ಈಶ್ವರಪ್ಪಗೆ ನಾನು ಸನ್ಮಾನ ಮಾಡಲ್ಲ ಅಂದ್ರು ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಸಿಎಂ ಸಿದ್ದರಾಮಯ್ಯ & ಕೆ.ಎಸ್.ಈಶ್ವರಪ್ಪ ನಡುವೆ ರಾಜಕೀಯ ಕಿತ್ತಾಟ ಮಾಮೂಲಿ. ಅದ್ರಲ್ಲೂ ಸಿಎಂ ಸಿದ್ದು ವಿರುದ್ಧ ಪದೇ ಪದೆ ಹೇಳಿಕೆ ಕೊಟ್ಟು ಈಶ್ವರಪ್ಪ ಸುದ್ದಿಯಲ್ಲಿ ಇರುತ್ತಾರೆ. ಇಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಇಬ್ಬರೂ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರಿಗೆ ಸನ್ಮಾನ ಮಾಡಲು ತುಂಬಿದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ಈಶ್ವರಪ್ಪ ಅವರ ರಾಜಕೀಯ ಮೌಲ್ಯಗಳ ಕುರಿತು ಸಿಎಂ ಸಿದ್ದರಾಮಯ್ಯ ಹಿಂದಿನಿಂದಲೂ ನೇರವಾಗಿ ವಿರೋಧಿಸುತ್ತಾ ಬಂದವರು. ಅದರಲ್ಲೂ ವಿಧಾನಸಭೆಯ ಒಳಗೆ ಈ ಇಬ್ಬರೂ ನಾಯಕರ ಫೈಟಿಂಗ್ ಎಲ್ಲರೂ ನೋಡಿದ್ದಾರೆ. ಆದರೆ ತಮ್ಮ ಸಮುದಾಯದ ಕಾರ್ಯಕ್ರಮ ಅಂತಾ ಇಬ್ಬರೂ ಇಂದು ವೇದಿಕೆ ಹಂಚಿಕೊಂಡಿದ್ದರು. ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಇಬ್ಬರೂ ಬಂದಿದ್ದರು. ಈ ವೇಳೆ ಈಶ್ವರಪ್ಪ ಅವರನ್ನು ಸನ್ಮಾನಿಸಲು ಸಿಎಂ ಸಿದ್ದರಾಮಯ್ಯ ಅವರ ಬಳಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ತಿಳಿಸಿದರು. ಆಗ ಸಿಎಂ ಸಿದ್ದು ಮಾಡಿದ್ದೇನು ಗೊತ್ತಾ? ಮುಂದೆ ಓದಿ.

CM Siddaramaiah refused to honor Eshwarappa on stage

ನಾನು ಸನ್ಮಾನ ಮಾಡಲ್ಲ ಅಂದ್ರು ಸಿಎಂ!

ಹೌದು, ತಮ್ಮ ನೇರ ನುಡಿಯಿಂದಲೇ ಸಿಎಂ ಸಿದ್ದರಾಮಯ್ಯ ಸುದ್ದಿಯಲ್ಲಿ ಇರುತ್ತಾರೆ. ಈ ರೀತಿ ಇಂದು ಕೂಡ ನೇರವಾಗಿ ಮಾತನಾಡಿ ಸದ್ದು ಮಾಡಿದ್ದು, ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರನ್ನು ಸನ್ಮಾನಿಸುವ ಬಗ್ಗೆ ನೇರವಾಗಿ ಇಲ್ಲ ಎಂದಿದ್ದಾರೆ. ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ತಿಳಿಸಿದ ನಂತರ ಕೈಸನ್ನೆ ಮೂಲಕವೇ, ಸಿಎಂ ಸಿದ್ದರಾಮಯ್ಯ ಅವರು ಈಶ್ವರಪ್ಪ ಅವರನ್ನ ಸನ್ಮಾನ ಮಾಡಲ್ಲ ಎಂದಿದ್ದಾರೆ. ಈ ದೃಶ್ಯ ಇದೀಗ ಎಲ್ಲೆಲ್ಲೂ ವೈರಲ್ ಆಗುವ ಜೊತೆಗೆ ಚರ್ಚೆಗೂ ಗ್ರಾಸವಾಗಿದೆ. ಆದರೆ ಹಿಂದಿನಿಂದಲೂ ಈಶ್ವರಪ್ಪ ಅವರ ರಾಜಕೀಯ ನಿಲುವುಗಳನ್ನ ಸಿಎಂ ಸಿದ್ದರಾಮಯ್ಯ ವಿರೋಧಿಸುತ್ತಾ ಬಂದಿದ್ದರು ಅನ್ನೋದು ವಿಶೇಷ.

ಎಸ್.ಟಿ.ಸೋಮಶೇಖರ್ ಜೊತೆ ಫುಲ್ ಟಾಕ್!

ಇನ್ನು ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೇತೂಹಳ್ಳಿಯಲ್ಲಿ ನಡೆದ ಕುರುಬ ಸಮುದಾಯದ ಶಾಖಾಮಠ ಗುದ್ದಲಿ ಪೂಜೆ & ಕುರುಬ ಸಮಾಜದ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಜೊತೆ ಸಿದ್ದರಾಮಯ್ಯ ಆಪ್ತವಾಗಿ ಮಾತನಾಡಿದರು. ಈ ಹಿಂದೆ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರು ಬಿಜೆಪಿ ಸೇರಿದ್ದರು. ಈಗ ಗುರು-ಶಿಷ್ಯರ ಮಾತುಗಳು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

CM Siddaramaiah refused to honor Eshwarappa on stage

ಸಿಎಂ ಸಿದ್ದು ಬಗ್ಗೆ ಸೋಮಶೇಖರ್ ಹೊಗಳಿಕೆ!

ಹಾಗೇ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಟಿ.ಸೋಮಶೇಖರ್, ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ. 'ಸಿದ್ದರಾಮಯ್ಯರ ಸರ್ಕಾರದ ಅನುದಾನದಲ್ಲಿ ನಾನು ಮತ್ತೆ ಶಾಸಕನಾದೆ. ಕರ್ನಾಟಕ ರಾಜ್ಯದಲ್ಲಿ ನುಡಿದಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ. ಯಾವತ್ತೂ ದ್ವೇಷ ರಾಜಕಾರಣ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯನಾಗಿ, ಅಭಿಮಾನಿಯಾಗಿ ಶಾಖಾ ಮಠದ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ನೀಡುತ್ತೇನೆ' ಎಂದಿದ್ದಾರೆ. ಅಲ್ಲದೆ 'ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಅನುದಾನ, ಅಭಿವೃದ್ಧಿ ಯೋಜನೆ ಕಾರಣ ನಾನು ಮತ್ತೆ ಶಾಸಕನಾಗಿ ಆಯ್ಕೆಯಾದೆ. ಪಕ್ಷಾಂತರ ಮಾಡಿದ್ದರೂ ಸಿದ್ದರಾಮಯ್ಯರನ್ನ ಮರೆತಿಲ್ಲ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+