ಕಾಂಗ್ರೆಸ್ಸಿಗೇ 'ಧಿಕ್ಕಾರ' ಎಂದು ಕೂಗಿದ ಸಿಎಂ ಸಿದ್ದರಾಮಯ್ಯ!

Posted By:
Subscribe to Oneindia Kannada

ಬೆಂಗಳೂರು, ಮಾ 4: ಸಿದ್ದರಾಮಯ್ಯ ಬಾಯಿ ತಪ್ಪಿನಿಂದ ಅಟಲ್ ಬಿಹಾರಿ ವಾಜಪೇಯಿಯವರನ್ನು ಮತ್ತೆ ಪ್ರಧಾನಿ ಮಾಡಿದ್ದು, ಸೋನಿಯಾಗೆ ಶ್ರದ್ದಾಂಜಲಿ ಹೇಳಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಈಗ ರೈತರ ಮೇಲಿನ ಲಾಠಿಚಾರ್ಜ್ ವಿಚಾರದಲ್ಲಿ ಬಾಯಿತಪ್ಪಿ ತಮ್ಮದೇ ಸರಕಾರಕ್ಕೆ ವಿಧಾನಸಭೆಯಲ್ಲಿ ಧಿಕ್ಕಾರ ಎಂದಿದ್ದಾರೆ. ಬಿಜೆಪಿ ವಿರುದ್ಧ ಧಿಕ್ಕಾರ ಕೂಗುವ ಭರದಲ್ಲಿ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ವಿರುದ್ಧವೇ ಘೋಷಣೆ ಕೂಗಿ ಎಡವಟ್ಟು ಮಾಡಿಕೊಂಡು ಮತ್ತೆ ಸಾವರಸಿ ಕೊಂಡಿದ್ದಾರೆ. (ಕಣ್ಣಲ್ಲಿ ನೀರು ತರಿಸುವ ಲಾಠಿಚಾರ್ಚ್ ದೃಶ್ಯಗಳು)

ಶುಕ್ರವಾರ (ಮಾ 4) ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೇ ರೈತರ ಮೇಲೆ ನಡೆದ ಲಾಠಿಚಾರ್ಜ್ ವಿಚಾರವನ್ನು ಬಿಜೆಪಿ ಸದಸ್ಯ ರಾಮಚಂದ್ರೇಗೌಡರು ಪ್ರಸ್ತಾಪಿಸಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ಯುದ್ದಕ್ಕೆ ಕಾರಣವಾಯಿತು.

CM Siddaramaiah statement in assembly on lathi charge on farmers in Bengaluru

ನಗರದಲ್ಲಿ ಶಾಂತಿಯುತ ಪ್ರತಿಭಟನೆಗೆ ರೈತರಿಗೆ ಸರಕಾರ ಅವಕಾಶ ಮಾಡಿಕೊಟ್ಟಿತ್ತು. ಲಾರಿ ಮತ್ತು ಟ್ರ್ಯಾಕ್ಟರುಗಳಿಗೆ ನಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ರೈತರು ವಿಧಾನಸೌಧ ಚಲೋ ಪ್ರತಿಭಟನೆಗೆ ಮುಂದಾದರು.

ಸಾರ್ವಜನಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಲಾಠಿಚಾರ್ಚ್ ಮಾಡಲಾಗಿದೆಯೇ ಹೊರತು, ನೀವು ಕಿರುಚಾಡುವಷ್ಟರ ಮಟ್ಟಿಗೆ ಪೊಲೀಸರು ಶಕ್ತಿ ಪ್ರಯೋಗ ನಡೆಸಲಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸರಕಾರದ ನಿಲುವನ್ನು ಸಮರ್ಥಿಸಿಕೊಂಡರು. (ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ)

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾ, ನಿನ್ನೆಯ ಘಟನೆಯಿಂದ ನೋವಾಗಿದೆ. ನಾನು ಕೂಡಾ ರೈತ ಕುಟುಂಬದ ಹಿನ್ನಲೆಯಿಂದ ಬಂದವನು. ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ರೈತರು ಇದಕ್ಕೆ ಅನ್ಯಥಾ ಭಾವಿಸಬಾರದು ಎಂದು ಮನವಿ ಮಾಡಿದರು.

ಇದು ಗೋಲಿಬಾರ್ ಗಿಂತಲೂ ಕೆಟ್ಟದಾದ ಪರಿಸ್ಥಿತಿ, ಸರಕಾರದ ಕ್ರಮಕ್ಕೆ ನಮ್ಮ ಧಿಕ್ಕಾರವಿದೆ ಎಂದು ಬಿಜೆಪಿಯ ಮುಖಂಡರು ಧಿಕ್ಕಾರ.. ಧಿಕ್ಕಾರ ಎಂದು ಸಭಾತ್ಯಾಗ ಮಾಡಲು ಮುಂದಾದರು.

ಆಗ ಮತ್ತೆ ಸೀಟಿನಿಂದ ಎದ್ದ ಸಿದ್ದರಾಮಯ್ಯ 'ಸರಕಾರಕ್ಕೆ ಧಿಕ್ಕಾರ'ಎಂದು ಕೂಗಿ ನಂತರ 'ಗೋಲಿಬಾರ್ ಸರಕಾರಕ್ಕೆ ಧಿಕ್ಕಾರ' ಎಂದು ಹೇಳಿ 'ನಿಮಗೇ ಹೇಳಿದ್ದು ಎಂದು ಬಿಜೆಪಿಯವರತ್ತ ಬೊಟ್ಟು ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Chief Minister Siddaramaiah statement in assembly (Mar 4) on lathi charge on farmers in Bengaluru on March 3.
Please Wait while comments are loading...