ಕಾಂಗ್ರೆಸ್ ಡೈರಿ ಬೆಂಕಿಗೆ ದಿನೇಶ್ ಅಮಿನ್ ಮಟ್ಟು ತುಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರು ಇದೀಗ ಕಾಂಗ್ರೆಸ್ ಡೈರಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹಾಗಿದ್ದರೆ ಇವರು ಹೇಳಿದ್ದಾದರೂ ಏನು ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ.
ಬೆಂಗಳೂರು, ಫೆಬ್ರವರಿ. 26 : ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮನೆಯಲ್ಲಿ ಸಿಕ್ಕಿದೆನ್ನಲಾದ ಹೈಕಮಾಂಡ್ ಕಪ್ಪ ಡೈರಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರು ಸುತ್ತಿ ಬಳಸಿ ಉರಿಯುತ್ತಿರುವ ಬೆಂಕಿಯಲ್ಲಿ ತುಪ್ಪ ಸುರಿದಿದ್ದಾರೆ.
ಗೋವಿಂದರಾಜ್ ಡೈರಿಯಲ್ಲಿರುವ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು ಎಂದು ಕಡ್ಡಿ ತುಂಡಾದಂತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿದ್ದಾರೆ. ಇದಕ್ಕೆ ಸಚಿವ ಆರ್ ವಿ ದೇಶಪಾಂಡೆ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನೇಶ್ ಬಿಜೆಪಿ ಮಾಧ್ಯಮ ಸಲಹೆಗಾರರೇ? ಅಥವಾ ಕಾಂಗ್ರೆಸ್ ಸಿಎಂ ಸಲಹೆಗಾರರೇ? ಎಂದು ಟ್ವಿಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. [ಡೈರಿ ಹೊಡೆದಾಟದಲ್ಲಿ ಮೂರ್ಖರಾಗುತ್ತಿರುವುದು ಮತದಾರರು]
ಮಟ್ಟು ಅವರು ಡೈರಿ ಸಂಬಂಧಿಸಿದಂತೆ ಪೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳದಿದ್ದಾರೆ. ಹಾಗಿದ್ದರೆ ಅವರು ಬರೆದ ಅಭಿಪ್ರಾಯದಲ್ಲಿ ಏನಿದೆ ಎಂಬುವುದನ್ನು ಮುಂದೆ ಓದಿ.
ಮಟ್ಟು ತಮ್ಮ ಫೇಸ್ ಬುಕ್ ಖಾತೆನಲ್ಲಿ ಬರೆದುಕೊಂಡ ಅಭಿಪ್ರಾಯ
ಕಳೆದ ಕೆಲವು ವರ್ಷಗಳಿಂದ ಈ ಸಿಕ್ರೇಟ್ ಡೈರಿಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇದೆ. ಜೈನ್ ಹವಾಲಾ ಡೈರಿ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯು.ವಿ.ಸಿಂಗ್ ನೀಡಿದ ತನಿಖಾ ವರದಿಯಲ್ಲಿನ ಖಾರದಪುಡಿ ಮಹೇಶ್ ಡೈರಿ, ಇತ್ತೀಚೆಗೆ ಸಹರಾ ಮತ್ತು ಬಿರ್ಲಾ ಕಂಪೆನಿಗಳ ಕಚೇರಿಯಲ್ಲಿ ಸಿಕ್ಕಿದೆಯೆನ್ನಲಾದ ಡೈರಿ,ಇದೀಗ ಎಂಎಲ್ ಸಿ ಗೋವಿಂದರಾಜ್ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆಯೆನ್ನಲಾದ ಡೈರಿ.
ಜೈನ್-ಹವಾಲಾ ಡೈರಿಯಲ್ಲಿನ ಆರೋಪಿಗಳೆಲ್ಲರನ್ನೂ ಸುಪ್ರೀಂಕೋರ್ಟ್ ಖುಲಾಸೆಗೊಳಿಸಿದೆ. ಸಹಾರಾ-ಬಿರ್ಲಾ ಕಂಪೆನಿಗಳ ಡೈರಿ ಬಗ್ಗೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಈಗ ಉಳಿದಿರುವುದು ನೈತಿಕತೆಯ ಆಧಾರದ ಪಾಪ ಪ್ರಾಯಶ್ಚಿತ.. ಇದು ಹೇಗೆ ಎನ್ನುವುದು ಪ್ರಶ್ನೆ.[ಡೊನೇಷನ್ ಗೇಟ್ : ಬಿಜೆಪಿ ಬಣ್ಣ ಬಯಲು ಮಾಡಿದ ಕಾಂಗ್ರೆಸ್]
ನೈತಿಕತೆಯ ಆಧಾರದ ಪಾಪ ಪ್ರಾಯಶ್ಚಿತಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಪಾಲಿಸಿದ ರಾಜಧರ್ಮದ ಮಾರ್ಗವೊಂದಿದೆ.
