ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 08 : ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ 'ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಈ ಯೋಜನೆಗಾಗಿ ಸರ್ಕಾರ ಈಗಾಗಲೇ 10 ಕೋಟಿ ರೂ.ಗಳನ್ನು ಮೀಸಲಾಗಿಟ್ಟಿದೆ.

ಮಂಗಳವಾರ ಬೆಳಗ್ಗೆ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರು 'ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ'ಗೆ ಚಾಲನೆ ನೀಡಿದರು. ಅಪಘಾತಕ್ಕೊಳಗಾದ ಗಾಯಾಳುಗಳಿಗೆ 48 ಗಂಟೆಗಳ ಅವಧಿಗೆ 25 ಸಾವಿರ ರೂ.ವರೆಗೆ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. [ಊರಿಗೆ ಊರೇ ಕಣ್ಣು ದಾನ ಮಾಡಲು ಹರೀಶನೇ ಸ್ಫೂರ್ತಿ]

harish

ನೆಲಮಂಗಲ ಬಳಿ ಕೆಲವು ದಿನಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾದರೂ ನೇತ್ರದಾನ ಮಾಡಿದ ತುಮಕೂರು ಮೂಲದ ಹರೀಶ್ ಅವರ ಸ್ಮರಣಾರ್ಥ ಸಾಂತ್ವನ ಯೋಜನೆಗೆ ಅವರ ಹೆಸರಿಡಲಾಗಿದೆ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

ಈ ಯೋಜನೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಕರ್ನಾಟಕ ಸರ್ಕಾರ ಎರಡು ಸಹಾಯವಾಣಿಯನ್ನು ಆರಂಭಿಸಿದೆ. 108 ಮತ್ತು 104 ನಂಬರ್‌ಗಳಿಗೆ ಕರೆ ಮಾಡುವ ಮೂಲಕ ಜನರು ಯೋಜನೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. [ಮೃತ ಹರೀಶ್ ಕುಟುಂಬಕ್ಕೆ ಜಮೀರ್ ಹಣ ಸಹಾಯ]

ಈ ಯೋಜನೆಗಾಗಿ ಕರ್ನಾಟಕ ಸರ್ಕಾರ ಈಗಾಗಲೇ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಬಜೆಟ್‌ನಲ್ಲಿ 75 ಕೋಟಿ ರೂ.ಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಈ ಯೋಜನೆ ಅನುಷ್ಟಾನಕ್ಕಾಗಿ ಸರ್ಕಾರ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಲಿದೆ.

siddaramaiah

ಸರ್ಕಾರಿ ಅಥವ ಖಾಸಗಿ ಯಾವುದೇ ಆಸ್ಪತ್ರೆಯಾದರೂ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ. ಗಾಯಾಳುಗಳಿಗೆ ನೀಡಿದ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಪಾವತಿ ಮಾಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah has launched Mukhyamantri Santwana Harish Yojana in Vidhana Soudha, Bengaluru on March 8, 2016. Under the scheme road accident victims will be given free treatment for the first 48 hours at any hospital.
Please Wait while comments are loading...