Prajwal Revanna: ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಲಿ ಎಂದ ಅಮಿತ್ ಶಾ; ಸಿದ್ದರಾಮಯ್ಯ ಹೇಳಿದ್ದೇನು?
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಬಿಜೆಪಿ ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಲೋಕಸಭಾ ಚುನಾವಣಾ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಕೊನೆಗೂ ಪ್ರಜ್ವಲ್ ರೇವಣ್ಣ ವಿಚಾರವನ್ನು ಪ್ರಸ್ತಾಪಿಸಿದರು.
ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಹಂಚಲಾಗಿದೆ. ಮಹಿಳೆಯರ ಜೊತೆ ಯಾರೇ ದೌರ್ಜನ್ಯ ಮಾಡಿದರೂ ನಾವು ಅವರಿಗೆ ಬೆಂಬಲ ಕೊಡುವುದಿಲ್ಲ, ನಿಮ್ಮದೇ ಸರ್ಕಾರ ಇದೆ, ಯಾಕೆ ಕ್ರಮ ತೆಗೆದುಕೊಂಡಿಲ್ಲ, ವಿದೇಶಕ್ಕೆ ಹೋಗಲು ಏಕೆ ಬಿಟ್ಟಿರಿ ಎಂದು ಪ್ರಶ್ನೆ ಮಾಡಿದ ಅಮಿತ್ ಶಾ, ಅವರಿಗೆ ಕಠಿಣ ಶಿಕ್ಷೆ ನೀಡಿ ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದರು.

ಅಮಿತ್ ಶಾ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಲಿ ಎಂದಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ಆತ್ಮೀಯ ಅಮಿತ್ ಶಾ ಅವರೇ, ಅಂತಿಮವಾಗಿ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಮ್ಮ ಮಿತ್ರರು ಮಾಡಿದರೂ ಸಹ ನೀವು ಕ್ಷಮಿಸುವುದಿಲ್ಲ ಎಂದು ಹೇಳಿದ್ದೀರಿ. ಆದರೆ ನಿಮ್ಮ ಮಾತು ಎಷ್ಟು ಸತ್ಯ ಎನ್ನುವುದು ನಿಮ್ಮ ನಡವಳಿಕೆ ತೋರಿಸುತ್ತದೆ" ಎಂದರು.
ನಿಮ್ಮ ಸಂಸದರಿಂದ ಒಲಿಂಪಿಯನ್ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ನಾವು ಮರೆಯಬಹುದೇ? ನೀವು ಯಾರೊಂದಿಗೆ ನಿಂತಿದ್ದೀರಿ? ನಿಮ್ಮ ಸಂಸದರ ಜೊತೆ ಅಲ್ಲವೇ? ಮಹಿಳಾ ಕ್ರೀಡಾಪಟುಗಳನ್ನು ವಾರಗಟ್ಟಲೆ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳಲು ಅವಕಾಶ ನೀಡಿದ್ದವರು ನೀವು ಎಂದಿದ್ದಾರೆ.
ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಗುಜರಾತ್ ಬಿಜೆಪಿ ಸರ್ಕಾರವು ಪೆರೋಲ್‌ನಲ್ಲಿ ಬಿಡುಗಡೆ ಮಾಡಿತು ಮತ್ತು ನಿಮ್ಮ ಪಕ್ಷದವರು ಅವರಿಗೆ ಹೂಮಾಲೆ ಹಾಕಿದ್ದನ್ನು ನಾವು ಮರೆಯಬಹುದೇ? ನಿಮ್ಮ ಪಕ್ಷದ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ಲವೇ ಎಂದು ಪ್ರಶ್ನಿಸಿದರು.
ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಉನ್ನಾವೋ ಪ್ರಕರಣದಲ್ಲಿ ನಿಮ್ಮ ಪಕ್ಷವು ದುಷ್ಕರ್ಮಿಗಳ ಬೆನ್ನಿಗೆ ನಿಂತಿದ್ದನ್ನು ನಾವು ಮರೆಯಬಹುದೇ?
Dear HM @AmitShah avare, thanks for finally expressing outrage in the #PrajwalRevanna matter. You have also said you don’t condone violence against women even if it is done by an ally of yours. One is tempted to believe you, but your conduct in the past has shown that talk is…
— Siddaramaiah (@siddaramaiah) May 1, 2024
ಹತ್ರಾಸ್ ಪ್ರಕರಣದಲ್ಲಿ ನಿಮ್ಮ ಪಕ್ಷವು ಅತ್ಯಾಚಾರದ ಅಪರಾಧಿಗಳನ್ನು ಹೇಗೆ ಸಮರ್ಥಿಸಿತು ಎಂಬುದನ್ನು ನಾವು ಮರೆಯಬಹುದೇ?
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದಾಗ ಬಿಜೆಪಿಯವರು ಕಣ್ಣು ಮುಚ್ಚಿದ್ದನ್ನು ಮರೆಯಬಹುದೇ? ರಾಷ್ಟ್ರದ ಮಹಿಳೆಯರಿಗೆ ಸತ್ಯ ತಿಳಿದಿದೆ ಮತ್ತು ನೀವು ಕೂಡ ವಾಸ್ತವ ತಿಳಿದುಕೊಳ್ಳಿ ಎಂದಿದ್ದಾರೆ.












Click it and Unblock the Notifications