ಇದು ಸರಿಯಾದ ಮಾರ್ಗ ಎಂದೆನಿಸುತ್ತದೆ. ಹವಾಲಾ ಹಣ ಸ್ವೀಕರಿಸಿದವರ ಪಟ್ಟಿಯಲ್ಲಿ 'ಎಲ್ ಕೆ ಎನ್' ಎನ್ನುವ ಇನಿಷಿಯಲ್ ಇರುವುದು ಬಹಿರಂಗವಾಗಿ, ಅದು ಲಾಲ್ ಕೃಷ್ಣ ಅಡ್ವಾಣಿಯವರೇ ಎಂದು ಪ್ರಚಾರವಾಗತೊಡಗಿದಾಗ ನೊಂದುಕೊಂಡ ಅಡ್ವಾಣಿಯವರು ಅದೇ ದಿನ ಸಂಜೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
'ರಾಜಕೀಯದಲ್ಲಿ ವಿಶ್ವಾಸಾರ್ಹತೆ ಮುಖ್ಯ, ಅಧಿಕಾರ ಅಲ್ಲ. ಈ ಆರೋಪದಿಂದ ಮುಕ್ತವಾಗುವ ವರೆಗೆ ಲೋಕಸಭೆ ಪ್ರವೇಶಿಸುವುದಿಲ್ಲ' ಎಂದು ಅವರು ಶಪಥ ಮಾಡಿದ್ದರು.ಅನಂತರ ಡೈರಿಯಲ್ಲಿ ಹೆಸರಿದ್ದ ಅನೇಕ ರಾಜಕಾರಣಿಗಳು ಕೂಡಾ ರಾಜೀನಾಮೆ ನೀಡಬೇಕಾಯಿತು.
ನೈತಿಕ ನಿಲುವುಗಳು ಮೇಲಿನಿಂದ ಕೆಳಕ್ಕೆ ಇಳಿದು ಬರಬೇಕು.ಈಗ ಚೆಂಡು ಸನ್ಮಾನ್ಯ ಪ್ರಧಾನಿ ನರೇಂದ್ರಮೋದಿಯವರ ಮನೆಯಂಗಳದಲ್ಲಿದೆ. ಸಹಾರಾ-ಬಿರ್ಲಾ ಡೈರಿಯಲ್ಲಿ 'ಗುಜರಾತ್ ಸಿಎಂ' ಮಧ್ಯಪ್ರದೇಶ ಸಿಎಂ, ಚತ್ತೀಸ್ ಗಡ ಸಿಎಂ' ಡೆಲ್ಲಿ ಸಿಎಂ ಅವರಿಗೆ ಹಣ ನೀಡಲಾದ ಎಂಟ್ರಿಗಳಿವೆಯಂತೆ. ಡೈರಿ ಹಾವಳಿ ಅತಿಯಾಯಿತು.
ಇದನ್ನು ಕೊನೆಗೊಳಿಸಬೇಕಾದರೆ ಸನ್ಮಾನ್ಯ ನರೇಂದ್ರಮೋದಿಯವರು ತಮ್ಮದೇ ಪಕ್ಷದ ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯರಾದ ಎಲ್.ಕೆ.ಅಡ್ವಾಣಿಯವರ ಮಾದರಿಯನ್ನು ಅನುಸರಿಸಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಅದರ ನಂತರ ಗೋವಿಂದರಾಜ್ ಅವರದ್ದೆನ್ನಲಾದ ಡೈರಿಯಲ್ಲಿರುವ ಹೆಸರಿನ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು.

