕುತ್ತಾರಂತೆ.

ಆರೋಗ್ಯಕರ ಚರ್ಚೆಗೂ ಕಾರಣವಾಗಿದೆ ಟ್ವೀಟ್

ಸಿದ್ದರಾಮಯ್ಯ ಅವರ ಟ್ವೀಟ್‌ ಕುರಿತಂತೆ ಆರೋಗ್ಯಕರ ಚರ್ಚೆಯೂ ನಡೆದಿದೆ. ಕೆಲವರು, ಮುಖ್ಯಮಂತ್ರಿಗಳಿಗೆ ರಾಷ್ಟ್ರಭಾಷೆ ಹಿಂದಿ ಬರುವುದಿಲ್ಲವೇ ಎಂದು ಕಾಲೆಳೆದರೆ ಅವರಿಗೆ ಕ್ಲಾಸ್ ತೆಗೆದಿರುವ ಕೆಲವರು ಎಲ್ಲವೂ ಆಡಳಿತ ಭಾಷೆಯಷ್ಟೆ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದಾರೆ.

ವಿಡಿಯೋ ಮೂಲಕ ಶಹಭಾಷ್‌

ಪ್ರಿಯಾ ಅನ್ನುವವರು ವಿಡಿಯೋ ಒಂದನ್ನು ಅಪ್‌ಲೋಡ್‌ ಮಾಡಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಗೆ ಶಹಭಾಷ್ ಹೇಳಿದ್ದಾರೆ. 'ರಿಪ್ಲೆ ಅಂದರೆ ಹೀಗಿರಬೇಕು' ಎಂಬುದು ಅವರ ಅಭಿಪ್ರಾಯ.

ರಾಷ್ಟ್ರದ ಮೇಲೆಯೇ ಹಿಂದಿ ಹೇರುತ್ತಾರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆಯೇ ಬಿಜಪಿಯವರು ಹಿಂದಿ ಹೇರಲು ಯತ್ನಿಸಿದ್ದಾರೆ, ಇನ್ನು ಅಧಿಕಾರ ಸಿಕ್ಕರೇ ಇಡೀ ರಾಜ್ಯದ ಮೇಲೆ ಹಿಂದಿ ಹೇರುತ್ತಾರೆ ಎಂದಿದ್ದಾರೆ ಕೆ.ಎ.ಜಗದೀಶ್ ಎಂಬುವರು. ಭಾಸ್ಕರ್ ಎಂಬುವರು ಟ್ವೀಟ್ ಮಾಡಿ , ಮುರಳಿಧರ ರಾವ್ ಜೀವನದಲ್ಲಿ ಇನ್ನೊಮ್ಮೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ.

ಒತ್ತಾಯಪೂರಕವಾಗಿ ಕನ್ನಡದಲ್ಲಿ ಸಹಿ

ಸಿದ್ದರಾಮಯ್ಯ ಅವರು ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿ ಇಂಗ್ಲಿಷ್‌ನಲ್ಲಿ ಸಹಿ ಮಾಡಿ ಎಂದರೂ ನಾನು ಕನ್ನಡದಲ್ಲೇ ಸಹಿ ಮಾಡುತ್ತೇನೆ ಎಂದು ಕನ್ನಡದಲ್ಲೇ ಸಹಿ ಮಾಡಿದ ವಿಡಿಯೋವನ್ನು ಅಭಿಗ್ನ ರಾಮ್ ಅವರು ಅಪ್‌ಲೋಡ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+