ʼದೊಡ್ಡ ವಿಕೆಟ್ ಪತನ’; ಎರಡು ತಿಂಗಳು ಮಾತ್ರ ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರ: ಅಚ್ಚರಿ ಹೇಳಿಕೆ ನೀಡಿದ ಬಿ.ವೈ ವಿಜಯೇಂದ್ರ

ಬೆಂಗಳೂರು, ಜುಲೈ 27: 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದು ಒರೋಬ್ಬರು ಒಂದು ವರ್ಷ ಪೂರೈಸಿದ್ರು ಸಹ ಸರ್ಕಾರದ ಪತನದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ವಿಪಕ್ಷಗಳು ಕಾಂಗ್ರೆಸ್‌ ನಲ್ಲಿ ಅಸಮಾಧಾನವೇ ಸರ್ಕಾರ ಪತನಕ್ಕೆ ಕಾರಣವಾಗಲಿದೆ ಎಂದು ಸ್ಟೋಟಕ ಹೇಳಿಕೆಯನ್ನ ನೀಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ವಾಲ್ಮೀಕಿ ಬಹುಕೋಟಿ ಹಗರಣ, ಮುಡಾ ಅಕ್ರಮ ಸೈಟು ಹಂಚಿಕೆ ಆರೋಪ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಿರ್ಕಿ ಹೊಡೆಯುತ್ತಿದೆ. ಇನ್ನು ಎರಡು ತಿಂಗಳು ಆದ ಮೇಲೆ ನಾನು ಹೇಳುತ್ತೇನೆ ಅನ್ನೋ ಮೂಲಕ ಸ್ಫೋಟಕ ಸುಳಿವು ನೀಡುವ ಮೂಲಕ ಸರ್ಕಾರ ಪತನಗೊಳ್ಳುವ ಅರ್ಥದಲ್ಲಿ ಮಾತನಾಡಿದ್ದಾರೆ.

CM Siddaramaiah Was In Power In The State For Only Two Months Says BY Vijayendra

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಚ್ಯುತಿಗೊಳ್ಳುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಇನ್ನೆರಡು ತಿಂಗಳು ಕಳೆದ ಮೇಲೆ ನಾನು ಹೇಳುತ್ತೇನೆ. 187 ಕೋಟಿಯ ವಾಲ್ಮೀಕಿ ಹಗರಣ, ಮುಡಾ ಅಕ್ರಮ ಸಣ್ಣ ವಿಷಯವಲ್ಲ. ರಾಜ್ಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಕೊಳ್ಳೆ ಹೊಡೆದಿದೆ. ಅಧಿಕಾರಕ್ಕೆ ಬಂದ 14 ತಿಂಗಳು ಲೂಟಿ ಮಾಡೋ ಸ್ಟ್ರಾಟಜಿ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ ಅವರಿಗೂ ಕಪ್ಪ ಕಾಣಿಕೆ ಹೋಗಿದೆ. ಸಿದ್ದರಾಮಯ್ಯ ಅವರ ಸರ್ಕಾರವೇ ಇನ್ನೆರಡು ತಿಂಗಳು ಮಾತ್ರ ಇರುವುದು ಖಂಡಿತ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಮುಡಾ ಸೈಟ್‌ ಹಂಚಿಕೆಯ ಅಕ್ರಮ, ವಾಲ್ಮೀಕಿ ಬಹುಕೋಟಿ ಹಗರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದ್ದು, ಹಗರಣಗಳನ್ನ ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.

ಅಕ್ರಮವಾಗಿ ಸಿದ್ದರಾಮಯ್ಯ ಕುಟುಂಬಕ್ಕೆ ನಿವೇಶನ ಬಂದಿದೆ. ED, CBIಯಿಂದ ಸಿಎಂ ತಪ್ಪಿಸ್ಕೊಳ್ಳೋಕೆ ಸಾಧ್ಯವಿಲ್ಲ. ವಾಲ್ಮೀಕಿ ಹಗರಣ ಹಣ ಯಾರಿಗೆ ತಲುಪಿದೆ? ಕಾಂಗ್ರೆಸ್ ಹೈಕಮಾಂಡ್‌ ಕರ್ನಾಟಕವನ್ನು ATM ಮಾಡಿ ಲೂಟಿ ಮಾಡುತ್ತಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ಸಿದ್ದರಾಯ್ಯ ಅವರು ಮಭಯಭೀತರಾಗಿದ್ದು, ನೋಡ್ತಾ ಇರಿ ಸಿದ್ದರಾಮಯ್ಯನೇ ತಪ್ಪಾಗಿದೆ ಅಂತ ಒಪ್ಕೊಳ್ತಾರೆ ಎಂದು ಹೇಳಿದ್ದಾರೆ.

ಇನ್ನೆರಡು ತಿಂಗಳು ಕಾದು ನೋಡಿ ಸಿದ್ದರಾಮಯ್ಯ ಸರ್ಕಾರ ಇರೋದು ಅನುಮಾನ. ವಾಲ್ಮೀಕಿ ಕೋಟಿ, ಕೋಟಿ ಹಗರಣದಲ್ಲಿ ಇನ್ನೂ ದೊಡ್ಡ, ದೊಡ್ಡ ತಲೆಗಳು ಉದುರುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ ಮಾಡೋದು ನಿಶ್ಚಿತ. ಪಾದಯಾತ್ರೆ ಮಾಡಲು ಕಾಂಗ್ರೆಸ್​ ನಾಯಕರಿಂದಲೇ ಒತ್ತಡ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಜೋರಾಗಿದೆ ಎಂದು ವಿಜಯೇಂದ್ರ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+