ಸಚಿವ ಆರ್ ವಿ ದೇಶಪಾಂಡೆ ಕೆಂಡಾಮಂಡಲ
ಮಟ್ಟು ಅವರ ಈ ರೀತಿಯ ಅಭಿಪ್ರಾಯಕ್ಕೆ ಕಾಂಗ್ರೆಸ್ ಹಿರಿಯ ಸಚಿವ ಆರ್ ವಿ ದೇಶಪಾಂಡೆ ಕೆಂಡಾಮಂಡಲವಾಗಿದ್ದಾರೆ. ದಿನೇಶ್ ಅಮಿನ್ ಮಟ್ಟು ಬಿಜೆಪಿ ಮಾಧ್ಯಮ ಸಲಹೆಗಾರರೇ? ಅಥವಾ ಕಾಂಗ್ರೆಸ್ ಸಿಎಂ ಸಲಹೆಗಾರರೇ? ಎಂದು ಟ್ವಿಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಸಚಿವ ದೇಶಪಾಂಡೆ ಏಟಿಗೆ ಉಲ್ಟಾ
ಅಮಿನ್ ಮಟ್ಟು ಅವರ ಫೇಸ್ ನುಕ್ ಅಭಿಪ್ರಾಯಕ್ಕೆ ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವ ಆರ್ ವಿ ದೇಶಪಾಂಡೆ ತೀವ್ರ ಆಕ್ರೋಶ ವ್ಯಕ್ತಡಿಸಿದ ಬೆನ್ನಲ್ಲಿ ಇದೀಗ ಸಚಿವರ ರಾಜೀನಾಮೆಗೆ ಡಿಮ್ಯಾಂಡ್ ಮಾಡಿಲ್ಲ. ದಯವಿಟ್ಟು ನನ್ನ ಫೇಸ್ ಬುಕ್ ಪೋಸ್ಟ್ ನ್ನು ಸರಿಯಾಗಿ ಓದಿ ಎಂದು ಅಮಿನ್ ಟ್ವಿಟ್ಟರ್ ಮೂಲಕ ದೇಶಪಾಂಡೆ ಅವರಿಗೆ ಮನವಿ ಮಾಡಿದ್ದಾರೆ.

ಅಮಿನ್ ಮಟ್ಟು ಅಭಿಪಾಯ
ಅಮಿನ್ ಮಟ್ಟು ಅವರು ಅಡ್ವಾಣಿ, ನರೇಂದ್ರ ಮೋದಿ ಸೇರಿದಂತೆ ಇತರರನ್ನು ತಮ್ಮ ಅಭಿಪ್ರಾಯದಲ್ಲಿ ತಿಳಿಸಿ, ಕೊನೆಗೆ ಸುತ್ತಿ ಬಳಸಿ ಡೈರಿಯಲ್ಲಿರುವ ರಾಜ್ಯ ಕಾಂಗ್ರೆಸ್ ಸಚಿವರ ಕಾಲೆಳೆದಿದ್ದಾರೆ.

ಸಹಾರಾ-ಬಿರ್ಲಾ ಡೈರಿ ಪ್ರಸ್ತಾಪ
ಸಹಾರಾ-ಬಿರ್ಲಾ ಡೈರಿಯಲ್ಲಿ 'ಗುಜರಾತ್ ಸಿಎಂ' ಮಧ್ಯಪ್ರದೇಶ ಸಿಎಂ, ಚತ್ತೀಸ್ ಗಡ ಸಿಎಂ' ಡೆಲ್ಲಿ ಸಿಎಂ ಅವರಿಗೆ ಹಣ ನೀಡಲಾದ ಎಂಟ್ರಿಗಳಿವೆಯಂತೆ. ಡೈರಿ ಹಾವಳಿ ಅತಿಯಾಯಿತು.ಇದನ್ನು ಕೊನೆಗೊಳಿಸಬೇಕಾದರೆ ಸನ್ಮಾನ್ಯ ನರೇಂದ್ರಮೋದಿಯವರು ತಮ್ಮದೇ ಪಕ್ಷದ ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯರಾದ ಎಲ್.ಕೆ.ಅಡ್ವಾಣಿಯವರ ಮಾದರಿಯನ್ನು ಅನುಸರಿಸಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ರಾಜ್ಯ ಕಾಂಗ್ರೆಸ್ ಸಚಿವರ ಬಗ್ಗೆ ಮಟ್ಟು ಹೇಳಿದ್ದೇನು?
ಗೋವಿಂದರಾಜ್ ಅವರದ್ದೆನ್ನಲಾದ ಡೈರಿಯಲ್ಲಿರುವ ಹೆಸರಿನ ಎಲ್ಲ ರಾಜಕಾರಣಿಗಳು ಕ್ಷಣಮಾತ್ರವೂ ಸಮಯ ವ್ಯರ್ಥಮಾಡದೆ ರಾಜೀನಾಮೆ ಎಸೆದುಬಿಡಬೇಕು ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.












Click it and Unblock the Notifications